ಬೆಂಗಳೂರು: ಆರೋಗ್ಯ ಇಲಾಖೆ ಕಳೆದ 24 ಗಂಟೆಯಲ್ಲಿ ಕೊರೊನಾ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಅದರಲ್ಲಿ 202 ಜನಕ್ಕೆ ಹೊಸದಾಗಿ ಸೋಂಕು ಹರಡಿದೆ.
ಕಳೆದ 24 ಗಂಟೆಯಲ್ಲಿ 15086 ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್, 23304 RTPCR ಟೆಸ್ಟ್ ಸೇರಿದಂತೆ ಒಟ್ಟು 38390 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 202 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ 150 ಮಂದಿ ಪತ್ತೆಯಾಗಿದ್ದಾರೆ.
ಇನ್ನು ಕೊರೋನಾದಿಂದ ಒಟ್ಟು 971 ಜನ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಕಳೆದ 24 ಗಂಟೆಯಲ್ಲಿ ಕೊರೊನಾದಿಂದ 7 ಜನ ಸಾವನ್ನಪ್ಪಿದ್ದಾರೆ.