Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಮಾಜದ ಶೋಷಣೆ, ಅನ್ಯಾಯದ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ: ಆರ್. ಪ್ರದೀಪ್‌ಕುಮಾರ್

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 18 : ಸಮಾಜದಲ್ಲಿನ ಕುಂದು ಕೊರತೆ, ಶೋಷಣೆ, ಅನ್ಯಾಯದ ವಿರುದ್ದ ಎಲ್ಲರೂ ಒಂದಾಗಿ ಹೋರಾಡೋಣ ಎಂದು ನವ ಕ್ರಾಂತಿ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆರ್.ಪ್ರದೀಪ್‍ಕುಮಾರ್ ಪದಾಧಿಕಾರಿಗಳಿಗೆ ತಿಳಿಸಿದರು.

 

ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಮಲ್ಲೇಗೌಡ ಹಾಗೂ ಅಧ್ಯಕ್ಷ ಆಕಾಶ್ ಜಿ.ಎಂ. ಇವರುಗಳ ಪದಗ್ರಹಣ ಸಮಾರಂಭ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ಸಂಘಟನೆಯಲ್ಲಿ ಹುದ್ದೆ ಮುಖ್ಯವಲ್ಲ. ಎಲ್ಲರೂ ಸಮಾನರು.

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ತೊಂದರೆಯಿರುತ್ತದೆ. ಸಂಘಟನೆಗೆ ಒತ್ತು ಕೊಟ್ಟು ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಗೆ ಹೋರಾಡೋಣ. ನಮ್ಮ ಹೋರಾಟ ಯಾವುದೇ ಒಬ್ಬ ವ್ಯಕ್ತಿಯ ವಿರುದ್ದ ಅಲ್ಲ. ಒಳ್ಳೆಯ ಮಾರ್ಗದಲ್ಲಿ ಸಾಗೋಣ. ಜನಸಾಮಾನ್ಯರಿಗೆ ಮೂಲಭೂತ ಸೌಲಭ್ಯ, ರೈತರು, ವಿದ್ಯಾರ್ಥಿಗಳ ಸಮಸ್ಯೆ, ಹೀಗೆ ಹತ್ತು ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಪದಾಧಿಕಾರಿಗಳ ಮೇಲೆ ಜವಾಬ್ದಾರಿಯಿದೆ ಎಂದು ಹೇಳಿದರು.

 

ಹೋರಾಟಗಾರರಿಗೆ ಸಮಯ ಪಾಲನೆ, ಬದ್ದತೆ ಮುಖ್ಯ. ಜಿಲ್ಲೆಯಾದ್ಯಂತ ತಾಲ್ಲೂಕು ಸಮಿತಿಗಳನ್ನು ರಚಿಸಿ ವೇದಿಕೆಯನ್ನು ಬಲಪಡಿಸೋಣ ಎಂದು ಆರ್.ಪ್ರದೀಪ್‍ಕುಮಾರ್ ಕರೆ ನೀಡಿದರು.
ನವ ಕ್ರಾಂತಿ ರಕ್ಷಣಾ ವೇದಿಕೆ ರಾಜ್ಯ ಗೌರವಾಧ್ಯಕ್ಷ ಪಿ.ಮಹಂತೇಶ್ ಮಾತನಾಡಿ ಹೋರಾಟವೆಂದರೆ ಯಾವಾಗಲೂ ಸತ್ಯದ ಪರವಾಗಿರಬೇಕು. ಶೋಷಿತರು, ನೊಂದವರು ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಮ್ಮ ಹೋರಾಟವಿರಬೇಕು. ಈ ನಿಟ್ಟಿನಲ್ಲಿ ಪದಾಧಿಕಾರಿಗಳು ಒಗ್ಗಟ್ಟಿನಿಂದಿದ್ದಾಗ ಮಾತ್ರ ಸಂಘಟನೆಗೆ ಶಕ್ತಿ ಬರುತ್ತದೆಂದು ನುಡಿದರು.

ಬಾಗೋಡಿಸ್ವಾಮಿ, ಉಪಾಧ್ಯಕ್ಷ ಹನುಮಂತರಾಯ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ, ಕಾರ್ಯದರ್ಶಿ ವರುಣ್‍ಕುಮಾರ್, ಕಾನೂನು ಸಲಹೆಗಾರ ಧನಂಜಯ, ಮಾಧ್ಯಮ ಸಲಹೆಗಾರ ವಸಂತ, ಸಂಘಟನಾ ಕಾರ್ಯದರ್ಶಿ ವಿನಾಯಕ, ಉಪಾಧ್ಯಕ್ಷ ಕೀರ್ತಿಕುಮಾರ್, ಮಂಜುನಾಥ, ರಾಜ್ಯ ಸಹ ಕಾರ್ಯದರ್ಶಿ ನವೀನ್‍ಕುಮಾರ್ ಎಂ, ಸಂಘಟನಾ ಕಾರ್ಯದರ್ಶಿ ನಿಂಗರಾಜ್ ಇ, ರಾಜ್ಯ ಸಮಿತಿ ನಿರ್ದೇಶಕರುಗಳಾದ ಡಿ.ಸಿ.ವಿನಯ್, ಸಾಮಾಜಿಕ ಹೋರಾಟಗಾರ ವೆಂಕಟೇಶ್‍ಬಾಬು, ಸತೀಶ್‍ಕುಮಾರ್, ಪ್ರದೀಪ್‍ಕುಮಾರ್ ಆಚಾರ್, ಕರಿಯಪ್ಪ, ಎಂ.ಎಸ್.ನವೀನ್‍ಕುಮಾರ್, ಕೆ.ಮನೋಜ್, ಮಂಜು ಕೆ, ಕಿರಣ್ ಡಿ, ನಗರಾಧ್ಯಕ್ಷ ಮಂಜುನಾಥ್ ಟಿ.ಎನ್. ಇವರುಗಳು ಪದಗ್ರಹಣ ಸಮಾರಂಭದಲ್ಲಿ ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now