ವಾಹನ ಚಾಲನೆ ಮಾಡುವ ಪ್ರತಿಯೊಬ್ಬರಿಗೂ ಡ್ರೈವಿಂಗ್ ಲೈಸೆನ್ಸ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ದಂಡ ವಿಧಿಸಲಾಗುತ್ತದೆ. ಆದರೆ ನಿಮ್ಮ ಮೂಲ ಚಾಲನಾ ಪರವಾನಗಿ ಕಳೆದುಹೋಗಿದ್ದರೆ ಅಥವಾ ಹಾನಿಗೊಳಗಾಗಿದ್ದರೆ ಆತಂಕಪಡುವ ಅಗತ್ಯವಿಲ್ಲ. ನಿಗದಿತ ದಾಖಲೆಗಳನ್ನು ಸಲ್ಲಿಸಿ ಡುಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು.
ಡ್ರೈವಿಂಗ್ ಲೈಸೆನ್ಸ್ ಕಳೆದುಹೋದರೆ ಏನು ಮಾಡಬೇಕು?
ಮೂಲ ಲೈಸೆನ್ಸ್ ಕಳೆದುಹೋದ ಸಂದರ್ಭದಲ್ಲಿ ಮೊದಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಅದರ ಪ್ರತಿಯನ್ನು ಪಡೆದುಕೊಳ್ಳಬೇಕು. ಈ ದಾಖಲೆಯನ್ನು ಡುಪ್ಲಿಕೇಟ್ ಲೈಸೆನ್ಸ್‌ಗಾಗಿ ಸಲ್ಲಿಸುವ ಅರ್ಜಿಯೊಂದಿಗೆ ನೀಡಬೇಕಾಗುತ್ತದೆ. ಲೈಸೆನ್ಸ್ ಹಾನಿಗೊಳಗಾಗಿದ್ದರೆ ಹಳೆಯ ಮೂಲ ಲೈಸೆನ್ಸ್‌ನ್ನು ದಾಖಲೆಯಾಗಿ ಸಲ್ಲಿಸಬಹುದು.

ಆನ್‌ಲೈನ್‌ನಲ್ಲಿ ಡುಪ್ಲಿಕೇಟ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಪರಿವಾಹನ್ ಸೇವಾ ಅಧಿಕೃತ ವೆಬ್‌ಸೈಟ್‌ಗೆ ತೆರಳಿ ಕರ್ನಾಟಕ ರಾಜ್ಯವನ್ನು ಆಯ್ಕೆಮಾಡಿ.
ಹಂತ 2: ‘Driving Licence Related Services’ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ನಿಮ್ಮ DL ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
ಹಂತ 3: ಲೈಸೆನ್ಸ್ ಸೇವೆಗಳ ಪಟ್ಟಿಯಲ್ಲಿ ‘Apply for Duplicate DL’ ಆಯ್ಕೆಯನ್ನು ಆರಿಸಿ.
ಹಂತ 4: ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
ಹಂತ 5: ಲೈಸೆನ್ಸ್ ಹಾನಿಗೊಳಗಾಗಿದ್ದರೆ ಅದರ ಮೂಲ ಪ್ರತಿಯನ್ನು ಹಾಗೂ ಕಳೆದುಹೋಗಿದ್ದರೆ ಪೊಲೀಸ್ ದೂರಿನ ಅಗತ್ಯ ದಾಖಲೆಯನ್ನು ಅಪ್‌ಲೋಡ್ ಮಾಡಿ.
ಹಂತ 6: ನಿಗದಿತ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ, ಅರ್ಜಿಯ ರಸೀದಿಯನ್ನು ಡೌನ್‌ಲೋಡ್ ಮಾಡಿಕೊಂಡು ಇಟ್ಟುಕೊಳ್ಳಿ.
ಹಂತ 7: ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಗದಿತ ಅವಧಿಯಲ್ಲಿ ಡುಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ದೊರೆಯುತ್ತದೆ.
ವಾಹನ ಚಲಾಯಿಸುವಾಗ ಮಾನ್ಯ ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಡ್ಡಾಯ. ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದು ಕಾನೂನುಬಾಹಿರವಾಗಿದ್ದು, ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತದೆ.
ಗಮನಿಸಿ: ಡುಪ್ಲಿಕೇಟ್ ಲೈಸೆನ್ಸ್‌ಗೆ ಬೇಕಾಗುವ ದಾಖಲೆಗಳು, ಶುಲ್ಕ ಹಾಗೂ ವಿತರಿಸುವ ಅವಧಿ ರಾಜ್ಯ ಮತ್ತು ಪ್ರಸ್ತುತ ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರ ಬದಲಾಗಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಪರಿವಾಹನ್ ಸೇವಾ ಪೋರ್ಟಲ್‌ನಲ್ಲಿ ವಿವರಗಳನ್ನು ಪರಿಶೀಲಿಸುವುದು ಉತ್ತಮ.










