Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಜಿಲ್ಲಾ ಯಾದವ ಗೊಲ್ಲರ ಸಂಘದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.05 : ರಂಗಯ್ಯನಬಾಗಿಲು ಬಳಿಯಿರುವ ಜಿಲ್ಲಾ ಯಾದವ ಗೊಲ್ಲರ ಸಂಘದಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು.

ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಸಿ.ಮಹಲಿಂಗಪ್ಪ ಶ್ರೀಕೃಷ್ಣನ ಜನ್ಮವೇ ಒಂದು ಹೋರಾಟವೆಂದು ಪುರಾಣದಲ್ಲಿ ಹೇಳಿದೆ. ಕಂಸನ ಗರ್ವ ಮುರಿಯುವುದಕ್ಕಾಗಿಯೇ ಶ್ರೀಕೃಷ್ಣ ಜನ್ಮತಾಳಿದ. ಮಹಾಭಾರತದಲ್ಲಿನ ಸಾರಾಂಶವನ್ನು ವಿಶ್ವಕ್ಕೆ ಕೊಟ್ಟ ಶ್ರೀಕೃಷ್ಣನ ಲೀಲೆ ದೊಡ್ಡದು ಎಂದು ಹೇಳಿದರು.

ಯಾದವ ಗೊಲ್ಲರ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್‍ಕುಮಾರ್‍ಯಾದವ್, ಉಪಾಧ್ಯಕ್ಷ ಬಿ.ಆರ್.ರಾಮಲಿಂಗಯಾದವ್, ಖಜಾಂಚಿ ಬೂದಿಹಳ್ಳಿ ರಾಜಣ್ಣ, ಜಯಮ್ಮ ಮಹಲಿಂಗಪ್ಪ, ನಿರ್ದೇಶಕರುಗಳಾದ ಬಿ.ಚಿಕ್ಕಣ್ಣ, ಅಶೋಕ್, ವೀರೇಶ್, ಆಕರ್ಶ್‍ಯಾದವ್, ತಮ್ಮಣ್ಣ, ಬಿ.ಡಿ.ಬಸವರಾಜ್, ಪ್ರಕಾಶ್, ರವಿ ಕೆ, ಈರಣ್ಣ, ಪರಮೇಶ್ ಹೆಚ್, ಪ್ರಕಾಶ್ ಬೆನ್ನೂರು, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಆನಂದ್, ಮುಖಂಡರುಗಳಾದ ತಿಮ್ಮಣ್ಣ ಮೇಷ್ಟ್ರು, ಶಿವಣ್ಣ, ಪರಮೇಶ್ವರಪ್ಪ, ಲಕ್ಷ್ಮಿನಾರಾಯಣ, ಕೃಷ್ಣಪ್ಪ ಇನ್ನು ಅನೇಕರು ಶ್ರೀಕೃಷ್ಣ ಜಯಂತಿಯಲ್ಲಿ ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now