ಮಂಗಳೂರು.ಸೆಪ್ಟೆಂಬರ್.18 : ತುಳು ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ತುಳು ಭಾಷೆಯ ಐತಿಹಾಸಿಕತೆ, ಸಾಂಸ್ಕೃತಿಕ ಮಹತ್ವ ಹಾಗೂ ಕರಾವಳಿಯ ಜನರ ಬಹುದಿನಗಳ ಆಶಯವನ್ನು ಗೌರವಿಸಿ, ಮುಖ್ಯಮಂತ್ರಿ ಅವರ ನೇತೃತ್ವದ ಕರ್ನಾಟಕ ಸರ್ಕಾರ ತುಳುವನ್ನು ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಿದೆ. ಇದು ಕೇವಲ ಒಂದು ಭಾಷೆಗೆ ದೊರೆತ ಗೌರವವಲ್ಲ, ತುಳು ಭಾಷಿಕರ ಭಾವನೆ, ಸಂಸ್ಕೃತಿ ಮತ್ತು ಅಸ್ಮಿತೆಗೆ ದೊರೆತ ಐತಿಹಾಸಿಕ ಮಾನ್ಯತೆಯಾಗಿದೆ.
ತುಳು ಭಾಷೆಯ ಶ್ರೀಮಂತ ಇತಿಹಾಸ, ಪ್ರಾಚೀನತೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪರಿಗಣಿಸಿ ಈ ಮಹತ್ವದ ತೀರ್ಮಾನಕ್ಕೆ ಬರಲಾಗಿದೆ. ಈ ನಿರ್ಧಾರವು ಕೇವಲ ಭಾಷೆಗೆ ಸೀಮಿತವಾದ ಸ್ಥಾನಮಾನವಾಗಿರದೆ, ಕರಾವಳಿ ಜನರ ಅಸ್ಮಿತೆ, ಸಂಸ್ಕೃತಿ ಮತ್ತು ಸ್ವಾಭಿಮಾನಕ್ಕೆ ಸಂದ ಐತಿಹಾಸಿಕ ಗೌರವವಾಗಿದೆ ಎಂದು ಬಣ್ಣಿಸಲಾಗಿದೆ.
ತುಳು ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆ
ತುಳು ಭಾಷೆಯ ಐತಿಹಾಸಿಕತೆ, ಸಾಂಸ್ಕೃತಿಕ ಮಹತ್ವ ಹಾಗೂ ಕರಾವಳಿಯ ಜನರ ಬಹುದಿನಗಳ ಆಶಯವನ್ನು ಗೌರವಿಸಿ, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರ ನೇತೃತ್ವದ ಕರ್ನಾಟಕ ಸರ್ಕಾರ ತುಳುವನ್ನು ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಿದೆ. ಇದು ಕೇವಲ ಒಂದು ಭಾಷೆಗೆ… pic.twitter.com/gyqJrPLweI
— CM of Karnataka (@CMofKarnataka) September 18, 2026












