Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶ್ರೀ ಗುರುರಾಯರ 355 ನೇ ಆರಾಧನಾ ಮಹೋತ್ಸವ‌ : ಅದ್ದೂರಿಯಾಗಿ ನಡೆದ ರಥೋತ್ಸವ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಆ. 31 : ‌ಕಳೆದ ಮೂರು ದಿನಗಳಿಂದ ನಗರದ ಆನೆ ಬಾಗಿಲ ಬಳಿ ಇರುವ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಶಾಖಾಮಠವಾದ, ಚಿತ್ರದುರ್ಗದ ಶ್ರೀಗುರುರಾಯರ ಮಠದಲ್ಲಿ ಶ್ರೀ ಗುರುರಾಯರ 355ನೇ ಆರಾಧನಾ ಮಹೋತ್ಸವದ ಅತ್ಯಂತ ವೈಭವದಿಂದ ನಡೆಯಿತು.

ಭಕ್ತರ ಪಾಲಿಗೆ ರಾಯರು ಕಲಿಯುಗ ಕಾಮಧೇನು, ಕಲಿಯುಗ ಕಲ್ಪತರು’ ಎಂಬ ಬಿರುದುಗಳಿಂದ ಪ್ರಸಿದ್ಧರು. ಕಷ್ಟದಲ್ಲಿರುವವರಿಗೆ ಆಶ್ರಯ ನೀಡುವ ಗುರು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದಯಾಮಯ ಸಂತ ಎಂಬ ಭಾವನೆ ಈ ಹೆಸರುಗಳ ಹಿಂದೆ ಇದೆ. ರಾಯರ ಭಕ್ತಿಯ ವ್ಯಾಪ್ತಿ ಇಂದು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ರಾಯರ ಕರುಣೆ ಎಲ್ಲರಿಗೂ ಎಂಬ ಭಾವನೆ ಅವರ ಭಕ್ತಿಪರ ಪರಂಪರೆಯಲ್ಲಿ ಪ್ರಮುಖವಾಗಿದೆ. ಮಂತ್ರಾಲಯ ಇಂದು ಕೇವಲ ಧಾರ್ಮಿಕ ಕೇಂದ್ರವಲ್ಲದೆ, ವೈದಿಕ ಅಧ್ಯಯನ, ಅನ್ನದಾನ, ಗುರುಸೇವೆ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದೆ.

ಶ್ರೀ ಗುರುರಾಯರ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ರಾಯರ ಮಠದಲ್ಲಿ ಈ ಮೂರು ದಿನಗಳ ಕಾಲ ನಡೆಯುವ ಮಹೋತ್ಸವದಲ್ಲಿ ಬಳಸುವ ದವಸ ಧಾನ್ಯಗಳ ಪೂಜೆಯನ್ನು ನರೇವೇರಿಸಲಾಯಿತು. ಸಂಜೆ ಗೋಪೂಜೆ ಧ್ವಜಾರೋಹಣ ಧನ-ಧಾನ್ಯ ಲಕ್ಷ್ಮೀ ಪೂಜೆಯನ್ನು ನಡೆಸಲಾಯಿತು. ಪ್ರಾರಂಭ ದಿನದಂದು ಶ್ರೀಪರಾಭವನಾಮ ಸಂವತ್ಸರ, ಶ್ರಾವಣಮಾಸ, ಕೃಷ್ಣಪಕ್ಷ, ಪ್ರತಿಪದ. ಶ್ರೀಗುರುರಾಯರ 355ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆಯಾಗಿದ್ದು, ರಾಯರ ಬೃಂದಾವನವನ್ನು ವಿವಿಧ ರೀತಿಯ ಹೊ ಹಾಗೂ ಕೇದಿಗೆಯಿಂದ ಅಲಂಕಾರವನ್ನು ಮಾಡಲಾಗಿತ್ತು. ಎರಡನೆ ದಿನ ಶ್ರೀ ಗುರುರಾಯರ ಮಧ್ಯಾರಾಧನೆ ನಡೆದಿದ್ದು ಇದರಲ್ಲಿಯೂ ಸಹಾ ರಾಯರ ಬೃಂದಾವನ್ನು ವಿವಿಧ ರೀತಿಯ ಹೊಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ಮೂರು ದಿನಗಳ ಕಾಲ ಬೆಳಿಗ್ಗೆ ಸುಪ್ರಬಾತ ನಿರ್ಮಾಲ್ಯ ವಿಸರ್ಜನೆ ಅಷ್ಟೋತ್ತರದೊಂದಿಗೆ ಕ್ಷೇರಾಭೀಷೇಕ ಸಹಿತ ಪಂಚಾಮೃತ ಪಾದಪೂಜೆಯೊಂದಿಗೆ ಕನಕಾಭೀಷೇಕ ಅರ್ಚನೆ ಹಸ್ತೋದಕ ಕಾರ್ಯಕ್ರಮ ಬೆಳಿಗ್ಗೆ ಯರ್ಜುವೇದ ನಿತ್ಯ ನೂತನ ಉಪಾಕರ್ಮ, ಸತ್ಯನಾರಾಯಣ ಪೂಜೆ ನಡೆಸಲಾಯಿತು.

ಆರಾಧನೆಯ ಮೂರನೇ ದಿನವಾದ ಸೋಮವಾರ ಶ್ರೀ ಗುರುರಾಜರ ಉತ್ತರಾಧನೆಯ ಅಂಗವಾಗಿ ನಿರ್ಮಾಲ್ಯ ವಿಸರ್ಜನೆ ಅಷ್ಟೋತ್ತರದೊಂದಿಗೆ ಕ್ಷೇರಾಭೀಷೇಕ ಸಹಿತ ಪಂಚಾಮೃತ ನಡೆಯಿತು. ತದ ನಂತರ ರಾಯರ ಮಠದ ಮುಂಭಾಗದಲ್ಲಿ ಮಹಾರಥೋತ್ಸವವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ರಥವನ್ನು ವಿವಿಧ ರೀತಿಯ ಹೊಗಳಿಂದ ಅಲಂಕಾರವನ್ನು ಮಾಡಿ ಅದರಲ್ಲಿ ದೇವರನ್ನು ಪ್ರತಿಷ್ಠಾಪನೆ ಮಾಡಿ ಪೂಜೆಯನ್ನು ಸಲ್ಲಿಸಿ ಭಕ್ತಾಧಿಗಳ ಕೈಯಿಂದ ರಥವನ್ನು ಎಳೆಯಲಾಯಿತು. ಮಠದ ಆವರಣದಿಂದ ಅನೆ ಬಾಗಿಲು ಮೂಲಕ ಸಂತೇಪೇಟೆ ವೃತ್ತಕ್ಕೆ ತರಳಿ ಅಲ್ಲಿಂದ ಮರಳಿ ರಾಯರ ಮಠವನ್ನು ಸೇರಲಾಯಿತು. ದಾರಿಯುದ್ದಕ್ಕೂ ಭಕ್ತರು ರಾಯರ ನಾಮ ಸ್ಮರಣೆಯನ್ನು ಮಾಡುತ್ತಾ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು. ಈ ಸಮಯದಲ್ಲಿ ನಾಗಸ್ವರ ಚಂಡೆಯಂತಹ ಜಾನಪದ ವಾದ್ಯಗಳು ಮೆರವಣಿಗೆಗೆ ಸಾಥ್ ನೀಡಿದವು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರಾಧ ಜಿ.ಎಚ್.ತಿಪ್ಪಾರೆಡ್ಡಿ, ಜಿ.ಪಂ. ಮಾಜಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್, ಬಿಜೆಪಿ ಮುಖಂಡರಾದ ಡಾ.ಸಿದ್ಧಾರ್ಥ ಗುಂಡಾರ್ಪಿ, ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಪಿ.ಎಸ್.ಮಂಜುನಾಥ್, ಶ್ರೀ ಗುರುರಾಜ ಸೇವಾ ಸಂಘದ ಅಧ್ಯಕ್ಷರಾದ ಜಿ.ಎ.ದೀಪಾನಂದ ಶ್ರೀ ಹರಿವಾಯು ಗುರುಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಎಸ್.ಎನ್.ದ್ವಾರಕನಾಥ್ ಸೇರಿದಂತೆ ಆಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ಆಗಮಿಸಿತ್ತು, ರಾಯರ ಮಠಕ್ಕೆ ಆಗಮಿಸಿದ ಭಕ್ತಾಧಿಗಳು ವಿವಿಧ ಸೇವಾ ಕಾರ್ಯಕ್ರಮಗಳಲ್ಲಿ ಸೇವಾಭಾಗಿಗಳಾಗಿ, ರಾಯರ ದರ್ಶನವನ್ನು ಪಡೆದು ಪ್ರಸಾದ ಹಾಗೂ ಮಂತ್ರಾಕ್ಷತೆಗಳನ್ನು ಸ್ವೀಕರಿಸಿ, ಶ್ರೀಗುರುರಾಯರ ಕೃಪಾನುಗ್ರಹಕ್ಕೆ ಪಾತ್ರರಾಗಿದ್ದಾರೆ. ಇದ್ದಲ್ಲದೆ ಪ್ರತಿ ದಿನ ಸಂಜೆ ವಿವಿಧ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿ ಕೂಡಲಾಯಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now