Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ಅಮೆಜಾನ್ ಕಾರ್ಗೋ ವಿಮಾನ ಹೊತ್ತಿ ಉರಿದು 5 ಮಂದಿ ಸಜೀವ ದಹನ

---Advertisement---

ಮಿಯಾಮಿ: ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಭೀಕರ ಅಪಘಾತ ಸಂಭವಿಸಿದ್ದು, ‘21 ಏರ್’ ಸಂಸ್ಥೆಯು ನಿರ್ವಹಿಸುತ್ತಿದ್ದ ‘ಅಮೆಜಾನ್ ಪ್ರೈಮ್ ಏರ್’ ಸರಕು ಸಾಗಣೆ (ಕಾರ್ಗೋ) ವಿಮಾನ ರನ್‌ವೇ ಮೀರಿ ಚಲಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಸಾವನ್ನಪ್ಪಿದ್ದಾರೆ.

ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಿಂದ ಹೊರಟಿದ್ದ ಬೋಯಿಂಗ್ 767-300 ಮಾದರಿಯ ಪ್ರೈಮ್ ಏರ್ ಫ್ಲೈಟ್ 7598 ವಿಮಾನವು, ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ಮಿಯಾಮಿಯಲ್ಲಿ ಲ್ಯಾಂಡಿಂಗ್ ಆಗುವ ವೇಳೆ ನಿಯಂತ್ರಣ ತಪ್ಪಿದೆ. ರನ್‌ವೇಯನ್ನು ಮೀರಿ ಮುಂದೆ ನುಗ್ಗಿದ ವಿಮಾನವು ಅಲ್ಲಿ ನಿಂತಿದ್ದ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾಗಿದೆ. ಅಪಘಾತದ ಸ್ಥಳದಿಂದ ದಟ್ಟ ಹೊಗೆ ಆಕಾಶದೆತ್ತರಕ್ಕೆ ವ್ಯಾಪಿಸಿದ್ದು, ವಿಮಾನ ನಿಲ್ದಾಣದ ಎಲ್ಲಾ ರನ್‌ವೇ ಹಾಗೂ ಟ್ಯಾಕ್ಸಿವೇಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಎಲ್ಲಾ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.

ಘಟನಾ ಸ್ಥಳಕ್ಕೆ ಮಿಯಾಮಿ-ಡೇಡ್ ಅಗ್ನಿಶಾಮಕ ಮತ್ತು ರಕ್ಷಣಾ ದಳದ 60ಕ್ಕೂ ಹೆಚ್ಚು ತಂಡಗಳು ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿವೆ.

ಅಮೆಜಾನ್ ವಕ್ತಾರೆ ಕೆಲ್ಲಿ ನಾಂಟೆಲ್ ಅವರು ಈ ದುರಂತವನ್ನು ದೃಢಪಡಿಸಿದ್ದು, 21 ಏರ್ ನಿರ್ವಹಿಸುತ್ತಿದ್ದ ಅಮೆಜಾನ್ ಏರ್ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತನಿಖೆಗೆ ಆದೇಶಿಸಿದ್ದು, ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಕೂಡ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದೆ.

 

Join WhatsApp

Join Now

Join Telegram

Join Now