Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೊಳಲ್ಕೆರೆ | ಹೊಂಡ ಒತ್ತುವರಿ ತೆರವಿಗೆ ಪಂಪಾಪುರ ಗ್ರಾಮಸ್ಥರ ಮನವಿ

---Advertisement---

ಸುದ್ದಿಒನ್, ಹೊಳಲ್ಕೆರೆ, ಆಗಸ್ಟ್‌, 31 : ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಹೋಬಳಿ ಪಂಪಾಪುರ ಗ್ರಾಮದಲ್ಲಿರುವ ಹೊಂಡವನ್ನು ಒತ್ತುವರಿ ಮಾಡಿರುವುದನ್ನು ಕೂಡಲೇ ತೆರವುಗೊಳಿಸಬೇಕೆಂದು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಹೊಳಲ್ಕೆರೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ಅಧಿಕಾರಿಗಳು ಒತ್ತುವರಿಯನ್ನು ತೆರವು ಮಾಡಬೇಕು ಎಂದು ಮನವಿ ಸಲ್ಲಿಸಿದರು. ಪಂಪಾಪುರ ಗ್ರಾಮದಲ್ಲಿರುವ ಹೊಂಡವನ್ನು ಗೌರಮ್ಮ ಒತ್ತುವರಿ ಮಾಡಿ ಬೋರ್‌ವೆಲ್, ಡಬಲ್ ಕೇಬಲ್, ಡಬಲ್ ಮೋಟಾರ್, ಡಬಲ್ಸ್ ಸ್ಟಾರ್ಟ್ ಇವುಗಳನ್ನು ಇವರ ಜಮೀನುಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಪಾಲೇಶಣ್ಣ , ಮೂರ್ತಪ್ಪ, ಕೆ ಒ ಸಿದ್ದಪ್ಪ ಇವರುಗಳು ಸಹ ಹೊಂಡವನ್ನು ಒತ್ತುವರಿ ಮಾಡಿ ಕೊಂಡಿರುತ್ತಾರೆ. ಆದ್ದರಿಂದ ಊರಿನ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಆಗಿರುವುದರಿಂದ ಈ ವಿಚಾರವನ್ನು ಸರಿಯಾಗಿ ಪರೀಶೀಲಿಸಿ ಗ್ರಾಮಕ್ಕೆ ಮೀಸಲಿರಿಸಿದ ಹೊಂಡವನ್ನು ಬಂದೋಬಸ್ತ್ ಮತ್ತು ತೆರವು ಮಾಡಿಸಿ ಒತ್ತುವರಿ ಆಗಿರುವ ಜಮೀನನ್ನು ಬಿಡಿಸಿ ಗ್ರಾಮಸ್ಥರುಗಳೆಲ್ಲರಿಗೂ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.

ಈ ವೇಳೆ ಕೆ. ಓಂಕಾರಪ್ಪ, ವೆಂಕಟೇಶ್, ಶಿವರಾಜ್, ಕರಿಯಪ್ಪ, ಕುಮಾರ್, ಬಿ. ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now