Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಜು. 24 : ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ವಿರುದ್ದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹೈಡ್ರಾಮ ನಡೆದಿದೆ.

ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿನ ಒನಕೆ ಓಬವ್ವ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಒನಕೆ ಓಬವ್ವ ವೃತ್ತದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರ ವಿರುದ್ದ ಹರಿ ಹಾಯ್ದರು, ತದ ನಂತರ ಅಲ್ಲಿಂದ ಮೆರವಣಿಗೆಯ ಮೂಲಕ ರೋಟರಿ ಬಾಲಭವನ, ಡಾ.ಬಿ,ಆರ್.ಅಂಬೇಡ್ಕರ್ ವೃತ್ತ, ನಗರಠಾಣೆ ಮುಂಭಾಗದಿಂದ ಮಹಾವೀರ ವೃತ್ತ, ತಾಲ್ಲೂಕು ಕಚೇರಿ ವಾಸವಿ ವೃತ್ತವನ್ನು ಹಾದು ಮರಳಿ ಒನಕೆ ಓಬವ್ವ ವೃತ್ತಕ್ಕೆ ಮರಳುವಾಗ ಬಿಜೆಪಿ ಕಾರ್ಯಕರ್ತರಾದ ವೆಂಕಟೇಶ್ ಯಾದವ್ ಕಾಂಗ್ರೆಸ್ ಕಚೇರಿಯತ್ತ ಹೂರಟರು ಇದನ್ನು ತಿಳಿದ ಪೋಲಿಸರು ಅವರನ್ನು ತಡೆಯುವ ಕಾರ್ಯವನ್ನು ಮಾಡಿದರು ಆದರೂ ಸಹಾ ಅವರನ್ನು ತಳ್ಳಿಕೊಂಡು ಮುಂದೆ ಹೋದರು ಈ ಸಮಯದಲ್ಲಿ ಇವರ ಹಿಂದೆ ಇದ್ದ ಇತರೆ ಕಾರ್ಯಕರ್ತರು ಸಹಾ ಇವರನ್ನು ಹಿಂಬಾಲಿಸಿ ಕಾಂಗ್ರೆಸ್ ಕಚೇರಿಯ ಮುಂದೆ ಜಮಾಯಿಸಿದರು.

ಈ ಸಮಯದಲ್ಲಿ ಬಿಜೆಪಿ ಕಾರ್ಯದರ್ಶಿಯಾದ ಶ್ರೀಮತಿ ರೇಖಾ ರವರು ಪ್ರತಿಭಟನಾ ಸ್ಥಳದಿಂದ ಕಾಂಗ್ರೆಸ್ ಕಚೇರಿಯತ್ತ ನುಗ್ಗುವ ಪ್ರಯತ್ನವನ್ನು ಮಾಡಿದಾಗ ಅಲ್ಲಿದ್ದ ಮಹಿಳಾ ಪೋಲಿಸರು ಅವರನ್ನು ತಡೆಯುವ ಕಾರ್ಯವನ್ನು ಮಾಡಿದರೂ ಸಹಾ ಬಿಡದೆ ರಸ್ತೆಯ ಮೇಲೆ ಬಿದ್ದು ಹೊರಳಾಡಿ ಕಾಂಗ್ರೆಸ್ ಪಕ್ಷದ ವಿರುದ್ದ ಘೋಷಣೆಗಳನ್ನು ಕೂಗಿದರು. ಈ ಸಮಯದಲ್ಲಿ ಅವರನ್ನು ಅಲ್ಲಿಂದ ಕರೆದುಕೊಂಡು ಹೋಗುತ್ತಿದ್ಧಾಗ ಮತ್ತೇ ಪೋಲಿಸರಿಂದ ತಪ್ಪಿಸಿಕೊಂಡು ಕಾಂಗ್ರಸ್ ಕಚೇರಿಯತ್ತ ನುಗ್ಗುವ ಕಾರ್ಯವನ್ನು ಮಾಡಿದರು ಈಗ ಪೋಲೀಸರು ಅವರನ್ನು ಬಲವಾಗಿ ತಳ್ಳಿಕೊಂಡು ಹೋದರು. ಈ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರಸ್ ಪಕ್ಷ ಮತ್ತು ಆದರ ಮುಖಂಡರ ವಿರುದ್ದ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯನ್ನು ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೋಲಿಸರು ಕಾಂಗ್ರೆಸ್ ಕಚೇರಿಯ ಮುಂದಿನಿಂದ ಕದಿಸುವ ಕಾರ್ಯವನ್ನು ಮಾಡಿದಾಗ ಕಾರ್ಯಕರ್ತರು ಅಲ್ಲಿಂದ ಕದಲದೆ ಅಲ್ಲಿಯೇ ಕುಳಿತು ಕಾಂಗ್ರೆಸ್ ಸರ್ಕಾರ, ಪಕ್ಷ ಹಾಗೂ ಮುಖಂಡರ ವಿರುದ್ದ ಘೋಷಣೆಗಳನ್ನು ಕೂಗಿದರು. ಈ ಮಧ್ಯದಲ್ಲಿ ಪ್ರತಿಭಟನೆಯಲ್ಲಿ ಹಿಡಿದಿದ್ದ ಭೀತ್ತಿ ಪತ್ರಗಳನ್ನು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯತ್ತ ತೂರಿದರು, ಅಗ ಸ್ವಲ್ಪ ಸಮಯ ಗೊಂದಲ ಉಂಟಾಯಿತು. ಬಿಜೆಪಿ ಕಾರ್ಯಕರ್ತರು ಪೋಲಿಸರ ಮಧ್ಯ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಕಚೇರಿಯತ್ತ ನುಗ್ಗಲು ಬಿಜೆಪಿ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದರೆ ಆದನ್ನು ತಡೆಯುವ ಕಾರ್ಯವನ್ನು ಪೋಲಿಸರು ಮಾಡುತ್ತಿದ್ದರು.

ಈ ದೃಶ್ಯವನ್ನು ಒನಕೆ ಓಬವ್ವ ವೃತ್ತದಲ್ಲಿ ನೆರದಿದ್ದ ಸಾರ್ವಜನಿಕರು ಇಲ್ಲಿ ಏನಾಗುತ್ತಿದೆ ಎಂದು ತಿಳಿಯದೆ ಕಣ್ಣು ಬಿಟ್ಟು ನೋಡುತ್ತಿದ್ದರು, ಇದರ ಮಧ್ಯದಲ್ಲಿ ಹಲವಾರು ಜನತೆ ಬೇರೆಯವರಿಂದ ಇಲ್ಲಿ ಏನು ನಡೆಯುತ್ತಿದೆ ಎಂದು ಕೇಳಿ ತಿಳಿದುಕೊಳ್ಳುತ್ತಿದ್ದರು. ಬಿಜೆಪಿ ಪ್ರತಿಭಟನೆಯ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿಗಿಯಾದ ಪೋಲಿಸ್ ಕಾವಲು ಹಾಕಲಾಗಿತ್ತು, ಬಿಜೆಪಿಯವರು ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆಯನ್ನು ಮಾಡಿ ಕಾಂಗ್ರೆಸ್ ನಾಯಕರ ವಿರುದ್ದ ಘೋಷಣೆಯನ್ನು ಕೂಗುತ್ತಿದ್ದಾಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಸ್ಥಳಕ್ಕೆ ಆಗಮಿಸಿದರು, ಅವರು ಪ್ರತಿಭಟನೆಯ ಸ್ಥಳಕ್ಕೆ ಹೋಗಲು ಪ್ರಯತ್ನ ನಡೆಸಿದಾಗ ಪೋಲಿಸರು ಅವರನ್ನು ತಡೆದರು, ಈ ಸಮಯದಲ್ಲಿ ಅವರು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ ಷಾ ವಿರುದ್ದ ಧಿಕ್ಕಾರವನ್ನು ಕೂಗಿದರು. ತದ ನಂತರ ಅವರನ್ನು ಪೋಲಿಸರು ಡಿಸಿಸಿ ಕಚೇರಿಯ ಒಳಗಡೆ ಕಳುಹಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಚಿತ್ರದುರ್ಗ : ಬರ, ಭದ್ರಾ ಮೇಲ್ದಂಡೆ, ಗ್ಯಾರಂಟಿ ರಿಪೋರ್ಟ್ ರೆಡಿ ಇಟ್ಟುಕೊಳ್ಳಿ: ಸಿಎಂ ಸಭೆಗೂ ಮುನ್ನ ಅಧಿಕಾರಿಗಳಿಗೆ ಡಿಸಿ ಟಿ.ವೆಂಕಟೇಶ್ ಸೂಚನೆ

ಚಿತ್ರದುರ್ಗ : ಬೀದಿಗಿಳಿದು ಸೂಕ್ತ ಉತ್ತರ ನೀಡಲಿದ್ದೇವೆ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಎಂ.ಎಲ್.ಸಿ.ನವೀನ್ ಮುನ್ನೆಚ್ಚರಿಕೆ

ಶಾಸಕ ​ಟಿ. ರಘುಮೂರ್ತಿಗೆ ಸಚಿವ ಸ್ಥಾನ ನೀಡಲು ‘ಯುವ ಸೇನೆ’ ಪಟ್ಟು: ಬರಗೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ!

ಚಿತ್ರದುರ್ಗದಲ್ಲಿ ‘ದುರ್ಗೋತ್ಸವ’ ಆಚರಣೆಗೆ ಅಗ್ರಹ: ಸರ್ಕಾರದ ಗಮನಸೆಳೆಯಲು ಗಣೇಶ್ ಏಕಾಂಗಿ ಪ್ರತಿಭಟನೆ!

ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ರೈತರ ಆಗ್ರಹ: ರೈತ ಸಂಘ-ಹಸಿರುಸೇನೆಯಿಂದ ಪ್ರತಿಭಟನೆ

ನೀಟ್ ಅಕ್ರಮ, ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಖಂಡಿಸಿ ಚಿತ್ರದುರ್ಗದಲ್ಲಿ ವಕೀಲರ ಪ್ರತಿಭಟನೆ