ಇತ್ತೀಚಿನ ದಿನಗಳಲ್ಲಿ ಮೊಬೈಲ್ ಸಿಮ್ ಕಾರ್ಡ್ ಗಳು ಪ್ರತಿಯೊಬ್ಬರ ಜೀವನದ ಅತ್ಯಗತ್ಯ ಭಾಗವಾಗಿವೆ. ಆದರೆ ಇದರೊಂದಿಗೆ ಸಿಮ್ ಕಾರ್ಡ್ ಗಳಿಗೆ ಸಂಬಂಧಿಸಿದ ಸೈಬರ್ ವಂಚನೆಗಳ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ.
ಅಪರಾಧಿಗಳು ಹಾಗೂ ವಂಚಕರು ಇತರರ ದಾಖಲೆಗಳನ್ನು (ID Card) ದುರುಪಯೋಗಪಡಿಸಿಕೊಂಡು ನಕಲಿ ಸಿಮ್ ಕಾರ್ಡ್ ಗಳನ್ನು ಸಕ್ರಿಯಗೊಳಿಸಿ (Activate), ಅವುಗಳನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅಮಾಯಕ ನಾಗರಿಕರು ಅನಗತ್ಯವಾಗಿ ಕಾನೂನು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಸಾರ್ವಜನಿಕರನ್ನು ಇಂತಹ ಸೈಬರ್ ವಂಚನೆಗಳಿಂದ ರಕ್ಷಿಸಲು ಕೇಂದ್ರ ಸರ್ಕಾರವು ‘ಸಂಚಾರ್ ಸಾಥಿ’ (Sanchar Saathi) ಎಂಬ ಅತ್ಯಂತ ಸುರಕ್ಷಿತ ಮತ್ತು ಸರಳ ವೆಬ್ ಪೋರ್ಟಲ್ ಹಾಗೂ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ನಲ್ಲಿರುವ ‘TAFCOP’ (Telecom Analytics for Fraud Management and Consumer Protection) ಸೌಲಭ್ಯದ ಮೂಲಕ ಪ್ರತಿಯೊಬ್ಬ ನಾಗರಿಕರು ತಮ್ಮ ಗುರುತಿನ ಚೀಟಿ (ಆಧಾರ್/ಐಡಿ) ಮೇಲೆ ಪ್ರಸ್ತುತ ಎಷ್ಟು ಸಿಮ್ ಕಾರ್ಡ್ ಗಳು ಸಕ್ರಿಯವಾಗಿವೆ ಎಂಬುದನ್ನು ಸುಲಭವಾಗಿ ತಿಳಿಯಬಹುದು.
ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಗಳ ಸಂಖ್ಯೆ ತಿಳಿಯಲು ಈ ಸರಳ ಹಂತಗಳನ್ನು ಅನುಸರಿಸಿ:
ಹಂತ 1: ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನ ವೆಬ್ ಬ್ರೌಸರ್ ನಲ್ಲಿ ಸಂಚಾರ್ ಸಾಥಿ ಅಧಿಕೃತ ವೆಬ್ಸೈಟ್ ಗೆ (sancharsaathi.gov.in) ಭೇಟಿ ನೀಡಿ.
ಹಂತ 2: ಹೋಮ್ ಪೇಜ್ ನಲ್ಲಿರುವ TAFCOP ವಿಭಾಗಕ್ಕೆ ಹೋಗಿ, ಅಲ್ಲಿ ನೀಡಲಾದ ಬಾಕ್ಸ್ ನಲ್ಲಿ ನಿಮ್ಮ ಪ್ರಸ್ತುತ 10 ಅಂಗಳ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ 3: ಸ್ಕ್ರೀನ್ ಮೇಲೆ ಕಾಣಿಸುವ ‘ಕ್ಯಾಪ್ಚಾ ಕೋಡ್’ (Captcha Code) ನಮೂದಿಸಿ, ‘Validate Captcha’ ಮೇಲೆ ಕ್ಲಿಕ್ ಮಾಡಿ.
ಹಂತ 4: ತಕ್ಷಣವೇ ನಿಮ್ಮ ಮೊಬೈಲ್ಗೆ ಬರುವ ಒಟಿಪಿ (OTP) ನಮೂದಿಸಿ ಲಾಗಿನ್ ಆಗಿ.
ಹಂತ 5: ಲಾಗಿನ್ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ನಿಮ್ಮ ಗುರುತಿನ ಚೀಟಿಯ ಮೇಲೆ ಜಾರಿಯಾಗಿರುವ ಎಲ್ಲಾ ಮೊಬೈಲ್ ಸಂಖ್ಯೆಗಳ ಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ.
ಅನಧಿಕೃತ ಅಥವಾ ನಕಲಿ ಸಿಮ್ ಕಾರ್ಡ್ ಗಳನ್ನು ಬ್ಲಾಕ್ ಮಾಡುವುದು ಹೇಗೆ?
ನಿಮ್ಮ ಪಟ್ಟಿಯಲ್ಲಿ ನೀವು ಖರೀದಿಸದಿರುವ ಅಥವಾ ಪ್ರಸ್ತುತ ಬಳಸದೇ ಇರುವ ಯಾವುದೇ ಮೊಬೈಲ್ ಸಂಖ್ಯೆ ಕಂಡುಬಂದಲ್ಲಿ, ಅದನ್ನು ತಕ್ಷಣವೇ ಬ್ಲಾಕ್ ಮಾಡಲು ವರದಿ (Report) ಮಾಡಬಹುದು:
ಸಂಖ್ಯೆ ಆಯ್ಕೆ ಮಾಡಿ: ಅನುಮಾನಾಸ್ಪದ ಸಂಖ್ಯೆಯ ಪಕ್ಕದಲ್ಲಿರುವ ಚೆಕ್ಬಾಕ್ಸ್ (Check box) ಮೇಲೆ ಕ್ಲಿಕ್ ಮಾಡಿ.
ಆಯ್ಕೆಗಳನ್ನು ಗುರುತಿಸಿ:
ಆ ಸಂಖ್ಯೆ ನಿಮ್ಮದೇ ಅಲ್ಲದಿದ್ದರೆ ‘Not My Number’ ಎಂದು ಆಯ್ಕೆಮಾಡಿ.
ಅದು ನೀವು ಹಿಂದೆ ಬಳಸಿ ಈಗ ಸ್ಥಗಿತಗೊಳಿಸಿದ ಸಂಖ್ಯೆಯಾಗಿದ್ದರೆ ‘Not Required’ ಎಂದು ಆಯ್ಕೆಮಾಡಿ.
ವರದಿ ಸಲ್ಲಿಸಿ: ಸೂಕ್ತ ಆಯ್ಕೆ ಮಾಡಿದ ನಂತರ ಕೆಳಗೆ ನೀಡಲಾದ ‘Report’ ಬಟನ್ ಮೇಲೆ ಕ್ಲಿಕ್ ಮಾಡಿ.

ಟ್ರ್ಯಾಕಿಂಗ್ ಐಡಿ : ವರದಿ ಯಶಸ್ವಿಯಾಗಿ ಸಲ್ಲಿಕೆಯಾದ ನಂತರ ಸ್ಕ್ರೀನ್ ಮೇಲೆ ‘ಟಿಕೆಟ್ ಐಡಿ’ ಅಥವಾ ‘ರಿಕ್ವೆಸ್ಟ್ ಐಡಿ’ ಕಾಣಿಸುತ್ತದೆ ಹಾಗೂ ನಿಮ್ಮ ಮೊಬೈಲ್ಗೆ SMS ಕೂಡ ಬರಲಿದೆ. ನಿಮ್ಮ ದೂರಿನ ಪ್ರಸ್ತುತ ಸ್ಥಿತಿಯನ್ನು (Status) ತಿಳಿಯಲು ಈ ಐಡಿಯನ್ನು ಕಾಯ್ದಿರಿಸಿಕೊಳ್ಳಿ.
ದೂರು ಸ್ವೀಕರಿಸಿದ ನಂತರ, ಸರ್ಕಾರವು ಜಿಯೋ, ಏರ್ಟೆಲ್, ವಿಐ ನಂತಹ ಸಂಬಂಧಿತ ಟೆಲಿಕಾಂ ಕಂಪನಿಗಳ ಮೂಲಕ ಆ ಸಂಖ್ಯೆಯನ್ನು ಮರು-ಪರಿಶೀಲಿಸುತ್ತದೆ. ಸೌಲಭ್ಯ ಪಡೆದ ವ್ಯಕ್ತಿಯು ಸೂಕ್ತ ದಾಖಲೆಗಳನ್ನು ಸಲ್ಲಿಸಲು ವಿಫಲವಾದರೆ, ಆ ನಕಲಿ ಸಿಮ್ ಕಾರ್ಡ್ ಅನ್ನು ಶಾಶ್ವತವಾಗಿ ಬ್ಲಾಕ್ ಮಾಡಲಾಗುತ್ತದೆ.
ಜಾಗರೂಕರಾಗಿರಿ – ಸೈಬರ್ ದೂರು ನೋಂದಾಯಿಸಿ:
ಯಾವುದೇ ರೀತಿಯ ಡಿಜಿಟಲ್ ವಂಚನೆಗೆ ಒಳಗಾಗದಂತೆ ತಡೆಯಲು ತಿಂಗಳಿಗೆ ಕನಿಷ್ಠ ಒಮ್ಮೆಯಾದರೂ ಸಂಚಾರ್ ಸಾಥಿ ಪೋರ್ಟಲ್ ಗೆ ಭೇಟಿ ನೀಡಿ ನಿಮ್ಮ ಹೆಸರಿನಲ್ಲಿರುವ ಸಿಮ್ ಗಳನ್ನು ಪರಿಶೀಲಿಸಿಕೊಳ್ಳಿ. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್ ನಿಂದ ಅಧಿಕೃತ ‘Sanchar Saathi’ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು.
ನಿಮ್ಮ ಹೆಸರಿನ ನಕಲಿ ಸಿಮ್ ಬಳಸಿ ಈಗಾಗಲೇ ಬೃಹತ್ ಹಣಕಾಸು ವಂಚನೆ ಅಥವಾ ಗಂಭೀರ ಸೈಬರ್ ಅಪರಾಧ ನಡೆದಿರುವುದು ಕಂಡುಬಂದರೆ, ತಕ್ಷಣವೇ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (cybercrime.gov.in) ನಲ್ಲಿ ದೂರು ನೀಡಿ ಅಥವಾ 1930 ರಾಷ್ಟ್ರೀಯ ಸೈಬರ್ ಹೆಲ್ಪ್ ಲೈನ್ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಿರಿ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












