Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೋಟೆನಾಡು ಚಿತ್ರದುರ್ಗ ಶೌರ್ಯ, ಸಾಹಸ ಹಾಗೂ ಪ್ರತಿಭೆಗಳ ಬೀಡು: ಸಾಧನಾ ಸಂಸ್ಥೆಯ ನಿರ್ದೇಶಕಿ ಡಾ. ಜ್ಯೋತಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಆ. 18 :

ಕೋಟೆ ನಾಡು ಚಿತ್ರದುರ್ಗ ಶೌರ್ಯ, ಸಾಹಸ ಹಾಗೂ ಪ್ರತಿಭಾನ್ವಿತರ ಬೀಡು ಎಂದು ಬೆಂಗಳೂರಿನ ಸಾಧನಾ ಐಎಎಸ್ ತರಬೇತಿ ಸಂಸ್ಥೆಯ ನಿರ್ದೇಶಕಿಯಾದ ಡಾ. ಜ್ಯೋತಿ ಅಭಿಪ್ರಾಯ ಪಟ್ಟರು.

ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಭಾನುವಾರ ಸಂಜೆ ಕನ್ನಡ ಮೂವಿ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಚಿತ್ರದುರ್ಗ ಜಿಲ್ಲಾ ಬಂಜಾರ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ. ವಿಷ್ಣುವರ್ಧನ್ ಜೂನಿಯರ್ ಕಲಾವಿದರಾದ ಎಂ.ಡಿ ಅಲಿ ಹಾಗೂ ತಂಡದವರಿಂದ ಡಾ. ವಿಷ್ಣುವರ್ಧನ್ ಹಾಗೂ ಗಾನಕೋಗಿಲೆ ಎಸ್.ಜಾನಕಿ ಅವರ ಸ್ಮರಣಾರ್ಥವಾಗಿ ನಡೆದ ಸಂಗೀತ ಸಂಜೆ ರಸಮಂಜರಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕಳೆದ 15 ವರ್ಷಗಳಿಂದ ಸಾಧನಾ ಸಂಸ್ಥೆ ವಿದ್ಯಾರ್ಥಿಗಳನ್ನು ಐಎಎಸ್, ಐಪಿಎಸ್,ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಸಲುವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿ ತರಬೇತಿ ನೀಡುತ್ತಿದೆ. ಇಂದಿನ ಆಧುನಿಕ ಯುಗದಲ್ಲಿ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬೇಕು ಚಿತ್ರದುರ್ಗ ನನ್ನ ತವರು ಜಿಲ್ಲೆಯಾಗಿದ್ದು ಇಲ್ಲಿನ ಜನರು ಕಷ್ಟ ಜೀವಿಗಳು ಹಾಗೂ ಸಾಹಸವಂತರಾಗಿದ್ದು ಒನಕೆ ಓಬವ್ವ ಚಿತ್ರದುರ್ಗದ ಅಸ್ಮಿತೆ ಎಂದರು.

ಚಿತ್ರದುರ್ಗ ಬಂಜಾರ (ಲಂಬಾಣಿ) ಸಮಾಜದ ಜಿಲ್ಲಾಧ್ಯಕ್ಷರಾದ ಎಂ.ಸತೀಶ್ ಕುಮಾರ್ ಮಾತನಾಡಿ, ಕಲೆಯನ್ನೇ ಬದುಕಾಗಿಸಿಕೊಂಡಿರುವ ಜೂನಿಯರ್ ಕಲಾವಿದರಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು, ಡಾ. ವಿಷ್ಣುವರ್ಧನ್ ಹಾಗೂ ಗಾನಕೋಗಿಲೆ ಎಸ್.ಜಾನಕಿ ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದು ಅವರು ಜನಮಾನಸದಲ್ಲಿ ಎಂದಿಗೂ ಅಜರಾಮರರಾಗಿದ್ದಾರೆ ಎಂದರು.

ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಅಂಬರೀಶ್, ಜೂನಿಯರ್ ರವಿಚಂದ್ರನ್, ಸರಿಗಮಪ ಖ್ಯಾತಿಯ ಗಾಯಕಿ ರುಬಿನಾ ಅಭಿಮಾನಿಗಳನ್ನು ರಂಜಿಸಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಟಿಪ್ಪು ಸುಲ್ತಾನ್ ಅಭೀಮಾನಿ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾದ ಟಿಪ್ಪು ಖಾಸಿಂಆಲಿ ವಹಿಸಿದ್ದರು.ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ರಾದ ಗಿರೀಶ್ ಡಿ.ಆರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿಯ ರಾಜ್ಯ ಸಂಚಾಲಕರಾದ ಶಾಂತಾ ಜಯರಾಮ್,ಡಿಸಿಸಿ ಅಧ್ಯಕ್ಷ ತಾಜ್ ಪೀರ್, ಬಡಗಿ ಮತ್ತು ಕಟ್ಟಡ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಜಾಕಿರ್ ಹುಸೇನ್, ಕರುನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಡಾ.ಸೈಯದ್ ಇಸ್ಮಾಯಿಲ್, ಕರ್ನಾಟಕ ಸಮಾಜ ಸೇವೆ ಸಂಘದ ಅಧ್ಯಕ್ಷರಾದ ಮಹಮ್ಮದ್ ಸೈಫುಲ್ಲಾ, ಬಂಜಾರ ಮಹಿಳಾ ಮಹಾ ಸಭಾದ ಅಧ್ಯಕ್ಷರಾಧ ಶ್ರೀಮತಿ ಶಾಂತ ಜಯರಾಮ್, ಯುವ ಕರ್ನಾಟಕ ವೇದಿಕೆಯ ಅಧ್ಯಕ್ಷರಾದ ರವಿಕುಮಾರ್, ವಕೀಲರಾದ ರಹಮತ್ತುಲ್ಲಾ, ಎದ್ದೇಳು ಕರ್ನಾಟಕ ಚಿತ್ರದುರ್ಗ ಸಂಚಾಲಕರಾದ ಷಫಿವುಲ್ಲಾ, ಗೌಸ್‍ಪೀರ್, ಹನುಮಂತಪ್ಪ, ಅಮೃತಸ್ವಾಮಿ, ಆನಂದಕುಮಾರ್, ತಿಪ್ಪೇಸ್ವಾಮಿ ಚೇತನ್ ನಾಯ್ಕ್, ಮಂಜು ನಾಯ್ಕ್, ರವಿ ನಾಯ್ಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now