ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್, ಆಗಸ್ಟ್. 02 : ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಉಂಟಾಗುವಿಕೆ, ಅವರ್ತನ ಮತ್ತು ಅವಧಿ, ಭೂಕಂಪನಗಳು ಟೆಕ್ಯೋನಿಕ್ ಫಲಕಗಳ ಚಲನೆಯಿಂದ ಉಂಟಾಗುತ್ತವೆ. ಆದರೆ ಚಂದ್ರನಲ್ಲಿ ಅಂತಹ ಫಲಕಗಳಿಲ್ಲ, ಬದಲಿಗೆ ಇವು ಭೂಮಿಯ ಗುರುತ್ವಕರ್ಷಣೆಯ ಸೆಳೆತ, ಚಂದ್ರನ ತಣ್ಣಗಾಗುವಿಕೆ ಹಾಗೂ ಉಷ್ಣಾಂಶದ ವ್ಯತ್ಯಾಸದಿಂದ ಸಂಭವಿಸುತ್ತವೆ.
ಭೂಕಂಪಗಳು ಭೂಮಿಯ ಮೇಲ್ಪದರದಲ್ಲಿರುವ ಟೆಕ್ಯೋನಿಕ್ ಫಲಕಗಳು ಒಂದಕ್ಕೊಂದು ಉಜ್ಜಿಕೊಳ್ಳುವುದರಿಂದ ಅಥವಾ ಡಿಕ್ಕಿ ಹೊಡೆಯುವುದುರಿಂದ ಅಪಾರಶಕ್ತಿ ಬಿಡುಗಡೆಯಾಗಿ ಭೂಕಂಪಗಳು ಸಂಭವಿಸುತ್ತವೆ. ಜ್ವಾಲಾಮುಖಿ ಸ್ಪೋಟಗಳು ಸಹ ಇದಕ್ಕೆ ಕಾರಣವಾಗುತ್ತದೆ.
ಚಂದ್ರ ಕಂಪನಗಳು ಚಂದ್ರನಲ್ಲಿ ಟಕ್ಯೋನಿಕ್ ಫಲಕಗಳ ಚಲನೆ ಇರುವುದಿಲ್ಲ ಇದು ನಾಲ್ಕು ಮುಖ್ಯ ಕಾರಣಗಳಿಂದ ಉಂಟಗಾಗುತ್ತವೆ. ಭೂಮಿಯ ಗುರುತ್ವಾಕರ್ಷಣಾ ಬಲದಿಂದ ಚಂದ್ರನ ಒಳಭಾಗವು ಸೆಳೆತಕ್ಕೆ ಒಳಗಾಗಿ ಸುಮಾರು 700 ಕಿ.ಮೀ. ಆಳದಲ್ಲಿ ಉಂಟಾಗುತ್ತದೆ. ಚಂದ್ರನು ತಣ್ಣಗಾಗುತ್ತಾ ಸಂಕುಚಿತಗೊಳ್ಳುವುದರಿಂದ ಮೇಲ್ಮೈ ತೀವ್ರವಾಗಿ ವಿಸ್ತಾರಣೆಗೊಳ್ಳುವುದರಿಂದ ಇದು ಸಂಭವಿಸುತ್ತದೆ. ಬಾಹ್ಯಾಕಾಶದಿಂದ ಉಲ್ಕೆಗಳು ಚಂದ್ರನ ಮೇಲ್ಮೈಗೆ ಅಪ್ಪಳಿಸುವುದರಿಂದ ಉಂಟಾಗುತ್ತದೆ.
ಭೂಕಂಪನಗಳ ಅವಧಿ ಸಾಮಾನ್ಯವಾಗಿ ಕೆಲವೇ ಸೆಕೆಂಡುಗಳಿಂದ ಒಂದೆರಡು ನಿಮಿಷಗಳವರೆಗೆ ಇರುತ್ತವೆ. ಆದರೆ ಚಂದ್ರಕಂಪನಗಳು ಬಹಳ ಸುದೀರ್ಘವಾಗಿದ್ದು, ಒಂದು ಗಂಟೆಯವರೆಗೆ ಮುಂದುವರಿಯಬಹುದು, ಚಂದ್ರನಲ್ಲಿ ನೀರು ಮತ್ತು ಮೃದುವಾದ ಪದರಗಳಿಲ್ಲದಿರುವುದರಿಂದ ಕಂಪನದ ಅಲೆಗಳು ಬೇಗನೆ ತಣ್ಣಗಾಗದೆ ಗಡಿಯುದ್ದಕ್ಕೂ ಪ್ರತಿಧ್ವನಿಸುತ್ತವೆ. ಭೂಕಂಪನಗಳ ಶಕ್ತಿಯನ್ನು ರಿಕ್ಟರ್ ಮಾಪನದಲ್ಲಿ 8 ಅಥವಾ 9ರಷ್ಟು ತೀರ್ವತೆ ತಲುಪಿ ಭಾರಿ ನಾಶವನ್ನೂ ಉಂಟು ಮಾಡಬಲ್ಲವು, ಆದರೆ ಚಂದ್ರಕಂಪನಗಳು ಸೌಮ್ಯವಾಗಿದ್ದು, ಅಪರೂಕ್ಕೆ ಗರಿಷ್ಠ 5.5ರವರೆಗೆ ದಾಖಲಾಗಿವೆ.
ಭುಮಿಯ ಮೇಲಿರುವ ಮಾನವರು ಚಂದ್ರಕಂಪನದ ತೀವ್ರತೆಯನ್ನು ನೇರವಾಗಿ ಅನುಭವಿಸಲು ಅಥವಾ ಅಳತೆ ಮಾಡಲು ಸಾಧ್ಯವಿಲ್ಲ. ಚಂದ್ರನ ಕಂಪನಗಳನ್ನು ಅಳತೆ ಮಾಡಲು ಅಪೋಲೊಮಿಷನ್‌ಗಳ ಸಮಯದಲ್ಲಿ ಚಂದ್ರನ ಮೇಲ್ಮೆಯಲ್ಲಿ ಸಿಸ್ಯೋ ಮೀಟರ್‌ಗಳನ್ನು ಇರಿಸಲಾಗುತ್ತದೆ. ಭೂಮಿಯಿಂದ ಚಂದ್ರನ ಮೇಲಿನ ಕಂಪನಗಳನ್ನು ಉಪಗ್ರಹಗಳು ಮತ್ತು ರೇಡಿಯೋ ತರಂಗಗಳ ಮೂಲಕ ವಿಜ್ಞಾನಿಗಳು ಪತ್ತೆ ಮಾಡುತ್ತಾರೆ.
ಮನುಷ್ಯರ ನೇರವಾಗಿ ಅಳೆಯಲು ಅಥವಾ ಗ್ರಹಿಸಲು ಸಾಧ್ಯವಿಲ್ಲದಿರಲು ಮುಖ್ಯ ಕಾರಣಗಳು ಏನೆಂದರೆ ಚಂದ್ರನು ಭೂಮಿಯಿಂದ ಸುಮಾರು 3,84,400 ಕಿ.ಮೀ. ದೂರದಲ್ಲಿದ್ದಾನೆ ಮತ್ತು ಅಲ್ಲಿ ವಾತಾವರಣವಿಲ್ಲ, ಚಂದ್ರನ ಮೇಲಿನ ಭೂಕಂಪನಗಳು ಭೂಮಿಗೆ ತಲುಪುವುದಿಲ್ಲ ಮತ್ತು ಮಾನವನ ಶರೀರಕ್ಕೆ ಭೂಮಿಯಿಂದ ನೇರವಾಗಿ ಅನುಭವಕ್ಕೆ ಬರುವುದಿಲ್ಲ. ಚಂದ್ರ ಕಂಪನಗಳನ್ನು ಅಳೆಯಲು ಅಲ್ಲಿ ವಿಶೇಷ ಉಪಕರಣಗಳು ಬೇಕು, ಅವುಗಳ ಮಾಹಿತಿಯನ್ನು ಭೂಮಿಗೆ ಕಳುಹಿಸಲಾಗುತ್ತದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












