ಲೇಹ್-ಲಡಾಖ್: ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 5.5 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ನೀಡಿರುವ ಮಾಹಿತಿ ಪ್ರಕಾರ, ಆಗಸ್ಟ್ 13ರಂದು ಬೆಳಗ್ಗೆ 6:05:15ಕ್ಕೆ ಭೂಕಂಪ ಸಂಭವಿಸಿದೆ.
ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ. ಲೇಹ್-ಲಡಾಖ್ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದು 36.881° ಉತ್ತರ ಅಕ್ಷಾಂಶ ಹಾಗೂ 74.402° ಪೂರ್ವ ರೇಖಾಂಶದಲ್ಲಿತ್ತು ಎಂದು NCS ತಿಳಿಸಿದೆ.
ಭೂಕಂಪದ ಕಂಪನದ ತೀವ್ರತೆ ಹಾಗೂ ಇದರಿಂದ ಉಂಟಾಗಿರುವ ಹಾನಿ, ಸಾವು-ನೋವುಗಳ ಕುರಿತು ಸದ್ಯ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಅಧಿಕಾರಿಗಳ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಲಡಾಖ್ನಲ್ಲಿ ಬೆಳಗಿನ ಜಾವ ಸಂಭವಿಸಿದ ಈ ಭೂಕಂಪದಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
An earthquake of magnitude 5.5 on the Richter scale struck Leh, Ladakh, at 6:05 am today: National Centre for Seismology. pic.twitter.com/Y0SQ3mdhQE
— ANI (@ANI) August 13, 2026










