Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಜಿಲ್ಲಾ ಮಟ್ಟದ ಕ್ರೀಡಾಕೂಟ: ಟೇಬಲ್ ಟೆನ್ನೀಸ್, ಚೆಸ್, ಟೆಕ್ವಾಂಡೋದಲ್ಲಿ ವಿದ್ಯಾ ವಿಕಾಸ ಶಾಲೆಗೆ ಪ್ರಶಸ್ತಿಗಳ ಗರಿ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 19 : ನಗರದ ಪ್ರತಿಷ್ಠಿತ ಶಾಲೆಯಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ರಾಜ್ಯ ಪಠ್ಯಕ್ರಮ ವಿಭಾಗದ ವಿದ್ಯಾರ್ಥಿಗಳು ದಿನಾಂಕ : 12.09.2026ರಂದು ಚಿತ್ರದುರ್ಗದಲ್ಲಿ ನಡೆದ 17 ವರ್ಷದೊಳಗಿನ ಜಿಲ್ಲಾ ಮಟ್ಟದ ಟೇಬಲ್ ಟೆನ್ನೀಸ್, ಚದುರಂಗ, ಟೆಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕ್ರ. ಸಂ. ವಿದ್ಯಾರ್ಥಿಯ ಹೆಸರು ತರಗತಿ ಸ್ಪರ್ಧೆ ಗಳಿಸಿದ ಸ್ಥಾನ
01 ವಿಕಾಸ್ ನಾಯಕ, ಕುಶಾಲ್ ನಾಯಕ, ನಿತೀಶ್ ಎನ್ ಎಸ್ 9ನೇ ತರಗತಿ ಟೇಬಲ್ ಟೆನ್ನೀಸ್ ಪ್ರಥಮ ಸ್ಥಾನ
02 ಕಿರಣ್ ಪಿ ಸಿ 8ನೇ ತರಗತಿ ಚದುರಂಗ ಪ್ರಥಮ ಸ್ಥಾನ
03 ಸಾಯಿ ಮೈತ್ರಿ ಎಲ್ ಎ 10ನೇ ತರಗತಿ ಚದುರಂಗ ದ್ವಿತೀಯ ಸ್ಥಾನ
04 ಜ್ಞಾನೇಶ್ವರಿ ಪಿ 8ನೇ ತರಗತಿ ಟೆಕ್ವಾಂಡೋ ಪ್ರಥಮ ಸ್ಥಾನ

 

ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿ ಪ್ರಥಮ, ದ್ವಿತೀಯ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಈ ಕ್ರೀಡಾಪಟುಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ್ ಕುಮಾರ್, ಸಂಸ್ಥೆಯ ನಿರ್ದೇಶಕರಾದ ಶ್ರೀ.ಎಸ್.ಎಂ ಪೃಥ್ವೀಶ್, ಶ್ರೀಮತಿ ಸುನಿತಾ.ಪಿ.ಸಿ, ಐಸಿಎಸ್‍ಇ ಪ್ರಾಚಾರ್ಯರಾದ, ಬೀನಾ ಎ ಜಾನ್ ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್.ಜಿ ಹಾಗೂ ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಿಸಿ ಅಭಿನಂದಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now