ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 20 : ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅವರು ಇಂದು ಹಿರಿಯೂರು ತಾಲ್ಲೂಕಿನ ಆದಿರಾಳು ಗ್ರಾಮದ ಗೋಕಟ್ಟೆ ಬಳಿ ಭದ್ರೆಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ಚಿತ್ರದುರ್ಗ ಬ್ರಾಂಚ್ ಕೆನಾಲ್ ಮೂಲಕ ಪ್ರಾಯೋಗಿಕವಾಗಿ ಹರಿಸಲಾಗುತ್ತಿರುವ ಭದ್ರಾ ನೀರಿನಲ್ಲಿ, ಕೆನಾಲ್ನ 87.740 ಕಿ.ಮೀ ಬಳಿಯ ಔಟ್ ಲೆಟ್ ನಿಂದ ಹಿರಿಯೂರು ತಾಲ್ಲೂಕಿನ ಸೂರಗೊಂಡಹಳ್ಳಿ ಹಾಗೂ ತವಂದ ಎರದಕಟ್ಟೆ ಕೆರೆಗಳಿಗೆ ನೈಸರ್ಗಿಕ ಹಳ್ಳದ ಮೂಲಕವೇ ಭದ್ರಾ ನೀರು ಹರಿಸಲಾಗುತ್ತಿದೆ.
ಒಟ್ಟು 17 ಕಿ.ಮೀ. ಉದ್ದದ ನೈಸರ್ಗಿಕ ಹಳ್ಳದ ಹಾದಿಯಲ್ಲಿರುವ ಕೆ.ಸಿ.ರೊಪ್ಪ, ಮಲ್ಲರಸನಹಟ್ಟಿ, ಆದಿರಾಳು, ಸಿ.ಎನ್.ಮಾಳಿಗೆ, ಹುಳಿ ತೊಟ್ಟಿಲು, ಸೂರಗೊಂಡಹಳ್ಳಿ ಹಾಗೂ ತವಂದಿ ಎರದಕಟ್ಟೆ ವರೆಗಿನ ಸುಮಾರು 6 ಚೆಕ್ ಡ್ಯಾಮ್, 3 ಗೋ ಕಟ್ಟೆಗಳು ಹಾಗೂ ಹಲವು ಎಕೆರಗಳು ಭದ್ರಾ ನೀರಿಂದ ಭರ್ತಿಯಾಗಿಲಿವೆ.
ಇದೆ ವೇಳೆ ಸಚಿವ ಎನ್.ಚಲುವರಾಯಸ್ವಾಮಿ ಕೋವೇರಹಟ್ಟಿ ಬಳಿ ಭದ್ರಾ ಕೆನಾಲ್ ಕಾಮಗಾರಿ ವೀಕ್ಷಿಸಿದರು. ಈ ವೇಳೆ ವಿಶೇಶ್ವರ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹೆಚ್.ಸಿ.ರಮೇಂದ್ರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಜಿಲ್ಲಾಧಿಕಾರಿ ಎಸ್.ರಮ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ರವಿಶಂಕರ್, ಅಧೀಕ್ಷಕ ಇಂಜಿನಿಯರ್ ಹರೀಶ್ ಸೇರಿದಂತೆ ಮುಖಂಡರು ಉಪಸ್ಥಿರಿದ್ದರು.











