ಟೋಕಿಯೋ.ಆಗಸ್ಟ್.8: ಭಾರಿ ವೇಗದ ಗಾಳಿ ಹಾಗೂ ಪ್ರಚಂಡ ಮಳೆಯೊಂದಿಗೆ ಆಗಮಿಸಿರುವ ‘ಡಾಲ್ಫಿನ್’ ಚಂಡಮಾರುತವು ಜಪಾನ್‌ನ ದಕ್ಷಿಣ ಓಕಿನಾವಾ ಪ್ರಾಂತ್ಯದಲ್ಲಿ ತೀವ್ರ ಹಾನಿ ಉಂಟುಮಾಡಿದೆ. ಚಂಡಮಾರುತದ ಅಬ್ಬರಕ್ಕೆ ಕನಿಷ್ಠ ಐದು ಜನರು ಗಾಯಗೊಂಡಿದ್ದು, ಸುಮಾರು 14,000ಕ್ಕೂ ಹೆಚ್ಚು ಮನೆಗಳು ಮತ್ತು ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಪ್ರಸ್ತುತ ಈ ಚಂಡಮಾರುತವು ಕುಮೆ ದ್ವೀಪದಿಂದ ವಾಯುವ್ಯ ದಿಕ್ಕಿನಲ್ಲಿ ಗಂಟೆಗೆ 15 ಕಿ.ಮೀ ವೇಗದಲ್ಲಿ ಚೀನಾದ ತೀರ ಪ್ರದೇಶದತ್ತ ಮುನ್ನುಗ್ಗುತ್ತಿದೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಕೇಂದ್ರಭಾಗದಲ್ಲಿ ಗಂಟೆಗೆ 162 ಕಿ.ಮೀ ನಿಂದ 216 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದೆ.
ಜಪಾನ್‌ನ ಎನ್‌ಎಚ್‌ಕೆ (ANA) ಮತ್ತು ಜಪಾನ್ ಏರ್‌ಲೈನ್ಸ್ ಪ್ರಮುಖ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ. ಭಾನುವಾರ ತಡರಾತ್ರಿ ಅಥವಾ ಸೋಮವಾರ ಮುಂಜಾನೆ ಚೀನಾದ ಝೆಜಿಯಾಂಗ್ ಮತ್ತು ಫುಜಿಯನ್ ಪ್ರಾಂತ್ಯಗಳ ನಡುವೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ.

ಝೆಜಿಯಾಂಗ್ ಪ್ರಾಂತ್ಯದಲ್ಲಿ 600 ಮಿಮೀಗಿಂತಲೂ ಹೆಚ್ಚು ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಕರಾವಳಿ ಭಾಗದಲ್ಲಿ ಅತ್ಯುನ್ನತ ಮಟ್ಟದ ಎಚ್ಚರಿಕೆ (ಹೈ ಅಲರ್ಟ್) ಘೋಷಿಸಲಾಗಿದೆ. ನಿಂಗ್ಬೋ ವಿಮಾನ ನಿಲ್ದಾಣ ಮತ್ತು ಬಂದರು ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ತೈವಾನ್ 63 ಅಂತರರಾಷ್ಟ್ರೀಯ ವಿಮಾನ ಹಾರಾಟಗಳನ್ನು ರದ್ದುಗೊಳಿಸಿದೆ.
ತೈವಾನ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ ಚೀನಾ ಸಂಚಾರ ನಿಯಂತ್ರಣ ಸೂಚನೆ ನೀಡಿದೆ. ಚೀನಾದ ಈ ಕ್ರಮವನ್ನು ತೈವಾನ್ ತೀವ್ರವಾಗಿ ಖಂಡಿಸಿದ್ದು, ಇದು ಅಂತರರಾಷ್ಟ್ರೀಯ ಜಲಮಾರ್ಗವಾಗಿದ್ದು ಚೀನಾದ ಅಧಿಕಾರವನ್ನು ಒಪ್ಪುವುದಿಲ್ಲ ಎಂದು ಹೇಳಿದೆ.
ಓಕಿನಾವಾ ಮತ್ತು ಅಮಾಮಿ ದ್ವೀಪಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಚೀನಾದ ಪೂರ್ವ ಕರಾವಳಿಯಲ್ಲಿ ಆಗಸ್ಟ್ 12 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.
Typhoon Dolphin pounds Okinawa, Japan with fierce winds and dangerous conditions. Evacuation orders issued for nearly 260,000 people and 500+ flights canceled. https://t.co/upTxtB2EtJ pic.twitter.com/JjTaTMFy0c
— Weather Monitor (@WeatherMonitors) August 7, 2026
Typhoon Dolphin is currently hitting Okinawa, Japan, bringing strong winds and heavy rainfall to the region. pic.twitter.com/OpVFkpGtsi
— Weather Monitor (@WeatherMonitors) August 7, 2026













