ಬೆಂಗಳೂರು.ಸೆಪ್ಟೆಂಬರ್. 10 : ಉಪಮುಖ್ಯಮಂತ್ರಿ, ಕಂದಾಯ ಹಾಗೂ ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು ಇಂದಿಗೆ 100 ದಿನಗಳು ಪೂರೈಸಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುತ್ತಾ, ಜನಪರ ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸಿದ ಅರ್ಥಪೂರ್ಣ ಪಯಣ ಇದಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಾನು ಅಧಿಕಾರವನ್ನು ಅವಕಾಶವಾಗಿ ಅಲ್ಲ, ಜನಸೇವೆಯ ಜವಾಬ್ದಾರಿಯಾಗಿ ಸ್ವೀಕರಿಸಿ, ಪ್ರತಿಯೊಂದು ನಿರ್ಧಾರದಲ್ಲೂ ಜನಹಿತವನ್ನೇ ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದೇನೆ.ಕಂದಾಯ ಇಲಾಖೆಯಲ್ಲಿ ಜನಸಾಮಾನ್ಯರಿಗೆ ತ್ವರಿತ, ಪಾರದರ್ಶಕ ಮತ್ತು ಸುಲಭ ಸೇವೆ ದೊರೆಯುವಂತೆ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸುವ ಪ್ರಯತ್ನ ಮಾಡಿದ್ದೇವೆ. ಭೂ ದಾಖಲೆಗಳು, ಅರ್ಜಿಗಳ ವಿಲೇವಾರಿ ಸೇರಿದಂತೆ ಜನರು ನೇರವಾಗಿ ಎದುರಿಸುವ ಸಮಸ್ಯೆಗಳಿಗೆ ಆದ್ಯತೆ ನೀಡಿ, ಆಡಳಿತವನ್ನು ಇನ್ನಷ್ಟು ಜನಸ್ನೇಹಿಯಾಗಿಸುವತ್ತ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ, ಕಂದಾಯ ಹಾಗೂ ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು ಇಂದಿಗೆ 100 ದಿನಗಳು ಪೂರೈಸಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುತ್ತಾ, ಜನಪರ ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸಿದ ಅರ್ಥಪೂರ್ಣ ಪಯಣ ಇದಾಗಿದೆ.
ನಾನು ಅಧಿಕಾರವನ್ನು ಅವಕಾಶವಾಗಿ ಅಲ್ಲ, ಜನಸೇವೆಯ… pic.twitter.com/3SDX3SVkLv
— Dr. G Parameshwara (@DrParameshwara) September 10, 2026
ಕ್ರೀಡಾ ಕ್ಷೇತ್ರದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ, ಉತ್ತಮ ಮೂಲಸೌಕರ್ಯ, ಕ್ರೀಡಾಪಟುಗಳಿಗೆ ಅಗತ್ಯ ಪ್ರೋತ್ಸಾಹ ಮತ್ತು ರಾಜ್ಯವನ್ನು ಕ್ರೀಡಾ ಸಾಧನೆಯಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ಹಲವು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಯುವಕರ ಸಾಮರ್ಥ್ಯಕ್ಕೆ ವೇದಿಕೆ ಕಲ್ಪಿಸಿ, ಕ್ರೀಡೆಯನ್ನು ಆರೋಗ್ಯ, ಶಿಸ್ತು ಮತ್ತು ಸಾಧನೆಯ ಸಂಸ್ಕೃತಿಯನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ ಎಂದರು.
ಅಭಿವೃದ್ಧಿ ಎಂದರೆ ಕಾಮಗಾರಿಯಲ್ಲ, ಜನರ ಬದುಕಿನಲ್ಲಿ ಕಾಣುವ ಬದಲಾವಣೆ. ನೂತನ ಕಾರ್ಯಕ್ರಮಗಳು, ಮೂಲಸೌಕರ್ಯ, ಯುವಕರಿಗೆ ಉದ್ಯೋಗ, ರೈತರ ಮತ್ತು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಸುವುದು ಹೀಗೆ ಪ್ರತಿಯೊಂದು ವಿಷಯದಲ್ಲೂ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸುವ ಸಂಕಲ್ಪ ನಮ್ಮದು ಎಂದಿದ್ದಾರೆ.
ನನ್ನ ಮೇಲೆ ವಿಶ್ವಾಸವಿಟ್ಟು ಜನಸೇವೆಗೆ ಅವಕಾಶ ನೀಡಿದ ರಾಜ್ಯದ ಜನತೆಗೆ ಧನ್ಯವಾದಗಳು. ನಿಮ್ಮ ವಿಶ್ವಾಸವೇ ನನ್ನ ಶಕ್ತಿ, ನಿಮ್ಮ ನಿರೀಕ್ಷೆಗಳೇ ನನ್ನ ಮುಂದಿನ ಹೆಜ್ಜೆಗಳಿಗೆ ದಿಕ್ಕು. ಅಭಿವೃದ್ಧಿಯ ಪರ್ವಕ್ಕೆ ಮುನ್ನುಡಿ ಬರೆದಾಗಿದೆ; ಈ ಹಾದಿಯಲ್ಲಿ ನಾವು–ನೀವು ಜೊತೆಯಾಗಿ ಸಾಗೋಣ ಎಂದು ಹೇಳಿದ್ದಾರೆ.












