ಕೊಡಗು: ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆಯಾದ ಬಳಿಕ, ಸೋಷಿಯಲ್ ಮೀಡಿಯಾದಲ್ಲಿ ಹರ್ಷನ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಬೇಕು, ಈಶ್ಚರಪ್ಪ ಈ ಬಾರಿ ಅವರನ್ನೇ ಬೆಂಬಲಿಸಬೇಕು ಎಂಬ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದನ್ನ ಬೆಂಬಲಿಸಿ ಕೆಲವರು ಆ ರೀತಿಯ ಪೋಸ್ಟ್ ಗಳನ್ನ ಶೇರ್ ಕೂಡ ಮಾಡ್ತಾ ಇದ್ರು. ಆದ್ರೆ ಇದೀಗ ಅದೇ ವಿಚಾರವನ್ನ ಮಾಜಿ ಸಚಿವ ಸಿ ಎಂ ಇಬ್ರಾಹಿಂ ಪ್ರಸ್ತಾಪಿಸಿದ್ದಾರೆ.
ಸುಂಟಿಕೊಪ್ಪದಲ್ಲಿ ಮಾತನಾಡಿದ ಅವರು, ಸಚಿವ ಈಶ್ವರಪ್ಪ ತಮ್ಮ ಟಿಕೆಟ್ ತ್ಯಜಿಸಿ ಮೃತ ಹರ್ಷನ ಕುಟುಂಬಕ್ಕೆ ನೀಡಬೇಕು. ಹರ್ಷನ ತಂಗಿಗೆ ಎಂಎಲ್ಎ ಟಿಕೆಟ್ ನೀಡಿದರೆ ನಾವೂ ಸ್ಪರ್ಧಿಸುವುದಿಲ್ಲ. ಆಕೆಯನ್ನ ಅವಿರೋಧವಾಗಿ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸುತ್ತೇವೆ. ಹಾಗೇ ಮಾಜಿ ಸಿಎಂ ಯಡಿಯೂರಪ್ಪ ಅವರ ಮಗ ರಾಘವೇಂದ್ರ ಕೂಡ ಎಂಪಿ ಸ್ಥಾನ ತ್ಯಜಿಸಿ ಹರ್ಷನ ತಾಯಿಗೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕಂಡವರ ಮಕ್ಕಳನ್ನ ಬಾವಿಗೆ ತಳ್ಳಿ ಆಳ ನೋಡುವವರು ಬಿಜೆಪಿ. 26 ವರ್ಷದ ತೇಜಸ್ವಿ ಸೂರ್ಯ ಪಾರ್ಲಿಮೆಂಟ್ ಗೆ ಹೋದ. ಆದ್ರೆ ಅದೇ ವಯಸ್ಸಿನ ಹರ್ಷ ಸ್ಮಶಾನಕ್ಕೆ ಹೋದ. ಮೃತರ ಕುಟಯಂಬಕ್ಕೆ ಟಿಕೆಟ್ ನೀಡಿದರೆ ಹಿಂದೂ ಸಂಸ್ಕೃತಿಗೆ ನಿಜವಾದ ಅರ್ಥ ಸಿಕ್ಕಂತಾಗುತ್ತದೆ ಎಂದಿದ್ದಾರೆ.