Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಛಲವಾದಿ ಗುರುಪೀಠದಲ್ಲಿ ಹೆಚ್. ಹನುಮಂತಪ್ಪನವರಿಗೆ ಭಾವಪೂರ್ಣ ಶ್ರದ್ಧಾಂಜಲಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 17 : ನಗರದ ಹೊರವಲಯ ದಾವಣಗೆರೆ ರಸ್ತೆಯಲ್ಲಿರುವ ಛಲವಾದಿ ಗುರುಪೀಠದಲ್ಲಿ ನಡೆದ ಟ್ರಸ್ಟ್‍ನ ಸಭೆಯಲ್ಲಿ ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನಮಂತಪ್ಪನವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಮಾತನಾಡಿ ಹೆಚ್.ಹನುಮಂತಪ್ಪನವರು ನಮ್ಮನ್ನೆಲ್ಲಾ ಅಗಲಿರುವುದು ಛಲವಾದಿ ಸಮಾಜಕ್ಕೆ ಅತೀವ ನೋವುಂಟಾಗಿದೆ. ಗುರುಪೀಠದ ಅಭಿವೃದ್ದಿಯಾಗುವ ಸಮಯದಲ್ಲಿ ನಮ್ಮ ಜೊತೆ ಇರಬೇಕಿತ್ತು. ಸರ್ಕಾರದಿಂದ ಅನುದಾನ ತಂದು ಮಠದ ಕಟ್ಟುವ ಮೂಲಕ ಹೆಚ್.ಹನುಮಂತಪ್ಪವರ ಆಸೆ ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದೆಂದು ತಿಳಿಸಿದರು.

ಛಲವಾದಿ ಗುರುಪೀಠ ಟ್ರಸ್ಟ್‍ನ ಉಪಾಧ್ಯಕ್ಷ ಡಾ.ಶ್ರೀಧರಮೂರ್ತಿ ಮಾತನಾಡಿ ನಾನು ವಿದ್ಯಾಸಂಸ್ಥೆ ಆರಂಭಿಸುವಾಗ ಹೆಚ್.ಹನುಮಂತಪ್ಪವರು ಸಹಾಯ ಮಾಡಿದ್ದಾರೆ. ಅನೇಕ ವರ್ಷಗಳಿಂದ ಅವರೊಂದಿಗೆ ಒಡನಾಟವಿತ್ತು. ಎಲ್ಲರನ್ನು ಅಗಲಿರುವುದು ದುಃಖದ ಸಂಗತಿ ಎಂದು ಕಂಬನಿ ಮಿಡಿದರು.

ಟ್ರಸ್ಟ್‌ನ ಖಜಾಂಚಿ ಹೆಚ್.ಸಿ.ನಿರಂಜನಮೂರ್ತಿ ಮಾತನಾಡುತ್ತ ಛಲವಾದಿ ಗುರುಪೀಠ ಟ್ರಸ್ಟ್‍ನ ಗೌರವಾಧ್ಯಕ್ಷರಾದ್ದ ಹೆಚ್.ಹನುಮಂತಪ್ಪನವರು ಮಠದ ಬಗ್ಗೆ ಅಪಾರವಾದ ಗೌರವವಿಟ್ಟುಕೊಂಡು ಅಭಿವೃದ್ದಿ ಪಡಿಸಬೇಕೆಂದು ಹಂಬಲಿಸುತ್ತಿದ್ದರು. ಛಲವಾದಿ ಸಮಾಜದಲ್ಲಿ ಹಿರಿಯ ಮುಖಂಡರಾಗಿದ್ದ ಅವರಲ್ಲಿ ವಿದ್ವತ್ತಿತ್ತು. ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದರೆಂದು ಸ್ಮರಿಸಿದರು.

ಟ್ರಸ್ಟಿ ಎಸ್.ಎನ್.ರವಿಕುಮಾರ್ ಮಾತನಾಡಿ ಮಠದ ಅಭಿವೃದ್ದಿ, ಜನಾಂಗದ ವಿಚಾರ ಬಂದಾಗ ನನ್ನನ್ನು ಕರೆಸಿಕೊಂಡು ಮುಕ್ತವಾಗಿ ಮಾತನಾಡುತ್ತಿದ್ದರು. ಛಲವಾದಿ ಗುರುಪೀಠವನ್ನು ಅಭಿವೃದ್ದಿಪಡಿಸಿ ಬೇರೆ ಮಠಗಳಂತೆ ಶಕ್ತಿಶಾಲಿಯನ್ನಾಗಿ ಮಾಡಬೇಕೆಂಬ ಆಸೆಯಿಟ್ಟುಕೊಂಡಿದ್ದರು. ಸಮಾಜ ದೊಡ್ಡ ಆಸ್ತಿಯನ್ನು ಕಳೆದುಕೊಂಡು ಅನಾಥವಾಗಿದೆ. ಸರ್ಕಾರದಿಂದ ಅನುದಾನ ತಂದು ಅವರ ಆಸೆಯಂತೆ ಗುರುಪೀಠವನ್ನು ಅಭಿವೃದ್ದಿಪಡಿಸಲಾಗುವುದೆಂದರು.

 

ಛಲವಾದಿ ಗುರುಪೀಠದ ಟ್ರಸ್ಟ್‍ನ ಕಾರ್ಯದರ್ಶಿ ಜಿ.ಹೆಚ್.ಮೋಹನ್, ಸಹ ಕಾರ್ಯದರ್ಶಿ ನಟರಾಜ್, ನಾಗರಾಜು, ವಕೀಲರುಗಳಾದ ಬಸವರಾಜು, ಪರಮೇಶ್ ಛಲವಾದಿ ಜನಾಂಗದ ಮಂಜುಳಮ್ಮ ಇವರುಗಳು ಶ್ರದ್ದಾಂಜಲಿಯಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಚಿತ್ರದುರ್ಗ: ಪೊಲೀಸ್ ಕಲ್ಯಾಣಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ; ಎಸ್ಸೆಸ್ಸೆಲ್ಸಿ, ಪಿಯುಸಿ ಟಾಪರ್ಸ್‌ಗೆ ಸನ್ಮಾನ

ಪರಪ್ಪನ ಅಗ್ರಹಾರದಲ್ಲಿ ಸೊಳ್ಳೆಗಳ ಕಾಟ; ನಿದ್ದೆ ಬರುತ್ತಿಲ್ಲ ಎಂದು ದರ್ಶನ್ ಮನವಿ, ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು?

ಪರಪ್ಪನ ಅಗ್ರಹಾರದಲ್ಲಿ ಸೊಳ್ಳೆಗಳ ಕಾಟ; ನಿದ್ದೆ ಬರುತ್ತಿಲ್ಲ ಎಂದು ದರ್ಶನ್ ಮನವಿ, ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು?

ಗೃಹಲಕ್ಷ್ಮಿ ಯೋಜನೆಯ 32ನೇ ಕಂತು ಬಿಡುಗಡೆ

ಚಿತ್ರದುರ್ಗ: ಕನಿಷ್ಠ ವೇತನ, ಸೇವಾ ಭದ್ರತೆಗೆ ಆಗ್ರಹಿಸಿ ಸರ್ಕಾರಿ ಹಾಸ್ಟೆಲ್, ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ‘ಶುದ್ಧೀಕರಣ’: ಶ್ರೀರಾಮಸೇನೆ ಕೃತ್ಯ ಖಂಡಿಸಿ ಚಿತ್ರದುರ್ಗದಲ್ಲಿ ಛಲವಾದಿ ಗುರುಪೀಠದಿಂದ ಪ್ರತಿಭಟನೆ