Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂದು ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಪದಾಧಿಕಾರಿಗಳ ಅಧಿಕಾರ ಸ್ವೀಕಾರ : ಪತ್ರಕರ್ತ ಓಂಕಾರಮೂರ್ತಿಗೆ ಸನ್ಮಾನ

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 26 : ಜುಲೈ 1, 2026 ರಿಂದ 2026-27 ನೇ ಸಾಲಿನ ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರಾಗಿ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ತಜ್ಞ ರೋ. ಶಶಿಧರ್ ರಾವ್, ಕಾರ್ಯದರ್ಶಿಗಳಾಗಿ ನವೀಕರಿಸಬಹುದಾದ ಇಂಧನ ಬಳಕೆ ಅನುಷ್ಠಾನ ತಜ್ಞ ರೋ. ಮಂಜುನಾಥ್ ಭಾಗ್ವತ್ ಹಾಗೂ ಖಜಾಂಚಿಗಳಾಗಿ ರೋ. ಪಿ.ಬಿ. ಶಿವರಾಮ್ ಸೇರಿದಂತೆ ನಿರ್ದೇಶಕ ಮಂಡಳಿಯು ಆರೋಗ್ಯ, ಪರಿಸರ ಕಾಳಜಿ, ಶಿಕ್ಷಣ ಸೇರಿದಂತೆ ಅನೇಕ ಆಯಾಮಗಳಲ್ಲಿ ಅತ್ಯಂತ ಯಶಸ್ವಿಯಾಗಿ ಸೇವಾ ಕೈಂಕರ್ಯಗಳನ್ನು ಕಾರ್ಯನಿರ್ವಹಿಸುತ್ತಿದ್ದು, ಇಂದು ( 26 ಜುಲೈ 2026 ಭಾನುವಾರ) ನಗರದ ಡಿ.ಸಿ. ಸರ್ಕಲ್ ಬಳಿ ಇರುವ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ಬೆಳಗ್ಗೆ 10ರಿಂದ ನಡೆಯಲಿರುವ ಸಮಾರಂಭದಲ್ಲಿ ಔಪಚಾರಿಕ ಇನ್ಸ್ಟಾಲೇಷನ್ ಮೂಲಕ ದೀಕ್ಷಾಸ್ವೀಕಾರದ ಪ್ರಕ್ರಿಯೆಗಳು ಪರಿಪೂರ್ಣಗೊಳ್ಳಲಿವೆ.

ಕಾರ್ಯಕ್ರಮದಲ್ಲಿ ಇನ್ಸ್ಟಾಲೇಷನ್ ಆಫೀಸರ್ ಆಗಿ ನಿಕಟಪೂರ್ವ ಆರ್.ಐ.ಡಿ. 3160 ಡಿಸ್ಟ್ರಿಕ್ಟ್ ಗವರ್ನರ್ ರೋ. ಎಂ.ಕೆ. ರವೀಂದ್ರ, ಇಂಡಕ್ಷನ್ ಆಫೀಸರ್ ಆಗಿ ಪಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ರೋ. ಕೆ. ಮಧುಪ್ರಸಾದ್, ಅಸಿಸ್ಟೆಂಟ್ ಗವರ್ನರ್ ರೋ. ಸವಿತಾ ಶಿವಕುಮಾರ್, ಮುಖ್ಯಅತಿಥಿಗಳಾಗಿ ಜಸ್ಟಿಸ್ ಶ್ರೀ ಎಚ್. ಬಿಲ್ಲಪ್ಪ (ನಿವೃತ್ತ ನ್ಯಾಯಮೂರ್ತಿಗಳು, ಗೌ. ಕರ್ನಾಟಕ ಹೈ ಕೋರ್ಟ್), ಗೆಸ್ಟ್ ಆಫ್ ಆನರ್ ಆಗಿ ಡೆಪ್ಯೂಟಿ ಕನ್ಸರ್ವೇಟರ್ ಆಫ್ ಫಾರೆಸ್ಟ್ ಶ್ರೀ ಗೋಪ್ಯಾ ನಾಯಕ್, ಐ.ಎಫ್.ಎಸ್., ಕ್ಲಬ್ ನ ಪಾಸ್ಟ್ ಪ್ರೆಸಿಡೆಂಟ್ ರೋ. ದಿಲ್ಷದ್ ಉನ್ನೀಸಾ, ಪಾಸ್ಟ್ ಸೆಕ್ರೆಟರಿ ರೋ. ಅಮೃತಾ ಸಂತೋಷ್ ಸೇರಿದಂತೆ ಚಿತ್ರದುರ್ಗದ ಮೂರೂ ರೋಟರಿ ಕ್ಲಬ್ ಗಳ ಅನೇಕ ಸದಸ್ಯರು ಭಾಗವಹಿಸುವರು.
ನಿವೃತ್ತ ಪ್ರಿನ್ಸಿಪಾಲ್ ಹಾಗೂ ಚಿತ್ರದುರ್ಗ ರೋಟರಿ ಕ್ಲಬ್ ಗಳ ಹಿರಿಯ ಸದಸ್ಯರಲ್ಲೊಬ್ಬರಾದ ರೋ. ಉಮೇಶ್ ವೀರಣ್ಣ ತುಪ್ಪದ ಹಾಗೂ ಪಾಸ್ಟ್ ಅಸಿಸ್ಟೆಂಟ್ ಗವರ್ನರ್ ರೋ. ಗಾಯತ್ರಿ ಶಿವರಾಮ್ ಅವರುಗಳು ಸಭಾಕಾರ್ಯಕಲಾಪಗಳ ನಿರೂಪಣೆ – ನಿರ್ವಹಣೆ ನೆರವೇರಿಸಲಿದ್ದಾರೆ.

ಲಾಸಿಕಾ ಫೌಂಡೇಶನ್ ನ ಕಲಾವಿದರಾದ ಕು. ಚಿನ್ಮಯಿ ಶಾಸ್ತ್ರೀಯ ನೃತ್ಯವನ್ನು ಹಾಗೂ ವಿಶೇಷ ಚೇತನ ಕಲಾವಿದರೂ ಗದಗಿನ ಶಿವಯೋಗಿ ಪಂಚಾಕ್ಷರಿ ಗವಾಯಿಗಳ ಸಂಗೀತ ಪರಂಪರೆಯಲ್ಲಿ ಅಭ್ಯಾಸ ಮಾಡಿದ ವಿ. ಭೀಮರಾಜ್ ರವರು ಪ್ರಾರ್ಥನೆಯನ್ನು ನೆರವೇರಿಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಕೆ.ಪಿ. ಓಂಕಾರಮೂರ್ತಿ ಹಾಗೂ ಹಿರಿಯ ವೈದ್ಯರಾದ ಡಾ. ವಿ. ಹರಿ ಅವರಿಗೆ ಗೌರವವೂ ಸಲ್ಲಲಿದೆ.

ಕೆ.ಪಿ. ಓಂಕಾರಮೂರ್ತಿ ಪರಿಚಯ :
ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸದ್ಯ ಚಿತ್ರದುರ್ಗದ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಸಹಾಯಕ ವರದಿಗಾರರಾಗಿರುವ ಕೆ.ಪಿ.ಓಂಕಾರಮೂರ್ತಿ ಅವರು ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಬೆಳ್ಳಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಇವರ ‘ಡೆಡ್‌ಲೈನ್’ ಕಥೆಗೆ ಪ್ರಥಮ ಬಹುಮಾನ ಒಲಿದಿದ್ದು, 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಲಭಿಸಿದೆ. ಈ ಮೂಲಕ ಮಧ್ಯ ಕರ್ನಾಟಕದ ಪತ್ರಿಕಾ ವಲಯದಲ್ಲಿ ಓಂಕಾರಮೂರ್ತಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ.

ಮೂಲತಃ ಕೋಟೆನಾಡು ಚಿತ್ರದುರ್ಗದವರಾದ ಕೆ.ಪಿ. ಓಂಕಾರಮೂರ್ತಿ ಅವರು ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಯುವ ಪತ್ರಕರ್ತರಾಗಿದ್ದಾರೆ. ಮೈಸೂರಿನ ಪ್ರಸಿದ್ಧ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪೂರೈಸಿದ ಇವರು, ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಅತ್ಯಂತ ಪ್ರತಿಭಾವಂತರಾಗಿದ್ದ ಓಂಕಾರಮೂರ್ತಿ ಅವರು, ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಸಾಧನೆಗಾಗಿ ಪ್ರತಿಷ್ಠಿತ ‘ಸಂಪೆಮನೆ ಕೃಷ್ಣಮೂರ್ತಿ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದರು. ಕಾಲೇಜು ದಿನಗಳಲ್ಲಿ ವಿವಿಧ ಪತ್ರಿಕೋದ್ಯಮ ಹಾಗೂ ಸಾಹಿತ್ಯಕ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಹೆಗ್ಗಳಿಕೆ ಇವರದ್ದಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಬರವಣಿಗೆಯ ತೀವ್ರ ನಂಟು ಹೊಂದಿದ್ದ ಇವರು ‘ಉದಯವಾಣಿ’ ಸೇರಿದಂತೆ ನಾಡಿನ ಪ್ರಮುಖ ದಿನಪತ್ರಿಕೆಗಳಿಗೆ ನಿಯಮಿತವಾಗಿ ವೈಚಾರಿಕ ಹಾಗೂ ಪ್ರಚಲಿತ ವಿದ್ಯಮಾನಗಳ ಲೇಖನಗಳನ್ನು ಬರೆಯುತ್ತಿದ್ದರು. ಪ್ರಸ್ತುತ ಚಿತ್ರದುರ್ಗದ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಸಹಾಯಕ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಓಂಕಾರಮೂರ್ತಿ ಅವರು, ವೃತ್ತಿಪರ ವರದಿಗಾರಿಕೆಯ ಜೊತೆಗೆ ಸೃಜನಶೀಲ ಸಾಹಿತ್ಯ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now