ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 18 : ಪ್ರತಿಯೊಬ್ಬರಲ್ಲಿ ಕೆಲವು ಹವ್ಯಾಸಗಳು ನೆಲೆಯೂರಿರುತ್ತವೆ. ಬದುಕಿನ ಏಕತಾನತೆಯನ್ನು ದೂರಮಾಡಲು ಇದು ಚೇತೋಹಾರಿ. ಎಂದು ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿಗಳಾದ ಟಿ.ಎನ್.ಅಶೋಕ್ ರವರು ಅಭಿಪ್ರಾಯ ಪಟ್ಟರು.
ಅವರು ನಗರದ ಆರ್ಯವೈಶ್ಯ ಸಂಘ, ಆರ್ಯವೈಶ್ಯ ಸಾಹಿತ್ಯ ಪರಿಷತ್ತು ಹಾಗು ವಾಸವಿ ಮಹಿಳಾ ಸಂಘದ ಆಶ್ರಯ ದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಾ ಹವ್ಯಾಸಗಳ ರಾಜ-ನಾಣ್ಯಸಂಗ್ರಹಣೆ
ಎಂದರು. ಸಂಗ್ರಹಣೆ ಹಾಗು ಪ್ರದರ್ಶನವು ಖುಷಿ ನೀಡುತ್ತದೆ. ಜೊತೆಗೆ ಐತಿಹಾಸಿಕ ಪರಂಪರೆ ಸಾರುತ್ತವೆ ಎಂದರು.
ಸಮಾರಂಭಕ್ಕೆ ವಿದ್ಯುಕ್ತವಾಗಿ ದೀಪ ಬೆಳಗಿಸಿ ಚಾಲನೆ ನೀಡಿದ ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಎಲ್.ಇ.ಶ್ರೀನಿವಾಸ ಬಾಬು ರವರು ಹವ್ಯಾಸಗಳ ನಂಟು ಬಾಳು ಬೆಳಗಿಸುವ ದಿವ್ಯಜ್ಯೋತಿ ಎಂದರು.
ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಅಂಚೆ ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಜನ ಭಾಗವಹಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಟಿ.ವಿ.ಸುರೇಶಗುಪ್ತ ರರು ಚಿಕ್ಕದಾಗಿ ಚೊಕ್ಕವಾಗಿ ಪದಮಿತಿಯೊಳಗೆ ಅರ್ಥಬಂಧದ ರಚನೆಯು ಸವಾಲಿನ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ವೈಶ್ಯಕುಲಭಾಸ್ಕರ ಆತ್ಮೂರಿ ಲಕ್ಷ್ಮಿನರಸಿಂಹ ಸೋಮಯಾಜಿಗಳವರ ಜೀವನದ ಸಂಕ್ಷಿಪ್ತ ಸಾರವನ್ನು ಸತ್ಯಪ್ರಭಾ ವಸಂತಕುಮಾರ್ ರವರು ಕಟ್ಟಿಕೊಟ್ಟರು ಸಮಾರಂಭದ ಅಧ್ಯಕ್ಷತೆ ವಹಿಸಿ,ರಾಜ್ಯಮಟ್ಟದ ಸ್ಪರ್ಧೆಯು ಯಶಸ್ವಿಯಾಗಲು ಕಸರಣಕರ್ತರಾದವರಿಗೆ ಅಭಿನಂದಿಸಿದ ಸುಜಾತ ಪ್ರಾಣೇಶ್ ರವರು ಹೆಚ್ಚು ಹೆಚ್ಚು ಸಾಹಿತ್ಯರಚನೆಯಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು.
ಮೊದಲಿಗೆ ಸೌಮ್ಯ ಹರೀಶ್ ರವರು ಪ್ರಾರ್ಥಿಸಿ, ಲಕ್ಷ್ಮೀ ರಮಾಕಾಂತರವರ ಸ್ವಾಗತ ಚೈತ್ರ ಅಜಯ್ ರವರ ವಂದನಾರ್ಪಣೆಯೊಂದಿಗೆ ಸಂಪನ್ನಗೊಂಡ ಕಾರ್ಯಕ್ರಮದಲ್ಲಿ ಸ್ಪರ್ಧಾವಿಜೇತರ ಪಟ್ಟಿಯನ್ನು ಜೆ.ಆರ್.ಶಿವಕುಮಾರ್ ಪ್ರಕಟಿಸಿದರು.
ವರಲಕ್ಷ್ಮಿ ರತ್ನಾಕರ್ ಹಾಗು ನಂದಿನಿ ಸುಹಾಸ್ ರವರು ಕಾರ್ಯಕ್ರಮ ನಿರ್ವಹಿಸಿದರು.
ರಾಜ್ಯ ಮಟ್ಟದ ಅಂಚೆ ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆಯ ಫಲಿತಾಂಶ :
ಪ್ರಥಮ ಬಹುಮಾನ: ಸರಸ್ವತಿ ಲಕ್ಷ್ಮಣಶೆಟ್ಟಿ,ಮೈಸೂರು
ಕಥೆ: AI ಮತ್ತು ಮನುಷ್ಯ
ದ್ವಿತೀಯ ಬಹುಮಾನ: ಆಶಾ ಅಶೋಕ್,ಕುಶಾಲನಗರ
ಕಥೆ: ಜಗದ ನಿಯಮ
ತೃತೀಯ ಬಹುಮಾನ: ವೆಂಕಟೇಶ ಜನಾದ್ರಿ,ಕಲಬುರಗಿ
ಕಥೆ: ಮಾನವೀಯತೆಯ ಸ್ಪರ್ಶ
ಸಮಾಧಾನಕರ ಬಹುಮಾನ: ಮಂಜೇಶ್,ತುರುವೇಕೆರೆ
ಕಥೆ: ಪತಿ ದೇವರ ಅ ಸಹಾಯ
ಪಂಕಜ ಗೋಪಾಲ್,ಚಿಕ್ಕಮಗಳೂರು
ಕಥೆ: ಉಡುಗೊರೆ
ಗಾಯಿತ್ರಿ ಮಂಜುನಾಥ್,ಕುಣಿಗಲ್, ಕಥೆ: ಆಸರೆ,
ರಶ್ಮಿ ರಾಘವೇಂದ್ರ,ಅರಸೀಕೆರೆ, ಕಥೆ: ಕಡಲ ತೀರದಲ್ಲಿ ಒಡಲ ಪ್ರೀತಿ,
ಎಂ ಜೆ ನಾಗಲಕ್ಷ್ಮಿ,ಚಿಕ್ಕಮಗಳೂರು, ಕಥೆ: ಚಾಣಾಕ್ಷೆ, ಅನ್ನಪೂರ್ಣ ಹೇಮಚಂದ್ರ,ಬೆಂಗಳೂರು, ಕಥೆ: ದೇವರು
ಶೈಲಾ ಬಾಲಸುಬ್ರಮಣ್ಯ,ಕೊಣನೂರು, ಕಥೆ: ಸೀಟು ಖಾಲಿ, ರಾಜ್ಯದಾದ್ಯಂತ ಒಂದು ನೂರಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ ಅವರೆಲ್ಲರಿಗೂ ಅಭಿನಂದನೆಗಳು.
ವರದಿ ಮತ್ತು ಫೋಟೋ ಕೃಪೆ :
-ಪ್ರೊ. ಟಿ.ವಿ. ಸುರೇಶಗುಪ್ತ
ಮೊ : 9945461834














