Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಖಂಡ ಭಾರತದ ಕನಸು ನನಸಾಗಲು ಯುವಪಡೆ ಒಂದಾಗಲಿ: ಹಿಂದೂ ಜಾಗರಣ ವೇದಿಕೆ ಕರೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಆ. 14 : ದೇಶದ ಸಾರ್ವಭೌಮತ್ವ, ಅಖಂಡತೆ ಹಾಗೂ ಸಶಕ್ತ ಭಾರತದ ನಿರ್ಮಾಣಕ್ಕಾಗಿ ಯುವಪೀಳಿಗೆಯು ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ. ಅಖಂಡ ಭಾರತದ ಕಲ್ಪನೆಯನ್ನು ನನಸು ಮಾಡುವಲ್ಲಿ ಯುವಜನತೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಹ ಸಂಯೋಜಕರಾಧ ಸತೀಶ್ ಪೂಜಾರ್ ತಿಳಿಸಿದರು.

ಹಿಂದೂ ಜಾಗರಣಾ ವೇದಿಕೆಯವತಿಯಿಂದ ನಗರದ ಆನೆಬಾಗಿಲ ಬಳಿಯಲ್ಲಿನ ಆವರಣದಲ್ಲಿ ಗುರುವಾರ ಸಂಜೆ ನಡೆದ ಅಖಂಡ ಭಾರತ ಸಂಕಲ್ಪ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ನಮ್ಮ ಪೂರ್ವಜರ ಕನಸಾದ ಅಖಂಡ ಭಾರತದ ಕಲ್ಪನೆ ನನಸಾಗಲಿದೆ ಈ ಐತಿಹಾಸಿಕ ಮತ್ತು ನೈಜ ಇತಿಹಾಸವನ್ನು ಮುಂಬರುವ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಸಶಕ್ತ ಹಾಗೂ ಸದೃಢ ಭಾರತವನ್ನು ಕಟ್ಟಲು ಯುವಪೀಳಿಗೆಯು ಯಾವುದೇ ರೀತಿಯ ಮಾದಕ ವ್ಯಸನಗಳಿಂದ ದೂರವಿರಬೇಕು ರಾಜ್ಯವನ್ನು ನಶಾಮುಕ್ತ ಗೊಳಿಸುವ ನಿಟ್ಟಿನಲ್ಲಿ ಗಾಂಜಾ, ಅಫೀಮು ಹಾಗೂ ಡ್ರಗ್ಸ್‍ನಂತಹ ಮಾದಕ ಜಾಲಗಳ ಕುರಿತು ಸುಳಿವು ಸಿಕ್ಕ ತಕ್ಷಣವೇ ಪೊಲೀಸ್ ಅಥವಾ ಗುಪ್ತಚರ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸುಭಾಷ್ ಚಂದ್ರ ಬೋಸ್ ಹಾಗೂ ಸ್ವಾಮಿ ವಿವೇಕಾನಂದರ ತತ್ವಗಳನ್ನು ಉದಾಹರಿಸಿದ ಅವರು, ಜಾತಿ, ಪಕ್ಷ, ಪ್ರಾಂತ ಹಾಗೂ ಭಾಷಾ ಭೇದಗಳನ್ನು ಮರೆತು ‘ನಾವೆಲ್ಲರೂ ಒಂದು’ ಎಂಬ ಭಾವನೆಯಿಂದ ತಾಯಿ ಭಾರತಿಯ ಸೇವೆಗೆ ಸಿದ್ಧರಾಗಬೇಕು ಹಿಂದೂ ಜಾಗರಣ ವೇದಿಕೆಯು ಎಂದಿಗೂ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ ದೇಶಪ್ರೇಮಿಗಳಾದ ಪ್ರತಿಯೊಬ್ಬ ನಾಗರಿಕರೂ ನಮ್ಮ ಬಂಧುಗಳೇ ಆಗಿದ್ದಾರೆ. ಸಲೀಂ ಅಲಿ, ಅಶ್ಫಾಖುಲ್ಲಾ ಖಾನ್, ಸಂತ ಶಿಶುನಾಳ ಶರೀಫ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್ ಅವರಂತಹ ಮಹನೀಯರನ್ನು ದೇಶ ಗೌರವಿಸುತ್ತದೆ ರಾಷ್ಟ್ರದ್ರೋಹವನ್ನು ಸಹಿಸುವುದಿಲ್ಲ ಹಾಗೂ ರಾಷ್ಟ್ರಪ್ರೇಮವನ್ನು ಎತ್ತಿಹಿಡಿಯುವುದೇ ಮುಖ್ಯ ಗುರಿ ಎಂದು ತಿಳಿಸಿದರು.

ಭಾರತದ ಜಾಗತಿಕ ಪ್ರಭಾವ ಹಾಗೂ ಪ್ರಸ್ತುತ ವಿದೇಶಾಂಗ ಸ್ಥಿತಿಗತಿಗಳ ಕುರಿತು ಪ್ರಸ್ತಾಪಿಸಿದರು. ಬಲೂಚಿಸ್ತಾನದ ವಿಷಯ, ವಿಶ್ವ ಯೋಗ ದಿನಾಚರಣೆಗೆ ಜಾಗತಿಕ ಮಟ್ಟದಲ್ಲಿ ದೊರೆತ ಬೆಂಬಲ ಹಾಗೂ ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದ ನಿರ್ಧಾರಗಳನ್ನು ಉಲ್ಲೇಖಿಸಿದ ಅವರು, ಇವೆಲ್ಲವೂ ಭಾರತದ ಬಲ ಮತ್ತು ಜಾಗತಿಕ ಮಟ್ಟದಲ್ಲಿ ದೇಶಕ್ಕಿರುವ ಗೌರವಕ್ಕೆ ಸಾಕ್ಷಿಯಾಗಿದೆ ನೆರೆಹೊರೆಯ ದೇಶಗಳಾದ ನೇಪಾಳ, ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನಗಳೊಂದಿಗೆ ಭಾರತ ಹೊಂದಿರುವ ಸಾಂಸ್ಕೃತಿಕ ಹಾಗೂ ಹಿತಕರ ಬಾಂಧವ್ಯವನ್ನು ಸ್ಮರಿಸಿದ ಅವರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ರಾಜ್‍ಗುರು, ಅಂಬೇಡ್ಕರ್, ಮದಕರಿ ನಾಯಕ, ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದ ವೀರರ ಹೆಸರಿನಲ್ಲಿ ಜೈಕಾರಗಳನ್ನು ಕೂಗುವ ಮೂಲಕ, ಸಶಕ್ತ ಹಾಗೂ ಅಖಂಡ ಭಾರತ ನಿರ್ಮಾಣದ ಸಂಕಲ್ಪವನ್ನು ಪ್ರಕಟಿಸಲಾಯಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now