Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜೆನ್‌ಝಿ ಯುವಕರ ಖರ್ಚಿನ ಸ್ಟೈಲ್ ಹೇಗಿದೆ ಗೊತ್ತಾ? ಅಧ್ಯಯನದಲ್ಲಿ ಅಚ್ಚರಿ ಮಾಹಿತಿ

---Advertisement---

ನವದೆಹಲಿ: ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಜೆನ್‌ಝಿ (Gen Z) ಯುವ ಸಮೂಹದ ಬಗ್ಗೆ ಚರ್ಚೆ ಹೆಚ್ಚಾಗಿದೆ. ಜೆನ್‌ಝಿ ಯುವಕರು ಎಂದರೆ ದುಬಾರಿ ಮೊಬೈಲ್, ಗ್ಯಾಜೆಟ್‌ಗಳು, ಪ್ರವಾಸ, ಪಾರ್ಟಿ ಮತ್ತು ಮನರಂಜನೆಗೆ ಹೆಚ್ಚು ಹಣ ಖರ್ಚು ಮಾಡುತ್ತಾರೆ ಎಂಬ ಸಾಮಾನ್ಯ ಅಭಿಪ್ರಾಯವಿದೆ. ಆದರೆ ಅಧ್ಯಯನವೊಂದು ಈ ಕಲ್ಪನೆಗೆ ವಿರುದ್ಧವಾದ ಮಾಹಿತಿಯನ್ನು ಹೊರಹಾಕಿದೆ.

SalarySe ನಡೆಸಿರುವ ಅಧ್ಯಯನದ ಪ್ರಕಾರ, ಜೆನ್‌ಝಿ ಯುವಕರು ತಮ್ಮ ಹಣವನ್ನು ಮನರಂಜನೆಗಿಂತ ದಿನನಿತ್ಯದ ಅಗತ್ಯಗಳು, ಬಿಲ್‌ಗಳು, EMI, ವಿಮೆ ಮತ್ತು ಹೂಡಿಕೆಗಳಿಗೆ ಹೆಚ್ಚು ಬಳಸುತ್ತಿದ್ದಾರೆ.

ಅಧ್ಯಯನದ ಪ್ರಕಾರ, ಜೆನ್‌ಝಿ ಯುವಕರ ಮಾಸಿಕ ಖರ್ಚಿನಲ್ಲಿ ಯುಟಿಲಿಟಿ ಬಿಲ್‌ಗಳು ಮತ್ತು ಆನ್‌ಲೈನ್ ಸೇವೆಗಳಿಗೆ ಶೇ.20.1ರಷ್ಟು ಹಣ ಹೋಗುತ್ತಿದೆ.ಇನ್ನು ದಿನಸಿ ಹಾಗೂ ಇತರ ಅಗತ್ಯ ವಸ್ತುಗಳಿಗೆ ಶೇ.15.7, ಸಾಲದ EMI, ವಿಮೆ ಮತ್ತು ಹೂಡಿಕೆಗಳಿಗೆ ಶೇ.12, ಶಾಪಿಂಗ್‌ಗೆ ಶೇ.11.9 ಹಾಗೂ ಆಹಾರಕ್ಕೆ ಶೇ.11.5ರಷ್ಟು ಖರ್ಚು ಮಾಡುತ್ತಿದ್ದಾರೆ.ಅಂದರೆ, ಜೆನ್‌ಝಿ ಯುವಕರ ಮಾಸಿಕ ಖರ್ಚಿನ ಸುಮಾರು 70ರಷ್ಟು ಭಾಗ ಅಗತ್ಯ ವೆಚ್ಚಗಳಿಗೇ ಹೋಗುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಜೆನ್‌ಝಿ ಯುವಕರು ಸದಾ ಪ್ರವಾಸ ಮಾಡುತ್ತಿರುವಂತೆ ಕಾಣುತ್ತಾರೆ. ಪ್ರವಾಸ, ಪಾರ್ಟಿ, ರೆಸ್ಟೋರೆಂಟ್ ಮತ್ತು ಹೊಸ ಗ್ಯಾಜೆಟ್‌ಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ.
ಆದರೆ ವಾಸ್ತವದಲ್ಲಿ ಪ್ರವಾಸ ಮತ್ತು ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವರು ಖರ್ಚು ಮಾಡುವ ಮೊತ್ತ ಕೇವಲ ಶೇ.5ರಷ್ಟು ಎಂದು ಅಧ್ಯಯನ ಹೇಳಿದೆ.ಅಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಜೆನ್‌ಝಿ ಜೀವನಶೈಲಿ ಮತ್ತು ಅವರ ನೈಜ ಹಣಕಾಸಿನ ಅಭ್ಯಾಸದಲ್ಲಿ ಸಾಕಷ್ಟು ವ್ಯತ್ಯಾಸವಿದೆ.

ಹಣಕಾಸಿನ ವ್ಯವಹಾರದಲ್ಲೂ ಜೆನ್‌ಝಿ ಯುವಕರು ಡಿಜಿಟಲ್ ಪಾವತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ನಗದು ರೂಪದಲ್ಲಿ ಖರ್ಚು ಮಾಡುವ ಬದಲು UPI ಮೂಲಕ ಪಾವತಿ ಮಾಡುವ ಪ್ರವೃತ್ತಿ ಹೆಚ್ಚಾಗಿದೆ.ದಿನಸಿ ಖರೀದಿ, ಆಹಾರ, ಆನ್‌ಲೈನ್ ಸೇವೆಗಳು ಮತ್ತು ಬಿಲ್ ಪಾವತಿಗಳಿಗೂ ಡಿಜಿಟಲ್ ಪಾವತಿಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.

ಜೆನ್‌ಝಿ ಯುವಕರು ಪ್ರವಾಸ ಮತ್ತು ಮನರಂಜನೆಗೆ ಹಣ ಖರ್ಚು ಮಾಡುವುದಿಲ್ಲ ಎಂದಲ್ಲ. ಆದರೆ ಅದು ಅವರ ಮಾಸಿಕ ಬಜೆಟ್‌ನ ಪ್ರಮುಖ ಭಾಗವಲ್ಲ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಹೀಗಾಗಿ ‘ಜೆನ್‌ಝಿ ಎಂದರೆ ದುಬಾರಿ ಗ್ಯಾಜೆಟ್, ಪಾರ್ಟಿ ಮತ್ತು ಪ್ರವಾಸಕ್ಕೆ ಹಣ ಖರ್ಚು ಮಾಡುವ ಪೀಳಿಗೆ’ ಎಂಬ ಸಾಮಾನ್ಯ ಕಲ್ಪನೆಗೆ ಈ ವರದಿ ಹೊಸ ಆಯಾಮ ನೀಡಿದೆ. ಅಗತ್ಯ ವೆಚ್ಚಗಳಿಗೆ ಆದ್ಯತೆ ನೀಡುವುದರ ಜೊತೆಗೆ ಡಿಜಿಟಲ್ ಪಾವತಿಯನ್ನು ಹೆಚ್ಚು ಬಳಸುತ್ತಿರುವ ಜೆನ್‌ಝಿ ಯುವಕರ ಹಣಕಾಸಿನ ಶಿಸ್ತು ಇದೀಗ ಗಮನ ಸೆಳೆಯುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now