ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 20 : ನಗರದಲ್ಲಿ ಈ ಹಿಂದೆ ನಡೆದ ಈದ್ ಮಿಲಾದ್ ಮೆರವಣಿಗೆ ಸಮಯದಲ್ಲಿ ಗಾಂಧಿ ಸರ್ಕಲ್ ಹತ್ತಿರ ಮಿತಿ ಮೀರಿ ಶಬ್ದದೊಂದಿಗೆ ಎಂ.ಆರ್. ಡಿ.ಜೆಯನ್ನು ಏಕಾಏಕಿ ಮೆರವಣಿಗೆಯಲ್ಲಿ ತಂದು ಹಾಕಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿರುತ್ತದೆ.
ಎಂ.ಆರ್ ಡಿಜೆ ಮಾಲೀಕರನಾದ ಶಾರೂಕ್ ನಿಗೆ ಈದಮಿಲಾದ್ ಮೆರವಣಿಗೆಯಲ್ಲಿ ಪೊಲೀಸ್
ಇಲಾಖೆಯಿಂದ ಡಿಜೆ ಬಳಸಬಾರದೆಂದು ನೋಟೀಸ್ ನೀಡಿದ್ದರೂ ಸಹ ಈದ್ ಮಿಲಾದ್ ಮೆರವಣಿಗೆಯಲ್ಲಿ
ಅತಿಯಾದ ಶಬ್ದದೊಂದಿಗೆ ಡಿಜೆ ಸೌಂಡ್ ಸಿಸ್ಟಮ್ ನ್ನು ಹಾಕಿ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ
ಭಂಗ ಉಂಟಾಗುವ ರೀತಿಯಲ್ಲಿ ಉಪದ್ರವ ಉಂಟುಮಾಡಿದ ಡಿಜೆ ಮಾಲೀಕರ ಮೇಲೆ ಇಂದು ಹಿರಿಯೂರು
ನಗರ ಠಾಣೆಯ ಅಪರಾಧ ಸಂಖ್ಯೆ 234/2026 ರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಆರೋಪಿ ಪತ್ತೆ ಮತ್ತು ಬಳಕೆ ಮಾಡಿದ ಡಿಜೆ ವಶಪಡಿಸಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ.
ಸಾರ್ವಜನಿಕರಿಗೆ, ಕಾರ್ಯಕ್ರಮದ ಆಯೋಜಕರಿಗೆ ತಿಳಿಯಪಡಿಸುವುದೇನೆಂದರೆ ಅತಿಯಾದ ಕರ್ಕಶ ಶಬ್ದ ಮಾಡುವ ಡಿಜೆ ಬಳಕೆಯಿಂದ ವೃದ್ಧರಿಗೆ, ಶಾಲಾ ಮಕ್ಕಳಿಗೆ, ಹೃದಯ ಸಂಬಂಧಿ ರೋಗಿಗಳಿಗೆ ಮಹಿಳೆಯರಿಗೆ ಸಾಕಷ್ಟು ತೊಂದರೆಗಳು ಅಗುವ ಸಂಭವವಿರುತ್ತದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳಿಯ ಕಲಾವಿದರಿಂದ ನೃತ್ಯ, ವಾದ್ಯ, ಸಂಗೀತ ಹಾಗೂ ಕಲಾತಂಡಗಳೊಂದಿಗೆ
ಹಬ್ಬಹರಿದಿನಗಳನ್ನು ಆಚರಿಸಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಕೋರಲಾಗಿದೆ.











