ಸುದ್ದಿಒನ್, ಹಿರಿಯೂರು, ಜುಲೈ. 20 : ಮುಂಬರುವ ಹಿರಿಯೂರು ವಿಧಾನಸಭಾ ಚುನಾವಣೆಯಲ್ಲಿ ನನಗೆ ಅವಕಾಶ ಕಲ್ಲಿಸಿದ್ದಲ್ಲಿ ಧರ್ಮಪುರ ಹೋಬಳಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆಂದು ಸಮಾಜ ಸೇವಕರಾದ ಜಿ. ಜಯರಾಮಯ್ಯ ಹೇಳಿದರು.
ತಾಲೂಕಿನ ಧರ್ಮಪುರ ಹೋಬಳಿಯ ಖಂಡೇನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಕಾವಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹುಟ್ಟು ಹಬ್ಬದ ಅಂಗವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾತಾಡಿದರು.
ಹಿರಿಯೂರು ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ಈ ಬಾರಿ ಉಪಚುನಾವಣೆಯಲ್ಲಿ ಮತದಾರರು ಒಮ್ಮೆ ಅವಕಾಶ ಕಲ್ಪಿಸಲಿದ್ದಾರೆ ಎಂಬ ಭರವಸೆಯಿದೆ. ಧರ್ಮಪುರ ಹೋಬಳಿಯಲ್ಲಿ ಸಮಗ್ರ ರೈತರ ನೀರಾವರಿ ಯೋಜನೆಗೆ ಮೊದಲ ಆದ್ಯತೆ ನೀಡಲಾಗುವುದು. ಉತ್ತಮ ಆಸ್ಪತ್ರೆ, ಉದ್ಯೋಗ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಖಂಡೇನಹಳ್ಳಿಯ ಶ್ರೀ ಶನೇಶ್ವರ ಸ್ವಾಮಿ ದೇವರು, ಬೇತೂರು ಪಾಳ್ಯ, ಕೋಡಿಹಳ್ಳಿ, ಕೂಡ್ಲಹಳ್ಳಿ, ಮಸ್ಕಲ್, ವದ್ದಿಕೆರೆ, ಕಲ್ಲಹಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ಧರ್ಮಪುರ ಗ್ರಾಮದ ಶ್ರೀ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಇದಾದ ಬಳಿಕ ತಾಲೂಕಿನ ಭೀಮನಬಂಡೆ ಬಳಿ ಇರುವ ಶುಭೋದಯ ವೃದ್ಧಾಶ್ರಮದಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು. ವೃದ್ಧಾಶ್ರಮದವರ ಜೊತೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡ ಜಯರಾಮಯ್ಯ ಅವರು ವೃದ್ಧರಿಗೆ ಪ್ರಸಾದ ವಿತರಿಸಿದರು. ತಾಲೂಕಿನ ವಿವಿಧ ಭಾಗಗಳಲ್ಲಿ ಜಿ. ಜಯರಾಮಯ್ಯನವರ ಅಭಿಮಾನಿಗಳು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಸನ್ಮಾನಿಸುವ ಮೂಲಕ ಜಯರಾಮಯ್ಯನವರ ಜನ್ಮದಿನಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಈರಣ್ಣ, ಮಂಜು ಬ್ಯಾಡರಹಳ್ಳಿ, ಮಂಜು ಬೇತೂರು ಪಾಳ್ಯ, ಇಂದುಧರ, ಕೃಷ್ಣಮೂರ್ತಿ ಮಸ್ಕಲ್, ರಘು ಕೋಡಿಹಳ್ಳಿ, ಹೋನ್ನೇಶ್ ಗೌಡ, ಹನುಮಂತರಾಯ, ಬಾಬು, ವೆಂಕಟೇಶ್ , ಸುದೀಪ್, ಮಂಜುನಾಥ್, ಭರತ್ ಮದ್ದನಕುಂಟೆ, ಮಹೇಂದ್ರ, ವಿರೇಶ್, ಕಾಟನಾಯಕನಹಳ್ಳಿ ಕಿಟ್ಟಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









