Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ : ಸಂಸ್ಕರಿಸಿ ಶುದ್ದೀಕರಿಸಿದ ನೀರನ್ನು ಗಿಡ, ಮರಗಳಿಗೆ ಮರುಬಳಕೆ ಮಾಡಿ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

---Advertisement---

ದಾವಣಗೆರೆ.ಸೆಪ್ಟೆಂಬರ್ 10 : ಶುದ್ಧೀಕರಿಸಿ ಸಂಸ್ಕರಿಸಿದ ತ್ಯಾಜ್ಯ (ಖ.ಔ) ನೀರನ್ನು ಮನೆ ಬಳಕೆಗೆ ಮರುಬಳಕೆ ಮಾಡಬಾರದು. ಈ ನೀರನ್ನು ಕೇವಲ ಗಿಡ-ಮರಗಳು, ತೋಟಗಳು ಹಾಗೂ ನರ್ಸರಿಗಳಿಗೆ ಮಾತ್ರ ಬಳಸಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸಾರ್ವಜನಿಕರಿಗೆ ಮನವಿ ಮಾಡಿದರು.

ಗುರುವಾರ(ಸೆ.10) ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೆಲ-ಜಲ ಪರಿಸರವನ್ನು ವೃದ್ದಿಸಲು ಹಾಗೂ ಜಿಲ್ಲೆಯ ಕೆರೆಗಳ ಸಮರ್ಪಕ ನಿರ್ವಹಣೆ ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು

ಜಿಲ್ಲೆಯಲ್ಲಿ ನೀರಿನ ಅಭಾವವಿಲ್ಲ, ಟ್ಯಾಂಕರ್‍ಗಳ ಅಗತ್ಯವಿಲ್ಲ, ಜಿಲ್ಲೆಯ ಜಗಳೂರು ತಾಲ್ಲೂಕನ್ನು ಹೊರೆತುಪಡಿಸಿದರೆ ಇನ್ನೂಳಿದ ಐದೂ ತಾಲೂಕುಗಳಲ್ಲಿ ನೀರಿನ ಮರುಬಳಕೆ ಅಥವಾ ಟ್ಯಾಂಕರ್ ಸರಬರಾಜು ಮಾಡುವಷ್ಟು ತೀವ್ರ ಅಭಾವವಿಲ್ಲ. ಅನಗತ್ಯವಾಗಿ ಟ್ಯಾಂಕರ್ ನೀರನ್ನು ಬಳಸುವುದು ಜಿಲ್ಲಾಡಳಿತಕ್ಕೆ ಶೋಭೆಯಲ್ಲ. ಮೇವಿನ ಅಭಾವವಿದ್ದಲ್ಲಿ ನೆರೆ ಜಿಲ್ಲೆಗಳಿಗೆ ಮೇವು ಪೂರೈಸಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದರು.

ಶುದ್ಧೀಕರಿಸಿದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ದನಕರುಗಳು ಹಾಗೂ ಜಾನುವಾರುಗಳಿಗೆ ಕುಡಿಯಲು ನೀಡುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ. ಇಂತಹ ನೀರಿನಲ್ಲಿ ಪೆÇ್ಲೀರೈಡ್ ಹಾಗೂ ಅಪಾಯಕಾರಿ ಲೋಹಗಳು ಇರುವುದರಿಂದ, ಇವುಗಳನ್ನು ಕುಡಿದ ಜಾನುವಾರುಗಳ ಹಾಲನ್ನು ಸೇವಿಸುವುದರಿಂದ ಸಾರ್ವಜನಿಕರಿಗೆ ಕ್ಯಾನ್ಸರ್ ನಂತಹ ಮಾರಕ ರೋಗಗಳು ಬರುವ ಅಪಾಯವಿದೆ. ಆದ್ದರಿಂದ ಜಾನುವಾರುಗಳಿಗೆ ಸಂಸ್ಕರಿಸಿದ ನೀರು ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಈ ನೀರನ್ನು ಬೋರ್‍ವೆಲ್‍ಗಳಿಗೆ ಮರುಪೂರಣ ಮಾಡಬಾರದು. ಅಗತ್ಯವಿದ್ದರೆ ಬೋರ್‍ವೆಲ್‍ಗಳಿಂದ ಕನಿಷ್ಠ 200 ಮೀಟರ್ ದೂರದಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸಬಹುದು.

ಕೆರೆಗಳ ನಿರ್ಮಾಣ ಹಾಗೂ ಭೂಸ್ವಾಧೀನ ಪ್ರಕ್ರಿಯೆ: ಮುದ್ದಯ್ಯನ ಕೆರೆಯನ್ನು ಅಭಿವೃದ್ದಿ ಗೊಳಿಸಬೇಕು. ಹೊಸ ಕೆರೆಗಳ ನಿರ್ಮಾಣಕ್ಕೆ ತಾಲೂಕುವಾರು ಜಾಗ ಗುರುತಿಸುವ ಕೆಲಸ ವೇಗವಾಗಿ ನಡೆಯುತ್ತಿದೆ. ಚನ್ನಗಿರಿಯಲ್ಲಿ ಸುಮಾರು 40 ಎಕರೆ ಪ್ರದೇಶದಲ್ಲಿ ಬೃಹತ್ ಕೆರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ.

 ಜಗಳೂರು, ಹರಿಹರ ಹಾಗೂ ಹೊನ್ನಾಳಿ ಭಾಗಗಳಲ್ಲಿ ಕೆರೆ ನಿರ್ಮಾಣ ಮತ್ತು ಭೂಸ್ವಾಧೀನದ ಕುರಿತು ತಹಸೀಲ್ದಾರ್ ಹಾಗೂ ಜಿಲ್ಲಾಡಳಿತದ ಹಂತದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

ಶಾಲಾ ಕೊಠಡಿಗಳು ಹಾಗೂ ಶೌಚಾಲಯಗಳ ನಿರ್ಮಾಣ ವಿಬಿಜಿ ರಾಮ್ ಜಿ ಹಾಗೂ ಅಜ್ಜಿಹಳ್ಳಿ ಗ್ರಾಮಗಳಲ್ಲಿನ ಶಾಲೆಗಳಿಗೆ ಹೆಚ್ಚುವರಿ ಕೊಠಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು  ಈ ಶಾಲೆಗಳಿಗೆ ಅತ್ಯಾಧುನಿಕ ಕಟ್ಟಡ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು.

ರಸ್ತೆ ಕಾಮಗಾರಿ: ಪಿಡಬ್ಲ್ಯೂಡಿ ಹಾಗೂ ನಗರಾಡಳಿತ ವತಿಯಿಂದ ಚರಂಡಿ ಹಾಗೂ ಕಾಲುವೆಗಳ ಹೂಳೆತ್ತುವ ಕಾಮಗಾರಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಕುಂಬಳೂರು ಮಲೇಬೆನ್ನೂರು ಹಾಗೂ ಕೋಮಾರನಹಳ್ಳಿ ದೇವಸ್ಥಾನದವರೆಗಿನ ರಸ್ತೆಗಳಲ್ಲಿ ನೀರಿನ ಸೋರಿಕೆ  ಸಮಸ್ಯೆ ಹೆಚ್ಚಾಗಿರುವುದರಿಂದ, ಕೇವಲ ಟಾರ್ ರಸ್ತೆ ಮಾಡುವುದರಿಂದ ಶಾಶ್ವತ ಪರಿಹಾರ ಸಿಗುವುದಿಲ್ಲ. ಈ ಭಾಗಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಸೂಕ್ತ ಚರಂಡಿ ವ್ಯವಸ್ಥೆಯನ್ನು ಕಡ್ಡಾಯವಾಗಿ ನಿರ್ಮಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ನೀರು ಪೆÇೀಲು ತಡೆ ಹಾಗೂ ಜಾಗೃತಿ ಅಭಿಯಾನ: ಬೆಳಗಿನ ಸಮಯದಲ್ಲಿ ಪೈಪ್‍ಗಳ ಮೂಲಕ ನೀರು ಪೆÇೀಲು ಮಾಡುವುದನ್ನು ತಡೆಯಲು ಬೆಳಗಿನ ಜಾವ 5 ರಿಂದ 10 ಗಂಟೆಯವರೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಟ್ಟುನಿಟ್ಟಿನ ಗಸ್ತು ನಡೆಸಬೇಕು. ಸಾರ್ವಜನಿಕರಲ್ಲಿ ನೀರು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಅರಿವು ಕಾರ್ಯಕ್ರಮ ಹಾಗೂ ಮಾಧ್ಯಮಗಳ ಮೂಲಕ ಮಾಹಿತಿ ತಲುಪಿಸುವ ಕೆಲಸವಾಗಬೇಕು. ವಾಹನಗಳನ್ನು ತೊಳೆಯಲು ಪೈಪ್‍ಗಳ ಬದಲು ಬಕೆಟ್‍ಗಳನ್ನು ಬಳಸುವಂತೆ ಸಾರ್ವಜನಿಕರ ಮನಪರಿವರ್ತನೆ ಮಾಡಬೇಕು.

ಕೊಳವೆಬಾವಿ ಮರುಪೂರಣ ಮತ್ತು ಮಳೆನೀರು ಕೊಯ್ಲು ಬೋರ್‍ವೆಲ್‍ಗಳನ್ನು ಬರೀ ಕೊರೆಯುವುದಕ್ಕೆ ಆದ್ಯತೆ ನೀಡದೆ, ಅಸ್ತಿತ್ವದಲ್ಲಿರುವ ಬೋರ್‍ವೆಲ್‍ಗಳನ್ನು ಪುನರ್ ನಿರ್ಮಾಣ ಮಾಡಲು ಮತ್ತು ಮಳೆನೀರು ಕೊಯ್ಲು ಒತ್ತು ನೀಡಬೇಕು.

ಹೊಸ ಬಡಾವಣೆಗಳನ್ನು ನಿರ್ಮಿಸುವಾಗ ಬಡಾವಣೆಯ ಡೆವಲಪರ್‍ಗಳೊಂದಿಗೆ ಕಡ್ಡಾಯವಾಗಿ ಸಭೆ ನಡೆಸಿ, ಸೋಲಾರ್ ಹಾಗೂ ಮಳೆನೀರು ಕೊಯ್ಲು ಅಳವಡಿಕೆಯನ್ನು ಕಡ್ಡಾಯಗೊಳಿಸಬೇಕು.

ಕೆರೆ ಅಭಿವೃದ್ಧಿ ಪ್ರಸ್ತಾವನೆ: ಅರಣ್ಯ ಹಾಗೂ ಕಂದಾಯ ಇಲಾಖೆಗೆ ಒಳಪಡುವ ವಿವಿಧ ಸರ್ವೇ ಸಂಖ್ಯೆಗಳಲ್ಲಿನ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಸ್ತಾವನೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಅಂತಿಮ ಅನುಮತಿಗೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆ: ಅರಣ್ಯ ವ್ಯಾಪ್ತಿಯಲ್ಲಿ ಕೆರೆ ಕಾಮಗಾರಿಗಳನ್ನು ಕೈಗೊಳ್ಳುವಾಗ ವನ್ಯಜೀವಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ವನ್ಯಜೀವಿಗಳ ಚಲನವಲನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಎಚ್ಚರಿಕೆ ಫಲಕಗಳನ್ನು ಅಳವಡಿಸಲು ಹಾಗೂ ರಕ್ಷಣಾ ಉಪಕರಣಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು.

ಕೆರೆಗಳ ಹೂಳೆತ್ತುವ ಕಾಮಗಾರಿ: ಸಣ್ಣ ನೀರಾವರಿ ಹಾಗೂ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ಹೂಳೆತ್ತಲು ನಿಯಮಾನುಸಾರ ಅನುಮತಿ ನೀಡಲಾಗುವುದು.  ಹೂಳೆತ್ತುವ ನೆಪದಲ್ಲಿ ಇಟ್ಟಿಗೆ ಭಟ್ಟಿಗಳಿಗೆ ಅಕ್ರಮವಾಗಿ ಮಣ್ಣು ಸಾಗಿಸುವುದು ಅಥವಾ ಲಾರಿಗಳ ಮೂಲಕ ವೈಜ್ಞಾನಿಕವಲ್ಲದ ರೀತಿಯಲ್ಲಿ ಮಣ್ಣು ಎತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೇವಲ ಟ್ರ್ಯಾಕ್ಟರ್‍ಗಳ ಮೂಲಕ ರೈತರು ತಮ್ಮ ಜಮೀನುಗಳಿಗೆ ಮಣ್ಣು ಒಯ್ಯಲು ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಯಿತು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಅರಣ್ಯ ಅಧಿಕಾರಿ ಅನುಪಮಾ.ಹೆಚ್,  ರಾಜ್ಯ ರೈತರ ಸಂಘದ ಮುಖಂಡರಾದ ರವಿಕುಮಾರ್ ಬಲ್ಲೂರು, ಹಾಗೂ ಬಸವನಗೌಡ, ಪ್ರತಾಪ್,ಭಾಗವಹಿಸಿದ್ದರು.

Join WhatsApp

Join Now

Join Telegram

Join Now