ಬೊಗೋಟಾ (ಕೊಲಂಬಿಯಾ): ಪಶ್ಚಿಮ ಕೊಲಂಬಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಕನಿಷ್ಠ 132 ಜನರು ಜೀವ ಕಳೆದುಕೊಂಡಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಬಹುವಹಡಿ ಕಟ್ಟಡಗಳು, ಆಸ್ಪತ್ರೆಗಳು ಹಾಗೂ ರಸ್ತೆ ಮೂಲಸೌಕರ್ಯಗಳು ಧರಾಶಾಹಿಯಾಗಿದ್ದು, ಹಲವರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ.
ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದ್ದು, ಭೂಮಿಯ 107 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಕೊಲಂಬಿಯಾ ಭೂವೈಜ್ಞಾನಿಕ ಸಂಸ್ಥೆಯ ಪ್ರಕಾರ, ಇದು 21ನೇ ಶತಮಾನದಲ್ಲಿ ದೇಶದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪವಾಗಿದೆ.
ತುರ್ತು ಪರಿಸ್ಥಿತಿ
ಕೊಲಂಬಿಯಾದ ನೂತನ ಅಧ್ಯಕ್ಷ ಅಬೆಲಾರ್ಡೊ ಡೆ ಲಾ ಎಸ್ಪ್ರಿಯೆಲ್ಲಾ ಅವರು ದೇಶಾದ್ಯಂತ ರಾಷ್ಟ್ರೀಯ ತುರ್ತು ಪರಿಸ್ಥಿತಿ (National State of Emergency) ಘೋಷಿಸಿದ್ದಾರೆ. ಹಾನಿಯ ಪರಿಶೀಲನೆ ಹಾಗೂ ಸುರಕ್ಷತಾ ಕಾರಣಗಳಿಗಾಗಿ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕೊಲಂಬಿಯಾದ ಕಾಫಿ ಬೆಳೆಯುವ ಪ್ರದೇಶವಾದ ರಿಸಾರಾಲ್ಡಾ (Risaralda) ಮತ್ತು ಅದರ ರಾಜಧಾನಿ ಪೆರೇರಾ (Pereira) ನಗರಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಮನಿಜೇಲ್ಸ್ (Manizales) ನಗರದ ಪ್ರಸಿದ್ಧ ಕ್ಯಾಥೆಡ್ರಲ್ ಗೋಪುರ ಕುಸಿದುಬಿದ್ದಿದೆ.
ಅಲ್ಲದೆ, ಕಾಲಿ (Cali) ನಗರದಲ್ಲಿ ಹಲವಾರು ವಸತಿ ಸಮುಚ್ಚಯಗಳು ನೆಲಸಮಗೊಂಡಿದ್ದು, ಪ್ರತ್ಯಕ್ಷದರ್ಶಿಗಳು “ಕಟ್ಟಡ ಕುಸಿದಾಗ ದೊಡ್ಡ ಬಾಂಬ್ ಸಿಡಿದಂತೆ ಶಬ್ದವಾಯಿತು” ಎಂದು ಹೆದರಿಕೆ ಹಂಚಿಕೊಂಡಿದ್ದಾರೆ. ರಕ್ಷಣಾ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯ ಸಾರ್ವಜನಿಕರು ಕೈಯಿಂದಲೇ ಅವಶೇಷಗಳನ್ನು ತೆರವುಗೊಳಿಸಿ ಜನರನ್ನು ರಕ್ಷಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.
ಕೊಲಂಬಿಯಾ ಅಧ್ಯಕ್ಷರು ದೇಶವನ್ನುದ್ದೇಶಿಸಿ ಮಾತನಾಡಿ, “ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸುವುದೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಅಗತ್ಯವಿರುವ ಎಲ್ಲಾ ಪ್ರದೇಶಗಳಿಗೆ ತಕ್ಷಣದ ಪರಿಹಾರ ವಸ್ತುಗಳನ್ನು ತಲುಪಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
🔴Temblor en Colombia deja graves afectaciones en la ciudad de Manizales, en el departamento de Caldas.
Catedral y varios edificios afectados, escombros y heridos tras el movimiento telúrico que sacudió a Colombia en la mañana de este lunes 10 de agosto. pic.twitter.com/j81c8gKBr6
ಇದನ್ನು ಓದಿಚಿತ್ರದುರ್ಗ | ಆರ್. ಡಿ. ತಿಪ್ಪೇಸ್ವಾಮಿ ನಿಧನ— EL TIEMPO (@ELTIEMPO) August 10, 2026











