Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಾರತದಲ್ಲಿನ ಯುರೇನಿಯಂ ಮತ್ತು ಥೋರಿಯಂ ಲಭ್ಯತೆಯ ವಿಶೇಷ ವಿವರಗಳು : ನಿವೃತ್ತ ಭೂವಿಜ್ಞಾನಿ ಜೆ. ಪರಶುರಾಮ ಅವರಿಂದ ಮಹತ್ವದ ಮಾಹಿತಿ

---Advertisement---

 

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

ಸುದ್ದಿಒನ್, ಚಿತ್ರದುರ್ಗ, ಜುಲೈ. 19 : ಬ್ರಹ್ಮಾಂಡದ ಅದ್ಭುತ ಸೃಷ್ಟಿಗಳಲ್ಲಿ ಒಂದಾದ ವಿಕಿರಣಶೀಲ ಲೋಹಗಳಾದ ಯುರೇನಿಯಂ ಮತ್ತು ಥೋರಿಯಂ ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ನಿವೃತ್ತ ಹಿರಿಯ ಭೂವಿಜ್ಞಾನಿಗಳಾದ ಜೆ. ಪರಶುರಾಮ ಅವರು ದೇಶದಲ್ಲಿನ ಈ ಪರಮಾಣು ಇಂಧನಗಳ ಲಭ್ಯತೆ, ಇತಿಹಾಸ ಮತ್ತು ಭವಿಷ್ಯದ ಬಳಕೆಯ ಕುರಿತು ಸವಿಸ್ತಾರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಯುರೇನಿಯಂ ಭೂಮಿಯಲ್ಲಿ ನೈಸರ್ಗಿಕವಾಗಿ ಸಿಗುವ ಅತ್ಯಂತ ಭಾರವಾದ ವಿಕಿರಣಶೀಲ ಲೋಹವಾಗಿದೆ. ಇದು ಕೊಟ್ಯಾಂತರ ವರ್ಷಗಳ ಹಿಂದೆ ಬಾಹ್ಯಾಕಾಶದಲ್ಲಿ ನಡೆದ ಬೃಹತ್ ನಕ್ಷತ್ರಗಳ ಸ್ಪೋಟ (ಸೂಪರ್ನೋವಾ) ಮತ್ತು ನ್ಯೂಟ್ರಾನ್ ನಕ್ಷತ್ರಗಳ ವಿಲೀನದ ಸಮಯದಲ್ಲಿ ರೂಪುಗೊಂಡಿತು. ಬ್ರಹ್ಮಾಂಡದಲ್ಲಿರುವ ಅತ್ಯಂತ ಭಾರವಾದ ಧಾತುಗಳು ನಕ್ಷತ್ರಗಳ ಒಳಭಾಗದಲ್ಲಿ ಉಂಟಾಗುವ ತೀವ್ರ ಉಷ್ಣತೆ ಮತ್ತು ಒತ್ತಡದಿಂದ ಸೃಷ್ಠಿಯಾಗುತ್ತದೆ. ನಕ್ಷತ್ರಗಳು ತಮ್ಮ ಜೀವಿತಾವದಿಯ ಕೊನೆಯಲ್ಲಿ ಬೃಹತ್ ಪ್ರಮಾಣದಲ್ಲಿ ಸ್ಫೋಟಗೊಂಡಾಗ ಅಪಾರ ಶಕ್ತಿಯು ಹಗುರವಾದ ಧಾತುಗಳನ್ನು ಒಗ್ಗೂಡಿಸಿ ಯುರೇನಿಯಂನಂತಹ ಭಾರವಾದ ಧಾತುಗಳನ್ನು ಸೃಷ್ಠಿಸುತ್ತದೆ. ಭೂಮಿ ರೂಪುಗೊಳ್ಳುತ್ತಿದ್ದ ಆರಂಭಿಕ ಹಂತದಲ್ಲಿ ಈ ಯುರೇನಿಯಂ ಕಣಗಳು ಭೂಮಿಯ ಕರಗಿದ ಲಾವಾದಲ್ಲಿ ಬೆರೆತು, ಭೂಮಿಯ ಹೊರಪದರದಲ್ಲಿ ಬಂಡೆಗಳ ರೂಪದಲ್ಲಿ ಶೇಖರಣೆಗೊಂಡವು. ಭೂಮಿಯು ತಣ್ಣಗಾದಂತೆ ಮ್ಯಾಗ್ಮಾ ತಂಪಾಗಿ ಬಂಡೆಗಳಾಗಿ ಬದಲಾಯಿತು. ಯುರೇನಿಯಂ ರಾಸಾಯನಿಕವಾಗಿ ಅಮ್ಲಜನಕದೊಂದಿಗೆ ಸೇರಿ ವಿವಿಧ ಖನಿಜಗಳಾಗಿ ಭೂಮಿಯ ಮೇಲ್ಮೈಪದರದಲ್ಲಿ ಉಳಿಯಿತು.

ಭಾರತದಲ್ಲಿ ಯುರೇನಿಯಂ ನಿಕ್ಷೇಪಗಳ ಸದ್ಯದ ಸ್ಥಿತಿ
ಭಾರತದಲ್ಲಿ ಪ್ರಸ್ತುತ ಸುಮಾರು 2.73 ಲಕ್ಷ ಟನ್ ಯುರೇನಿಯಂ ಅದಿರು ಪತ್ತೆಯಾಗಿದೆ. ಇದು ಸರಿ ಸುಮಾರು 2,32,000 ಟನ್ ಶುದ್ಧ ವಿದ್ಯುತ್ ಸ್ಥಾವರಗಳಿಗಾಗಿ ಈ ಅದಿರನ್ನು ಬಳಸಿಕೊಳ್ಳುತ್ತದೆ. ಭಾರತದಲ್ಲಿ ಯುರೇನಿಯಂ ಲಭ್ಯತೆಯನ್ನು ನೋಡುವುದಾದರೆ, ಆಂಧ್ರಪ್ರದೇಶದ ಕಡಪ ಜಿಲ್ಲೆಯ ತಮ್ಮಲಪಲ್ಲೆ ಪ್ರದೇಶವು ದೇಶದಲ್ಲೇ ಅತಿಹೆಚ್ಚು ಯುರೇನಿಯಂ ನಿಕ್ಷೇಪಗಳನ್ನು ಹೊಂದಿದೆ. ಎರಡನೆಯದಾಗಿ ಜಾರ್ಖಂಡ ರಾಜ್ಯದಲ್ಲಿ ಶೇಖಡ 26ರಷ್ಟು ಯುರೇನಿಯಂ ನಿಕ್ಷೇಪವಿದೆ. ಇದರೊಂದಿಗೆ ಮೇಘಾಲಯ ಮತ್ತು ರಾಜಸ್ಥಾನದಲ್ಲೂ ಗಣನೀಯ ಪ್ರಮಾಣದ ನಿಕ್ಷೇಪಗಳನ್ನು ಗುರುತಿಸಲಾಗಿದೆ. ಆದರೆ ನಮ್ಮ ದೇಶದಲ್ಲಿ ಲಭ್ಯವಿರುವ ಯುರೇನಿಯಂ ಅದಿರು ಕಡಿಮೆ ದರ್ಜೆಯದ್ದಾಗಿದೆ. ಪ್ರಸ್ತುತ ಭಾರತೀಯ ಯುರೇನಿಯಂ ನಿಗಮ (UCIL) ದೇಶದಲ್ಲಿ ಇದರ ಗಣಿಗಾರಿಕೆ ಮತ್ತು ಸಂಸ್ಕರಣಾ ಕಾರ್ಯಗಳನ್ನು ನಿರ್ವಹಿಸುತ್ತಿದೆ.

ಭಾರತದಲ್ಲಿ ಯುರೇನಿಯಂ ನಿಕ್ಷೇಪಗಳು ಕಡಿಮೆ ಇರುವುದರಿಂದ ಮತ್ತು ಲಭ್ಯವಿರುವ ಅದಿರು ಕಡಿಮೆ ದರ್ಜೆಯದ್ದಾಗಿರುವುದರಿಂದ, ದೇಶವು ತನ್ನ ಅಗತ್ಯದ ಬಹುಪಾಲು ಯುರೇನಿಯಂ ಅನ್ನು ರಷ್ಯಾ, ಖಝಾಕಿಸ್ತಾನ್, ಫ್ರಾನ್ಸ್, ಕೆನಡಾ ಮತ್ತು ಆಸ್ಟೇಲಿಯಾದಂತಹ ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ ಭಾರತವು ಯುರೇನಿಯಂ ಬದಲಾಗಿ ದೀರ್ಘಾವಧಿಯ ವಿದ್ಯುತ್ ಉತ್ಪಾದನೆಗೆ ಥೋರಿಯಂ ಅನ್ನು ಅವಲಂಬಿಸಿದೆ. ಭಾರತದಲ್ಲಿ ವಿಶ್ವದಲ್ಲೇ ಅತಿಹೆಚ್ಚು ಅಂದರೆ ಸುಮಾರು 5 ಲಕ್ಷ ಟನ್ ಥೋರಿಯಂ ಲಭ್ಯವಿದೆ. ಭಾರತವು ಥೋರಿಯಂ ಅನ್ನು ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುವುದಿಲ್ಲ, ಏಕೆಂದರೆ ಭಾರತವು ಥೋರಿಯಂ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ದೇಶದ ಕೇರಳ ಮತ್ತು ಇತರ ಕರಾವಳಿ ಪ್ರದೇಶಗಳಲ್ಲಿ ಥೋರಿಯಂ ಸಮೃದ್ಧವಾಗಿ ದೊರೆಯುತ್ತದೆ. ನಮ್ಮ ವಿಜ್ಞಾನಿಗಳು ಭವಿಷ್ಯದಲ್ಲಿ ಥೋರಿಯಂ ಅನ್ನು ಇಂಧನವಾಗಿ ಬಳಸಲು ಮೂರು ಹಂತದ ಅಣು ಕಾರ್ಯಕ್ರಮವನ್ನು ರೂಪಿಸಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಯುರೇನಿಯಂ ಮತ್ತು ಥೋರಿಯಂ ಮಾನವನಿಗೆ ಅತ್ಯಂತ ಉಪಯುಕ್ತವಾಗಿವೆ. ಇವೆರಡೂ ವಿಕಿರಣಶೀಲ ಲೋಹಗಳಾಗಿದ್ದು, ಇವುಗಳನ್ನು ಮುಖ್ಯವಾಗಿ ಅಪಾರ ಪ್ರಮಾಣದ ವಿದ್ಯುತ್ ಉತ್ಪಾದಿಸಲು ಪರಮಾಣು ಇಂಧನವಾಗಿ ಬಳಸಲಾಗುತ್ತಿದೆ. ಥೋರಿಯಂನಿಂದ ಭವಿಷ್ಯದಲ್ಲಿ ಸುರಕ್ಷಿತ ವಿದ್ಯುತ್ ಪಡೆಯುವ ತಂತ್ರಜ್ಞಾನವನ್ನು ಭಾರತದ ಬಾಬಾ ಪರಮಾಣು ಸಂಶೋಧನಾ ಕೇಂದ್ರ (BARC) ಅಭಿವೃದ್ಧಿಪಡಿಸುತ್ತಿದೆ. ಕೇವಲ ಇಂಧನ ಮಾತ್ರವಲ್ಲದೆ, ಯುರೇನಿಯಂ ಅನ್ನು ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳಲ್ಲಿ ಮತ್ತು ಕ್ಷ-ಕಿರಣ (X-ray) ಸಾಧನಗಳಲ್ಲಿ ಬಳಸಲಾಗುತ್ತಿದೆ. ಹಾಗೆಯೇ ಯುರೇನಿಯಂ ಅನ್ನು ಪರಮಾಣು ಬಾಂಬ್ ತಯಾರಿಸಲು ಸಹ ಬಳಸಬಹುದು. ಈ ಹಿನ್ನೆಲೆಯಲ್ಲಿ, ಯುರೇನಿಯಂ ಮತ್ತು ಥೋರಿಯಂ ವಿಕಿರಣವು ಮಾನವನಿಗೆ ಹಾಗೂ ಪರಿಸರಕ್ಕೆ ದಕ್ಕೆಯಾಗದಂತೆ ಜವಾಬ್ದಾರಿಯುತವಾಗಿ ಬಳಸುವುದು ಅತ್ಯಂತ ಕಡ್ಡಾಯವಾಗಿದೆ ಎಂದು ನಿವೃತ್ತ ಭೂವಿಜ್ಞಾನಿ ಜೆ. ಪರಶುರಾಮ ಅವರು ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now