Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಸೆ. 6ರಂದು ಖಾಸಗಿ ದಂತವೈದ್ಯರ ಸಂಘದಿಂದ ‘ವೈದ್ಯ-ನ್ಯಾಯಿಕ ಅಂಶಗಳ’ ವಿಶೇಷ ಕಾರ್ಯಾಗಾರ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 05 : ನಗರದ ಆರ್.ಟಿ.ಓ. ಕಚೇರಿ ಬಳಿಯಿರುವ ಐಶ್ವರ್ಯ ಫೋರ್ಟ್ ಸಭಾಂಗಣದಲ್ಲಿ ಚಿತ್ರದುರ್ಗ ಜಿಲ್ಲಾ ಖಾಸಗಿ ದಂತ ವೈದ್ಯರ ಸಂಘದ (ರಿ) ವತಿಯಿಂದ ದಂತವೈದ್ಯರ ಮಾಸಿಕ ಸಭೆ ಹಾಗೂ ವೈದ್ಯ- ನ್ಯಾಯಿಕ ಅಂಶಗಳ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಸೆಪ್ಟಂಬರ್ 6ನೇ ತಾರೀಕಿನಂದು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಚಿತ್ರದುರ್ಗದ ಸರಸ್ವತಿ ಕಾನೂನು ಮಹಾವಿದ್ಯಾಲಯದ ಡಾ. ಎನ್.ಡಿ. ಗೌಡ ಹಾಗೂ ಖ್ಯಾತ ವಕೀಲರಾದ ಪ್ರಸನ್ನಕುಮಾರ್ ರೆಡ್ಡಿ ಇವರಿಂದ ಉಪನ್ಯಾಸ ಕಾರ್ಯಕ್ರಮ ಹಾಗೂ ಕಾರ್ಯಗಾರ ನಡೆಯಲಿದೆ. ಉಪನ್ಯಾಸದಲ್ಲಿ ವೈದ್ಯ ಕ್ಷೇತ್ರದಲ್ಲಿ ವೈದ್ಯರಿಗೆ ಇರಬೇಕಾದ
‘ ಕಾನೂನಿನ ಜವಾಬ್ದಾರಿ, ಹೊಣೆಗಾರಿಕೆಗಳು ಹಾಗೂ ಸವಾಲುಗಳು’ ಹಾಗೂ ದಂತ ವೈದ್ಯರಿಗೆ ಸೇವಾ ಕ್ಷೇತ್ರದಲ್ಲಿ ಆಗಬಹುದಾದ ಹಾಗೂ ಸಂಭವನೀಯ ಕಾನೂನು ತೊಡಕುಗಳು ಹಾಗೂ ಅದರ ನಿವಾರಣೋಪಾಯಗಳ ಬಗ್ಗೆ ವಿಶೇಷ ಕಾರ್ಯಕ್ರಮ ದಂತ ವೈದ್ಯರಿಗೆ ನಡೆಯಲಿದೆ. ಕಾರ್ಯಕ್ರಮ ಸಂಜೆ ಆರರಿಂದ ಒಂಬತ್ತು ಗಂಟೆ ವರೆಗೂ ಜರುಗಲಿದೆ.

ಸಂಘದ ಜಿಲ್ಲಾಧ್ಯಕ್ಷರಾದ ಡಾ.ಮಹಾಂತೇಶ್ ಗಿಡ್ಡೋಬನಹಳ್ಳಿ ಇವರು ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಎಲ್ಲಾ ದಂತ ವೈದ್ಯರು ತಪ್ಪದೆ ಭಾಗವಹಿಸುವಂತೆ ಕಾರ್ಯದರ್ಶಿಗಳಾದ ಡಾ.ಸುನಿಲ್ ವಡವಡಗಿ ಕೋರಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now