ಬೆಂಗಳೂರು.ಸೆಪ್ಟೆಂಬರ್.03: ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವು 2026-27ನೇ ಸಾಲಿನ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಕ್ಕಾಗಿ ವೀರಶೈವ-ಲಿಂಗಾಯತ ಸಮುದಾಯ (ಪ್ರವರ್ಗ-3ಬಿ) ಹಾಗೂ ಅದರ ಉಪಜಾತಿಗಳಿಗೆ ಸೇರಿದ ಅರ್ಹ ಫಲಾನುಭವಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಲು 2026ರ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.
ಶೈಕ್ಷಣಿಕ ಸಾಲ ಯೋಜನೆಗಳು:

ಬಸವ ಬೆಳಕು ಯೋಜನೆ (ಹೊಸ ವಿದ್ಯಾರ್ಥಿಗಳು): ಕುಟುಂಬದ ವಾರ್ಷಿಕ ಆದಾಯ ₹3.50 ಲಕ್ಷ ಮಿತಿಯೊಳಗಿದ್ದು, ಸಿಇಟಿ/ನೀಟ್ ಮೂಲಕ ಸರ್ಕಾರಿ ಕೋಟಾದಡಿ ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ 28 ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಾರ್ಷಿಕ ಗರಿಷ್ಠ ₹1.00 ಲಕ್ಷದಂತೆ ಕೋರ್ಸ್ ಅವಧಿಗೆ ₹4.00 ಲಕ್ಷದಿಂದ ₹5.00 ಲಕ್ಷದವರೆಗೆ ಶೇಕಡಾ 2ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ.
ಬಸವ ಬೆಳಕು (ನವೀಕರಣ): ಈ ಹಿಂದೆ ಸಾಲ ಪಡೆದ ವಿದ್ಯಾರ್ಥಿಗಳು ವ್ಯಾಸಂಗ ದೃಢೀಕರಣ ಹಾಗೂ ಅಂಕಪಟ್ಟಿಯೊಂದಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸಬಹುದು.
ವಿದೇಶ ವಿದ್ಯಾಭ್ಯಾಸ ಯೋಜನೆ: ಕೌಟುಂಬಿಕ ಆದಾಯ ₹15.00 ಲಕ್ಷ ಮಿತಿಯೊಳಗಿದ್ದು, ಕ್ಯೂಎಸ್ ವರ್ಲ್ಡ್ ರ್ಯಾಂಕಿಂಗ್ನ 1000 ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ (ಪೋಸ್ಟ್ ಡಾಕ್ಟರಲ್, ಪಿಎಚ್ಡಿ, ಮಾಸ್ಟರ್ ಡಿಗ್ರಿ) ಪಡೆಯಲು ವಾರ್ಷಿಕ ಗರಿಷ್ಠ ₹25.00 ಲಕ್ಷ ಹಾಗೂ 3 ವರ್ಷಗಳ ಅವಧಿಗೆ ಒಟ್ಟು ಗರಿಷ್ಠ ₹50.00 ಲಕ್ಷ ಸಾಲವನ್ನು ಶೇ. 2ರ ಬಡ್ಡಿದರದಲ್ಲಿ ಪಡೆಯಬಹುದು.
ಗಂಗಾ ಕಲ್ಯಾಣ ಯೋಜನೆ:
ಗ್ರಾಮಾಂತರ ಪ್ರದೇಶದವರಿಗೆ ₹98,000 ಹಾಗೂ ಪಟ್ಟಣ ಪ್ರದೇಶದವರಿಗೆ ₹1,20,000 ವಾರ್ಷಿಕ ಆದಾಯ ಮಿತಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಆಯ್ದ ಜಿಲ್ಲೆಗಳಿಗೆ ಘಟಕ ವೆಚ್ಚ ₹4,75,000 ಹಾಗೂ ಉಳಿದ 25 ಜಿಲ್ಲೆಗಳಿಗೆ ₹3,75,000 ನಿಗದಿಪಡಿಸಲಾಗಿದೆ (ಶೇ. 4ರ ಬಡ್ಡಿದರದಲ್ಲಿ ₹50,000 ಸಾಲ ಒಳಗೊಂಡಿದೆ).
ಕಾಯಕಕಿರಣ ಯೋಜನೆ:
ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ₹1,00,000 ಘಟಕ ವೆಚ್ಚಕ್ಕೆ ₹20,000 ಸಹಾಯಧನ ಹಾಗೂ ₹80,000 ಸಾಲ, ಮತ್ತು ₹2,00,000 ಘಟಕ ವೆಚ್ಚಕ್ಕೆ ₹30,000 ಸಹಾಯಧನ ಹಾಗೂ ₹1,70,000 ಸಾಲವನ್ನು ಶೇ. 4ರ ಬಡ್ಡಿದರದಲ್ಲಿ ಒದಗಿಸಲಾಗುತ್ತದೆ.
ಸ್ವಾವಲಂಬಿ ಸಾರಥಿ ಯೋಜನೆ:
ನಿರುದ್ಯೋಗಿ ಯುವಜನರು ಸ್ವಯಂ ಉದ್ಯೋಗಕ್ಕಾಗಿ ನಾಲ್ಕು ಚಕ್ರದ ಸರಕು ಸಾಗಣೆ ವಾಹನ (ಹಳದಿ ಬೋರ್ಡ್) ಖರೀದಿಸಲು, ಬ್ಯಾಂಕ್ ಸಾಲದ ಮೊತ್ತಕ್ಕೆ ಶೇ. 50ರಷ್ಟು ಅಥವಾ ಗರಿಷ್ಠ ₹3.00 ಲಕ್ಷಗಳವರೆಗೆ ಸಹಾಯಧನ ನೀಡಲಾಗುವುದು. (ವಯೋಮಿತಿ: 21 ರಿಂದ 45 ವರ್ಷ).
ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ:
18ರಿಂದ 25 ವರ್ಷ ವಯಸ್ಸಿನ 10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಅಥವಾ ಇಂಜಿನಿಯರಿಂಗ್ ಪೂರ್ಣಗೊಳಿಸಿದ ಯುವಜನತೆಗೆ ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ತರಬೇತಿ ನೀಡಲಾಗುತ್ತದೆ. (ಕುಟುಂಬದ ವಾರ್ಷಿಕ ಆದಾಯ ₹8.00 ಲಕ್ಷ ಮೀರಬಾರದು. ಅರ್ಜಿ ಸಲ್ಲಿಸಲು ಜಾಲತಾಣ: https://www.kaushalkar.com).
ಪ್ರಮುಖ ಸೂಚನೆಗಳು ಮತ್ತು ಅರ್ಜಿ ಸಲ್ಲಿಕೆ ವಿಧಾನ
ಅರ್ಜಿದಾರರ ಆಧಾರ್ ಕಾರ್ಡ್ಗೆ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು.
ಅರ್ಹ ಫಲಾನುಭವಿಗಳು ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ನಾಗರಿಕ ಸೇವಾ ಕೇಂದ್ರಗಳ ಮೂಲಕ ‘ಸೇವಾಸಿಂಧು’ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕು.
ಒಂದು ಕುಟುಂಬದಿಂದ ಒಬ್ಬ ಸದಸ್ಯರು ಮಾತ್ರ ಯಾವುದಾದರೂ ಒಂದು ಯೋಜನೆಯ ಲಾಭ ಪಡೆಯಲು ಅರ್ಹರು.
ಈ ಹಿಂದೆ ನಿಗಮದ ಯಾವುದೇ ಯೋಜನೆಯಲ್ಲಿ ಸೌಲಭ್ಯ ಪಡೆದವರು ಅಥವಾ ಅವರ ಕುಟುಂಬದವರು ಮರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. 2024-25 ಹಾಗೂ 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗದವರು ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ಹೆಚ್ಚಿನ ವಿವರಗಳಿಗಾಗಿ ನಿಗಮದ ಅಧಿಕೃತ ವೆಬ್ಸೈಟ್ https://kvldcl.karnataka.gov.in ಅಥವಾ ಸಹಾಯವಾಣಿ ಸಂಖ್ಯೆ 080 22865522 / 9900012351 / 9900012352
















