ಮಳೆಗಾಲವು ತಂಪಾದ ವಾತಾವರಣ ನೀಡಿದರೂ, ಸಾಂಕ್ರಾಮಿಕ ರೋಗಗಳು ಹಾಗೂ ಇನ್ಫೆಕ್ಷನ್ಗಳು ಹೆಚ್ಚಾಗುವ ಕಾಲ. ನೆಗಡಿ, ಕೆಮ್ಮು, ಗಂಟಲು ನೋವು, ವೈರಲ್ ಜ್ವರ ಮುಂತಾದ ಸಮಸ್ಯೆಗಳು ಈ ಸಮಯದಲ್ಲಿ ಸಾಮಾನ್ಯ. ಅದರಲ್ಲೂ ಮಧ್ಯರಾತ್ರಿಯ ಸಮಯದಲ್ಲಿ ಹಠಾತ್ತನೆ ಆರೋಗ್ಯ ಕೈಕೊಟ್ಟರೆ ತಕ್ಷಣ ಆಸ್ಪತ್ರೆಗೆ ಓಡುವುದು ಸುಲಭವಲ್ಲ.
ಇಂತಹ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಯಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೆಲವು ಅಗತ್ಯ ಔಷಧಗಳು ಇರಲೇಬೇಕು.
ಪ್ರತಿಯೊಂದು ಮನೆಯಲ್ಲೂ ಇರಬೇಕಾದ ತುರ್ತು ಔಷಧಗಳು:
ಪ್ಯಾರಾಸಿಟಮಾಲ್ 650mg (Paracetamol 650 mg): ಹಗುರವಾದ ಜ್ವರ, ಮೈಕೈ ನೋವು ಅಥವಾ ತಲೆನೋವು ಬಂದಾಗ ತಕ್ಷಣದ ಶಮನಕ್ಕಾಗಿ ಇದು ಪ್ರತಿಯೊಂದು ಮನೆಯಲ್ಲೂ ಇರಬೇಕು.
ಆಂಟಿಹಿಸ್ಟಮೈನ್ ಮಾತ್ರೆಗಳು (Antihistamine Tablet): ಇದ್ದಕ್ಕಿದ್ದಂತೆ ಅಲರ್ಜಿ, ತೀವ್ರ ತುರಿಕೆ ಅಥವಾ ನೆಗಡಿ ಕಾಣಿಸಿಕೊಂಡರೆ ಈ ಮಾತ್ರೆಗಳನ್ನು ಬಳಸಬಹುದು.
ಒಮೆಪ್ರಜೋಲ್ (Tab Omeprazole): ಗ್ಯಾಸ್ಟ್ರಿಕ್, ಎದೆ ಉರಿ ಅಥವಾ ಅಸಿಡಿಟಿ ಸಮಸ್ಯೆಯಿಂದ ತಕ್ಷಣದ ಉಪಶಮನ ಪಡೆಯಲು ಇದು ನೆರವಾಗುತ್ತದೆ.
ಒಆರ್ಎಸ್ (ORS): ಭೇದಿ (ಅತಿಸಾರ) ಉಂಟಾದಾಗ ದೇಹದಿಂದ ನೀರು ಮತ್ತು ಅಗತ್ಯ ಖನಿಜಾಂಶಗಳು ಹೊರಹೋಗುತ್ತವೆ. ಅಂತಹ ಸಂದರ್ಭದಲ್ಲಿ ನಿರ್ಜಲೀಕರಣ (Dehydration) ತಡೆಯಲು ಒಆರ್ಎಸ್ ಬೆರೆಸಿದ ನೀರನ್ನು ಪದೇ ಪದೇ ಕುಡಿಯಬೇಕು.
ಡ್ರೋಟಾವೆರಿನ್ 40mg (Tab Drotaverine 40 mg): ತೀವ್ರ ಹೊಟ್ಟೆನೋವು ಹಾಗೂ ಮಹಿಳೆಯರಲ್ಲಿ ಮುಟ್ಟಿನ (Periods) ಸಮಯದ ನೋವಿನ ಶಮನಕ್ಕೆ ಈ ಮಾತ್ರೆ ಸಹಕಾರಿ.
ಸಿಲ್ವರ್ ಸಲ್ಫಾಡಯಾಜಿನ್ ಕ್ರೀಮ್ (Silver Sulfadiazine Cream): ಬೆಂಕಿ ಅಥವಾ ಬಿಸಿ ವಸ್ತುವಿನಿಂದ ಚರ್ಮ ಸುಟ್ಟಾಗ, ಕನಿಷ್ಠ 10 ನಿಮಿಷಗಳ ಕಾಲ ತಣ್ಣೀರು ಹೊಯ್ದು ಈ ಕ್ರೀಮ್ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ.
ಪೊವಿಡೋನ್ ಆಯಿಂಟ್ಮೆಂಟ್ (Povidone Ointment): ಇದೊಂದು ಉತ್ತಮ ಆಂಟಿಸೆಪ್ಟಿಕ್ ಕ್ರೀಮ್. ಗಾಯ, ಪೆಟ್ಟು ಅಥವಾ ಚರ್ಮ ಕತ್ತರಿಸಿದ ಜಾಗಕ್ಕೆ ಹಚ್ಚುವುದರಿಂದ ಸೋಂಕು ಹರಡುವುದನ್ನು ತಡೆಯಬಹುದು.
ಆಸ್ಪಿರಿನ್ 300mg (Tab Aspirin 300 mg): ಹೃದಯ ಸಂಬಂಧಿ ಕಾಯಿಲೆ ಇರುವವರು ಇದನ್ನು ಮನೆಯಲ್ಲಿಡುವುದು ಕಡ್ಡಾಯ. ಮಧ್ಯರಾತ್ರಿಯಲ್ಲಿ ಹಠಾತ್ತನೆ ತೀವ್ರ ಎದೆನೋವು ಕಾಣಿಸಿಕೊಂಡರೆ, ಆಸ್ಪತ್ರೆ ತಲುಪುವ ಮೊದಲು 300 mg ಆಸ್ಪಿರಿನ್ ಮಾತ್ರೆ ತೆಗೆದುಕೊಳ್ಳುವುದು ಜೀವ ರಕ್ಷಣೆಗೆ ಸಹಾಯ ಮಾಡುತ್ತದೆ.
ಗಮನಿಸಿ: ಈ ಮಾಹಿತಿಯು ವೈದ್ಯರು ನೀಡಿದ ಸಾಮಾನ್ಯ ಸಲಹೆಯಾಗಿದೆ. ಯಾವುದೇ ಔಷಧಗಳನ್ನು ಬಳಸುವ ಮೊದಲು ಅಥವಾ ಸೇವಿಸುವ ಮೊದಲು ಅರ್ಹ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














