ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಸೆ. 21: ರಾಜ್ಯದೆಲ್ಲೆಡೆ ನಡೆಯುತ್ತಿರುವ ಭ್ರಷ್ಟಾಚಾರವನ್ನು ಮಟ್ಟಹಾಕುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆ,ತಾಲ್ಲೂಕು ಮಟ್ಟದಲ್ಲಿ ಘಟಕಗಳನ್ನು ಪ್ರಾರಂಭಿಸುತ್ತಿದೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು ಕುಣಿಗಲ್ ರಮೇಶ್ ತಿಳಿಸಿದರು.
ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಜಿಲ್ಲಾ ಘಟಕದ ಉದ್ಘಾಟನೆ ಸಮಾರಂಭ ಹಾಗೂ ನೂತನ ಪದಾಧಿಕಾರಿಗಳ ನೇಮಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದೆಲ್ಲೆಡೆ ನಡೆಯುತ್ತಿರುವ ಭ್ರಷ್ಟಾಚಾರವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆ,ತಾಲ್ಲೂಕು ಮಟ್ಟದಲ್ಲಿ ಘಟಕಗಳನ್ನು ಪ್ರಾರಂಭಿಸುತಿದ್ದು ಪ್ರಾಮಾಣಿಕ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸೂಕ್ತ ಜವಾಬ್ದಾರಿಗಳನ್ನು ನೀಡಿ ಜಾಗೃತಿ ಗೊಳಿಸುವುದರಿಂದಿಗೆ ಭ್ರಷ್ಟರ ವಿರುದ್ಧ ಸಮರಕ್ಕೆ ಮುಂದಾಗುತಿದ್ದೇವೆ. 2018 ರಲ್ಲಿ ಸ್ಥಾಪಿಸಿದ ಸಂಘಟನೆ ರಾಜ್ಯಾದ್ಯಂತ ನೂರಾರು ಮಾಹಿತಿಹಕ್ಕು ಕಾರ್ಯಕರ್ತನ್ನು ಹೊಂದಿದ್ದು ಆಗಿಂದಾಗ್ಗೆ ಮಾಹಿತಿ ಹಕ್ಕಿನ ಜವಾಬ್ದಾರಿಯುತ ನಡೆಗಳ ಬಗ್ಗೆ ಮಾರ್ಗದರ್ಶನ ನೀಡುವುದರೊಂದಿಗೆ ಹಲವು ಹೋರಾಟಗಳನ್ನು ಹಮ್ಮಿಕೊಂಡು ಯಶಸ್ಸು ಕಂಡಿದ್ದೇವೆ, ಸರ್ಕಾರಕ್ಕೆ ಆಗುತ್ತಿರುವ ವಂಚನೆಗಳನ್ನು ಬಯಲು ಮಾಡಿ, ಕೋಟ್ಯಾಂತರ ಮೌಲ್ಯದ ಜಮೀನುಗಳನ್ನು ಸರ್ಕಾರದ ವಶಕ್ಕೆ ಕೊಡಿಸಿದ್ದೇವೆ ಎಂದರು.
ರಾಜ್ಯದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷದ ಯಾವುದೇ ರಾಜಕಾರಣಿ ಇರಲಿ ಯಾವುದೇ ಇಲಾಖೆಯ ಎಷ್ಟೇ ಪ್ರಭಾವಿ ಅಧಿಕಾರಿಗಳಿರಲಿ ಎದೆಗುಂದದೆ ಅವರ ವಿರುದ್ಧ ಹೋರಾಟ ದರಣಿ,ಸತ್ಯಾಗ್ರಹ, ಪ್ರತಿಭಟನೆ. ನಡೆಸಿ ಸಾಮಾನ್ಯರಿಗೆ ನ್ಯಾಯ ಒದಗಿಸಿದ್ದೇವೆ, ರಾಜ್ಯದ ಯಾವುದೇ ಮೂಲೆಯಲ್ಲಿ ನ್ಯಾಯ ಸಮ್ಮತವಾದ ಯಾವುದೇ ಸಮಸ್ಯೆಗಳ ಪರಿಹಾರ, ನೊಂದವರ ನರೆವಿಗೆ ಮುಂದಾಗುತ್ತಿರುವ ಏಕೈಕ ಸಂಘಟನೆ ಎಂದು ಹೆಸರುಗಳಿಸಿದ್ದೇ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರನ್ನಾಗಿ ಎಸ್.ಯರ್ರಿಸ್ವಾಮಿ, ಉಪಾಧ್ಯಕ್ಷರನ್ನಾಗಿ ಮನೋಹರ, ಪ್ರದೀಪ್, ಮಂಜುನಾಥ್, ಪ್ರದಾನ ಕಾರ್ಯದರ್ಶಿಯಾಗಿ ನಾಗರಾಜ ಎಂ ಚಿಕ್ಕಪನಹಳ್ಳಿಸಹ ಕಾರ್ಯದರ್ಶಿ ಡಿ ಮಹತೇಶ್, ಕಾನೂನು ಸಲಹೆಗಾರರು ರಾಘವೇಂದ್ರ ಅವರನ್ನ ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ.ಹೆಚ್.ವೆಂಕಟೇಶ್ ಬೋವಿ, ಪ್ರದಾನ ಕಾರ್ಯದರ್ಶಿ ರುದ್ರೇಶ್, ಕಾರ್ಯದರ್ಶಿ ಚಂದ್ರಶೇಖರ್. ಡಿ.ಉಪ್ಪಾರ್, ತುಮಕೂರು ಜಿಲ್ಲಾ ಅಧ್ಯಕ್ಷೆ ಲಕ್ಷ್ಮೀ ಅಮರೇಶ್,ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಮೂರ್ತಿ ಉಪಸ್ಥಿತರಿದ್ದರು.











