ದೆಹಲಿ.ಜುಲೈ.21: ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (NHAI) ವಾಹನ ಸವಾರರಿಗೆ ಬೃಹತ್ ರಿಲೀಫ್ ನೀಡಿದ್ದು, ಮನೆಯಲ್ಲೇ ಕುಳಿತು ‘ಡಿಜಿಟಲ್ ಲೋಕಲ್ ಪಾಸ್’ ಪಡೆಯುವ ಹೊಸ ಸೌಲಭ್ಯವನ್ನು ಜಾರಿಗೆ ತಂದಿದೆ. ಇದರೊಂದಿಗೆ ಟೋಲ್ ಪ್ಲಾಜಾಗಳಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಸಾರ್ವಜನಿಕರು ಮೊಬೈಲ್ ಆ್ಯಪ್ ಮೂಲಕವೇ ಸುಲಭವಾಗಿ ಸ್ಥಳೀಯ ಪಾಸ್ ಪಡೆದುಕೊಳ್ಳಬಹುದು. ಒಂದು ತಿಂಗಳ ಅವಧಿಗೆ ಚಾಲ್ತಿಯಲ್ಲಿರುವ ಈ ಪಾಸ್ ಹೊಂದಿರುವವರು ಟೋಲ್ ಮೂಲಕ ಎಷ್ಟು ಬಾರಿಯಾದರೂ ಪ್ರಯಾಣಿಸಬಹುದು.
ಮನೆಯಲ್ಲೇ ಕುಳಿತು ಸ್ಥಳೀಯ ಪಾಸ್:
ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ವಾಹನ ಸವಾರರು “ರಾಜಮಾರ್ಗ ಯಾತ್ರಾ” (RaJmarg Yatra) ಮೊಬೈಲ್ ಆ್ಯಪ್ ಮೂಲಕ ಸ್ಥಳೀಯ ಪಾಸ್ ಪಡೆಯಬಹುದು. ಈ ಹಿಂದೆ ಸ್ಥಳೀಯ ಪಾಸ್ಗಾಗಿ ಜನರು ನೇರವಾಗಿ ಟೋಲ್ ಪ್ಲಾಜಾಗಳಿಗೆ ತೆರಳಿ ಗುರುತಿನ ಚೀಟಿ ಹಾಗೂ ವಿಳಾಸದ ದಾಖಲೆಗಳನ್ನು ಸಲ್ಲಿಸಬೇಕಿತ್ತು. ಈ ಪ್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಸಂಪೂರ್ಣ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಕೇವಲ ಕೆಲವೇ ನಿಮಿಷಗಳಲ್ಲಿ ಆನ್ಲೈನ್ನಲ್ಲೇ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಈ ಡಿಜಿಟಲ್ ಪಾಸ್ ಹೇಗೆ ಕೆಲಸ ಮಾಡುತ್ತದೆ?
‘ರಾಜಮಾರ್ಗ ಯಾತ್ರಾ’ ಆ್ಯಪ್ನಲ್ಲಿ ‘ಲೋಕಲ್ ಪಾಸ್’ ಎಂಬ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಸದ್ಯಕ್ಕೆ ದೆಹಲಿಯ ಅರ್ಬನ್ ಎಕ್ಸ್ಟೆನ್ಶನ್ ರೋಡ್-2 (UER-2) ನಲ್ಲಿರುವ ಮುಂಡ್ಕಾ-ಬಕ್ಕರ್ವಾಲಾ ಟೋಲ್ ಪ್ಲಾಜಾದಲ್ಲಿ ಇದನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ ದೇಶಾದ್ಯಂತ ಇರುವ ಎಲ್ಲಾ ಟೋಲ್ ಪ್ಲಾಜಾಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು.
ಅರ್ಜಿದಾರರು ನಿಜವಾಗಿಯೂ ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ‘GIS’ ಆಧಾರಿತ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದರಿಂದಾಗಿ ಇಡೀ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕ, ವೇಗ ಹಾಗೂ ನಿಖರತೆಯಿಂದ ಕೂಡಿರಲಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








