Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರವಾದಿ ಮಹಮದ್ ಪೈಗಂಬರ್‌ ಜನ್ಮದಿನದ ಸಂಭ್ರಮ : ಚಿತ್ರದುರ್ಗದಲ್ಲಿ ಅದ್ಧೂರಿ ಈದ್‌ಮಿಲಾದ್‌ ಮೆರವಣಿಗೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : ಪ್ರವಾದಿ ಮಹಮದ್ ಪೈಗಂಬರ್‍ರವರ ಜನ್ಮದಿನದ ಪ್ರಯುಕ್ತ ಮುಸ್ಲಿಂ ಬಾಂಧವರಿಂದ ಈದ್‍ಮಿಲಾದ್ ಮೆರವಣಿಗೆ ನಗರದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು.

ಚಾಂದಿನಿಯನ್ನು ಹೊತ್ತು ಸಾಗಿದ ಎತ್ತಿನ ಗಾಡಿಯನ್ನು ಹೂವು, ಬಲೂನು ಹಾಗೂ ಬಣ್ಣ ಬಣ್ಣದ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ದ್ವಿಚಕ್ರ ವಾಹನ, ಆಟೋ, ಅಪೆಗಾಡಿ, ಕಾರುಗಳಲ್ಲಿ ದೊಡ್ಡ ದೊಡ್ಡ ಹಸಿರು ಭಾವುಟಗಳನ್ನಿಡಿದು ಮೆರವಣಿಗೆಯಲ್ಲಿ ಪ್ರವಾದಿ ಮಹಮದ್ ಪೈಗಂಬರ್, ಅಲ್ಲಾನನ್ನು ಪ್ರಾರ್ಥಿಸುತ್ತ ಸಾಗುತ್ತಿದ್ದರೆ ಇನ್ನು ಕೆಲವರು ಅಲ್ಲಲ್ಲಿ ಕುಣಿದು ಕುಪ್ಪಳಿಸುತ್ತಿದ್ದುದು ಕಂಡು ಬಂದಿತು.
ಬಡಾ ಮಕಾನ್‍ನಿಂದ ಹೊರಟ ಮೆರವಣಿಗೆ ಹೊರಪೇಟೆ, ಗೋಪಾಲಪುರ ರಸ್ತೆ, ಉಮರ್ ಸರ್ಕಲ್, ಅಂಜುಮಾನ್ ಸರ್ಕಲ್, ಎಸ್.ಬಿ.ಐ. ವೃತ್ತದ ಮೂಲಕ ಸಂಚರಿಸಿ ಗಾಂಧಿ ವೃತ್ತದಿಂದ ಆನೆಬಾಗಿಲು, ಕೋಳಿ ಬುರುಜನಟ್ಟಿಯಿಂದ ಅಗಸನಕಲ್‍ಗೆ ತೆರಳಿ ಮಕ್ಕಾ ಮಸೀದಿಯಲ್ಲಿ ಪ್ರಾರ್ಥಿಸಿ ನಂತರ ಗಾಂಧಿ ವೃತ್ತಕ್ಕೆ ಆಗಮಿಸಿ ಮೆರವಣಿಗೆಯನ್ನು ಅಂತ್ಯಗೊಳಿಸಿತು.

ಎಸ್.ಬಿ.ಎಂ.ಸರ್ಕಲ್‍ಗೆ ಮೆರವಣಿಗೆ ಆಗಮಿಸುತ್ತಿದ್ದಂತೆ ಪೊಲೀಸರು ವಾಹನಗಳ ಸಂಚಾರವನ್ನು ನಿಯಂತ್ರಿಸಿ ಮೆರವಣಿಗೆ ಸರಾಗವಾಗಿ ಸಾಗಲು ಅನುವು ಮಾಡಿಕೊಟ್ಟರು. ಅಲ್ಲಲ್ಲಿ ಬಂದ ಅಂಬ್ಯುಲೆನ್ಸ್ ವಾಹನಗಳಿಗೆ ಮೆರವಣಿಗೆಯಲ್ಲಿದ್ದವರು ಯಾವುದೇ ಅಡಚಣೆಯಾಗದಂತೆ ನೋಡಿಕೊಂಡರು.

ಜಾಮಿಯ ಮಸೀದಿ ಮುತುವಲ್ಲಿ ಸಾಧಿಕ್, ಕಾರ್ಯದರ್ಶಿ ಮುಹಿಬ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಎಂ.ಸಿ.ಓ.ಬಾಬು, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಹೆಚ್.ಶಬ್ಬೀರ್‍ಭಾಷಾ, ಸೈಯದ್ ಅಲ್ಲಾಭಕ್ಷಿ, ಬಾಬು, ಸೈಯದ್ ಇಸ್ಮಾಯಿಲ್, ಎ.ಜಾಕಿರ್‍ಹುಸೇನ್ ಸೇರಿದಂತೆ ಮುಸ್ಲಿಂ ಧರ್ಮಗುರುಗಳು, ಪಕೀರಿಗಳು, ಮದರಸಾದ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿದ್ದ ಬಹುತೇಕರು ಶ್ವೇತವಸ್ತ್ರಧಾರಿಗಳಾಗಿದ್ದರು. ಇನ್ನು ಕೆಲವರು ತಲೆಗೆ ಕಪ್ಪು ಟೋಪಿ ಹಾಗೂ ಕೊರಳಲ್ಲಿ ಬಿಳಿ ಶಾಲುಗಳನ್ನು ಧರಿಸಿದ್ದರು.
ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now