ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜು. 18 : ವಿದ್ಯಾವಂತರ ತಾತ್ಸಾರದಿಂದ ನಗರದ ಪ್ರದೇಶಗಳಲ್ಲಿ ಎಸ್ಐಆರ್ ಹಿನ್ನಡೆಯಾಗುತ್ತಿದೆ ಎಂದು ಬಿಎಲ್ಓ2 ಆದ ಎನ್ ಡಿ ಕುಮಾರ್ ಆರೋಪಿಸಿದ್ದಾರೆ.
ಶನಿವಾರ ಚಿತ್ರದುರ್ಗ ನಗರದ ವಾರ್ಡದ ನಾಲ್ಕನೇ ವಾರ್ಡಿನ 123ನೇ ಭೂತ್ನಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣಾ ಆಯೋಗ ಪ್ರತಿ ಮತದಾರರಿಗೆ ಎರಡು ಫಾರಂಗಳನ್ನು ನೀಡುತ್ತಿದೆ ಇದರಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ಅದರಲ್ಲಿ ಒಂದಕ್ಕೆ ಸಹಿಯನ್ನು ಹಾಕುವುದರ ಮೂಲಕ ಬಿಎಲ್ಎಗಳಿಗೆ ನೀಡಬೇಕು ಇದರಲ್ಲಿ ಇನ್ನೂಂದು ಫಾರಂಗೆ ಬಿಎಲ್ಎಗಳು ಸಹಿಯನ್ನು ಹಾಕಿ ನಿಮಗೆ ನೀಡುತ್ತಾರೆ ಇದನ್ನು ಮತದಾರರ ಕರಡು ಪ್ರತಿಯನ್ನು ಪ್ರಕಟ ಮಾಡುವವರಿಗೂ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಿದೆ ಇದರ ಬಗ್ಗೆ ಯಾರು ಸಹಾ ಹೆದರುವ ಅಗತ್ಯ ಇಲ್ಲ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಎಸ್.ಐ.ಆರ್.ಉತ್ತಮವಾಗಿ ನಡೆಯುತ್ತಿದೆ ಆದರೆ ನಗರದಲ್ಲಿ ಇದರ ಬಗ್ಗೆ ವಿದ್ಯಾವಂತರು ನಿರ್ಲಕ್ಷ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಚಿತ್ರದುರ್ಗ ನಗರ ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಹಿಂದೆ ಇದೆ, ನಗರಸಭೆ ಮತ್ತು ಶಿಕ್ಷಣ ಇಲಾಖೆಯು ಸಿಬ್ಬಂದಿ ಉತ್ತಮವಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಜಿಲ್ಲಾಡಳಿತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕರಾದ ಜಯಣ್ಣ, ಶಾಸಕರ ಆಪ್ತ ಸಹಾಯಕರಾದ ಶಿವಾನಂದ್ ಕಮ್ಯೂನಿಟಿ ಮೊಬೈಲ್ ದೀಪಾ ಹಾಗೂ ಬಿಎಲ್ಓ ರೇಣುಕ. ನಗರಸಭಾ ಮಾಜಿ ಸದಸ್ಯರಾದ ರಾಜೇಶ್. ಕಾಂಗ್ರೆಸ್ ಮುಖಂಡರಾದ ಶಶಿಕಿರಣ್ ಹಾಗೂ ವಾರ್ಡಿನ ಮತದಾರ ಭಾಗವಹಿಸಿದ್ದರು
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











