Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಯಕನಹಟ್ಟಿ | ಬಾವಿಯಲ್ಲಿ ಮಹಿಳೆ ಶವಪತ್ತೆ ಪ್ರಕರಣ ; ಇಬ್ಬರ ಬಂಧನ

---Advertisement---

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 19 : ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ವ್ಯಾಪ್ತಿಯ ಎನ್‌.ಮಹದೇವಪುರ ಗ್ರಾಮದ ಬಾವಿಯೊಂದರಲ್ಲಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕನಹಟ್ಟಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಚಳ್ಳಕೆರೆ ತಾಲೂಕಿನ ಚಿಕ್ಕಉಳ್ಳಾರ್ತಿ ಗ್ರಾಮದ ಬೋರಯ್ಯ ಮತ್ತು ಕಾರಯ್ಯ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.

ಬೋರಯ್ಯ ಎಂಬುವವನು ಮೃತ ಸುಮಲತಳನ್ನು ಎನ್ ಮಹದೇವಪುರ ಗ್ರಾಮದ ಕಂಚಳೇರ ಜಮೀನನಲ್ಲಿರುವ ಜಾಲಿ ಗಿಡಗಳ ಮಧ್ಯದಲ್ಲಿ ಬಲವಂತವಾಗಿ ಅತ್ಯಾಚಾರ ಮಾಡಿ ತನ್ನ ತಮ್ಮ ಕಾರಯ್ಯನನ್ನು ಅಲ್ಲಿಗೆ ಕರೆಯಿಸಿಕೊಂಡು ಇಬ್ಬರು ಸೇರಿ ಸುಮಲತಾಳ ಮುಖಕ್ಕೆ ಹೊಡೆದು ಟವ್ವಲ್ ನಿಂದ ಸುತ್ತಿ ಉಸಿರುಗಟ್ಟಿಸಿ ಸಾಯಿಸಿ ಸುಮಲತಾಳ ಹೆಣವನ್ನು ಬಾವಿಗೆ ಹಾಕಿರುವುದಾಗಿ ಪೊಲೀಸರಿಗೆ ತಿಳಿಸಿರುತ್ತಾರೆ.

ಘಟನೆ ಹಿನ್ನೆಲೆ : ಚಳ್ಳಕೆರೆ ತಾಲೂಕಿನ ಚಿಕ್ಕ ಉಳ್ಳಾರ್ತಿ ಗ್ರಾಮದ ಮೃತ ಸಮಲತಾಳ ತಂದೆ ಮಹೇಶ್ ಎಂಬುವವರು ಇದೇ ಆಗಸ್ಟ್ 15 ರಂದು ನನ್ನ ಮಗಳು ಆಗಸ್ಟ್ 13 ರಂದು ರಾತ್ರಿ ಸುಮಾರು 11.30 ಗಂಟೆಗೆ ಚಿಕ್ಕ ಉಳ್ಳಾರ್ತಿ ಗ್ರಾಮದ ಜಮೀನನಲ್ಲಿರುವ ಮನೆಯಿಂದ ಚಿಕ್ಕಉಳ್ಳಾರ್ತಿ ಗ್ರಾಮದ ಗಜೇಂದ್ರ ಎಂಬ ಹುಡುಗನೊಂದಿಗೆ ಕಾಣೆಯಾಗಿರುತ್ತಾಳೆ ಎಂದು ತಳಕು ಪೊಲೀಸ್ ಠಾಣೆಗೆ ದೂರನ್ನು ನೀಡಿರುತ್ತಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿರುತ್ತಾರೆ.

ಆಗಸ್ಟ್ 16 ರಂದು ಬೆಳಿಗ್ಗೆ 08.00 ಗಂಟೆಗೆ ಗಜೇಂದ್ರ ಎಂಬ ವ್ಯಕ್ತಿ ಠಾಣೆಗೆ ದೂರು ನೀಡಿದ್ದ ಮೃತ ಸುಮಲತಾ ತಂದೆ ಮಹೇಶ್ ಅವರ ಮನೆಗೆ ಬಂದು ನಿಮ್ಮ ಮಗಳನ್ನು ಆಗಸ್ಟ್ 14 ರಂದು ವಿವಾಹವಾಗಿದ್ದು, ಚಳ್ಳಕೆರೆ ತಾಲ್ಲೂಕು ಎನ್.ಮಹದೇವಪುರ ಗ್ರಾಮದ ಜಮೀನೊಂದರ ಕುರಿಗಳ ದೊಡ್ಡಿಯಲ್ಲಿ ಇದ್ದು, ಅದೇ ದಿನ ಮಧ್ಯಾಹ್ನ ಸುಮಲತಾಳು ಬಹಿರ್ದೆಸೆಗೆ ಹೋದವಳು ಮತ್ತೆ ವಾಪಸ್ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾನೆ. ನಂತರ ಸದರಿ ಜಮೀನಿಗೆ ಹೋಗಿ ಸುಮಲತಾಳನ್ನು ಹುಡುಕಿದಾಗ ಜಮೀನಿನೊಂದರ ಬಾವಿಯೊಂದರಲ್ಲಿ ಒಬ್ಬ ಹೆಂಗಸಿನ ಮೃತ ದೇಹವು ದೊರೆತಿರುತ್ತದೆ. ಆ ಮೃತದೇಹವು ಸುಮಲತಾಳದ್ದೆ ಎಂದು ದೂರು ನೀಡಿದ ಮಹೇಶ್ ಗುರುತಿಸಿರುತ್ತಾರೆ.

ಆಗಸ್ಟ್ 14 ರಿಂದ 16 ರ ಸಂಜೆ 06.00 ಗಂಟೆಯ ನಡುವೆ ಗಜೇಂದ್ರ ಮತ್ತು ಅವನ ಸ್ನೇಹಿತರಾದ ಬೋರೇಶ, ಅಶೋಕ ರವರು ಸೇರಿಕೊಂಡು ಸುಮಲತಾಳನ್ನು ಕೊಲೆ ಮಾಡಿ ಬಾವಿಯಲ್ಲಿ ತಂದು ಹಾಕಿರುತ್ತಾರೆ ಎಂದು ಶಂಕಿಸಲಾಗಿದ್ದು
ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಮೃತಳ ತಂದೆ ಮಹೇಶರವರು ದೂರನ್ನು ನೀಡಿದ್ದಾರೆ.
ಈ ದೂರಿನನ್ವಯ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಈ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು
ಚಿತ್ರದುರ್ಗ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶಿವಕುಮಾರ್ ಮತ್ತು ಚಳ್ಳಕೆರೆ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಸತ್ಯನಾರಾಯಣರಾವ್, ರವರ ಮಾರ್ಗದರ್ಶನದಲ್ಲಿ ಎರಡು ತಂಡಗಳನ್ನು ರಚನೆ ಮಾಡಿದ್ದರು.

ಕೊಲೆ ಆರೋಪಿಗಳನ್ನು ಪತ್ತೆ ಮಾಡಿದ ಚಳ್ಳಕೆರೆ ವೃತ್ತದ ಸಿಪಿಐ ಹನುಮಂತಪ್ಪ ಎಂ ಶಿರೀಹಳ್ಳಿ ಮತ್ತು ನಾಯಕನಹಟ್ಟಿ ಠಾಣೆಯ ಪಿಎಸ್‌ಐ ಪಾಂಡುರಂಗಪ್ಪ ಮತ್ತು ತಳಕು ಠಾಣೆಯ ಪಿಎಸ್‌ಐ ಶಿವಕುಮಾರ್ ಹಾಗೂ ನಾಯಕನಹಟ್ಟಿ ಠಾಣಾ ಸಿಬ್ಬಂದಿಗಳಾದ, ತಳಕು ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತ ಪಡಿಸಿ ಬಹುಮಾನ ಘೋಷಿಸಿರುತ್ತಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now