Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯ ಸರ್ಕಾರದಿಂದ ವಂಶವೃಕ್ಷ ಪ್ರಮಾಣ ಪತ್ರಕ್ಕೆ ಹೊಸ ಮಾರ್ಗಸೂಚಿ ಪ್ರಕಟ! ಈ ದಾಖಲೆಗಳು ಕಡ್ಡಾಯ

---Advertisement---

 

ಬೆಂಗಳೂರು : ​ಕರ್ನಾಟಕ ಸರ್ಕಾರವು ಸಾರ್ವಜನಿಕರ ವಿವಿಧ ಅಗತ್ಯಗಳಿಗಾಗಿ ಆನ್‌ಲೈನ್ ತಂತ್ರಾಂಶದ ಮೂಲಕ ವಂಶವೃಕ್ಷ (Family Tree) ದೃಢೀಕರಣ ಪತ್ರವನ್ನು ವಿತರಿಸುವ ಕುರಿತು ಮಹತ್ವದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
​ವಾರಸುದಾರಿಕೆ ಪ್ರಕರಣಗಳಲ್ಲಿ ಜಮೀನಿನ ಖಾತೆ ಬದಲಾವಣೆ, ಪಿಂಚಣಿ ಸೌಲಭ್ಯಗಳು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ವತ್ತುಗಳ ವರ್ಗಾವಣೆ ಹಾಗೂ ಜೀವಿತ ಸದಸ್ಯರ ದೃಢೀಕರಣಕ್ಕಾಗಿ ವಂಶವೃಕ್ಷ ಕಡ್ಡಾಯವಾಗಿದ್ದು, ಅರ್ಜಿದಾರರು ಹಾಗೂ ಅಧಿಕಾರಿಗಳು ಅನುಸರಿಸಬೇಕಾದ ಸಂಪೂರ್ಣ ನಿಯಮಗಳ ವಿವರ ಇಲ್ಲಿದೆ:

​ವಂಶವೃಕ್ಷ ಪ್ರಮಾಣ ಪತ್ರ ಪಡೆಯಲು ಹೊರಡಿಸಲಾದ ಅಧಿಕೃತ ಮಾರ್ಗಸೂಚಿಗಳು

​1. ಅರ್ಜಿದಾರರು ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲಾತಿಗಳು

​ರೂ. 100/- ಛಾಪಾ ಕಾಗದದ ಅಫಿಡವಿಟ್: ಅರ್ಜಿದಾರರು ನಿಗದಿತ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ, ನೋಟರಿಯವರಿಂದ ಪ್ರಮಾಣೀಕರಿಸಿದ ವಂಶವೃಕ್ಷದ ಅಫಿಡವಿಟ್ ಸಲ್ಲಿಸಬೇಕು. ಅಫಿಡವಿಟ್‌ನಲ್ಲಿ ಅರ್ಜಿದಾರರ ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯ.

​ಗುರುತಿನ ಚೀಟಿಗಳು: ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ ಹಾಗೂ ಅಫಿಡವಿಟ್‌ನಲ್ಲಿ ಹೆಸರಿಸಲಾಗಿರುವ ಕುಟುಂಬದ ಇತರ ಎಲ್ಲಾ ಜೀವಂತ ಸದಸ್ಯರ ಆಧಾರ್ ಕಾರ್ಡ್/ ಚೀಟಿ/ ಪಾಸ್‌ಪೋರ್ಟ್/ ಚಾಲನಾ ಪರವಾನಗಿ/ ಪ್ಯಾನ್ ಕಾರ್ಡ್/ ಜನನ ಪ್ರಮಾಣ ಪತ್ರ/ ದೃಢೀಕೃತ ಶಾಲಾ ದಾಖಲಾತಿಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.

​ಫೋಟೋ: ಅರ್ಜಿದಾರರ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಫೋಟೋ.

​ಮರಣ ಪ್ರಮಾಣ ಪತ್ರ: ಕುಟುಂಬದಲ್ಲಿ ಮೃತಪಟ್ಟ ಸದಸ್ಯರಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಡಿಜಿಟಲ್ ಅಥವಾ ದೃಢೀಕೃತ ಭೌತಿಕ ಮರಣ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

​ಅರ್ಜಿ ಸಲ್ಲಿಕೆ ಕೇಂದ್ರಗಳು: ಈ ಎಲ್ಲಾ ದಾಖಲೆಗಳೊಂದಿಗೆ ನಾಡ ಕಚೇರಿ, ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಆನ್‌ಲೈನ್ ನಾಗರೀಕ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

​2. ಅರ್ಜಿದಾರರ ಆಧಾರ್ e-KYC ಕಡ್ಡಾಯ

​ವಂಶವೃಕ್ಷಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಯ ಆಧಾರ್ e-KYC ಮಾಡಿಸುವುದು ಕಡ್ಡಾಯವಾಗಿದೆ. ಅರ್ಜಿದಾರರು ಕರ್ನಾಟಕದ ವಿಳಾಸವನ್ನು ಹೊಂದಿರುವ ಆಧಾರ್ ಸಂಖ್ಯೆಯ ಮೂಲಕ OTP ಅಥವಾ ಬಯೋಮೆಟ್ರಿಕ್ ಬಳಸಿ ಕಡ್ಡಾಯವಾಗಿ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

​3. ಕುಟುಂಬದ ಎಲ್ಲಾ ಮೃತ ಸದಸ್ಯರ ದಾಖಲಾತಿ ನೀಡುವ ಕುರಿತು ನಿಯಮಗಳು

​ಕುಟುಂಬದಲ್ಲಿ ಮೃತರಾದ ಸದಸ್ಯರ ವಿವರಗಳನ್ನು ವಂಶವೃಕ್ಷದಲ್ಲಿ ಸೇರಿಸಲು ಈ ಕೆಳಗಿನ ಕ್ರಮಗಳನ್ನು ಪಾಲಿಸಬೇಕು:

​3(ಎ): ಮೃತ ಸದಸ್ಯರ ವಿವರ ದಾಖಲಿಸಲು ಡಿಜಿಟಲ್ ಮರಣ ಪ್ರಮಾಣ ಪತ್ರದ ಸಂಖ್ಯೆಯನ್ನು ಒದಗಿಸಬೇಕು.

​3(ಬಿ): ಡಿಜಿಟಲ್ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದರೆ, ದೃಢೀಕೃತ ಭೌತಿಕ ಮರಣ ಪ್ರಮಾಣ ಪತ್ರದ ಸಂಖ್ಯೆಯನ್ನು ತಂತ್ರಾಂಶದಲ್ಲಿ ನಮೂದಿಸಿ, ಅದರ PDF ಪ್ರತಿಯನ್ನು ಅಪ್‌ಲೋಡ್ ಮಾಡಬೇಕು.

​3(ಸಿ) – ಪರ್ಯಾಯ ದಾಖಲೆಗಳು ಮತ್ತು ಮಹಜರ್: ಒಂದು ವೇಳೆ ಡಿಜಿಟಲ್ ಹಾಗೂ ಭೌತಿಕ ಮರಣ ಪ್ರಮಾಣ ಪತ್ರ ಎರಡೂ ಲಭ್ಯವಿಲ್ಲದಿದ್ದಲ್ಲಿ, ಮೃತ ವ್ಯಕ್ತಿಯ ಕೆಳಗಿನ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ದಾಖಲೆಯಾಗಿ ಸಲ್ಲಿಸಬೇಕು: ​(ಪಾಸ್‌ಪೋರ್ಟ್/ ಚಾಲನಾ ಪರವಾನಗಿ/ ಪ್ಯಾನ್ ಕಾರ್ಡ್/ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳ ಐ-ಕಾರ್ಡ್/ ವಿದ್ಯಾರ್ಥಿ ಗುರುತಿನ ಚೀಟಿ/ ಅಂಕಪಟ್ಟಿ/ ಶಾಲಾ ವರ್ಗಾವಣೆ ಪತ್ರ (TC)/ ಪಡಿತರ ಚೀಟಿ/ ಸಾಮಾಜಿಕ ಭದ್ರತೆ ಅಥವಾ ಮಾಜಿ ಸೈನಿಕರ ಪಿಂಚಣಿ ಆದೇಶ ದಾಖಲೆಗಳು/ ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ/ ಅಂಗವಿಕಲ ಗುರುತಿನ ಚೀಟಿ/ ಮಾಜಿ ಸೈನಿಕರ ಸಿಎಸ್ ಡಿ ಕ್ಯಾಂಟೀನ್ ಕಾರ್ಡ್/ ಸಂಧ್ಯಾ ಸುರಕ್ಷಾ ಗುರುತಿನ ಚೀಟಿ/ ಎನ್‌ಆರ್‌ಇಜಿಎ ಉದ್ಯೋಗ ಕಾರ್ಡ್/ ಯಶಸ್ವಿನಿ ಕಾರ್ಡ್/ ಸ್ಥಳೀಯ ಸಂಸ್ಥೆಗಳ ಐ ಕಾರ್ಡ್/ ಆರೋಗ್ಯ ವಿಮಾ ಯೋಜನೆಗಳ ಸ್ಮಾರ್ಟ್ ಕಾರ್ಡ್/ ಹಿರಿಯ ನಾಗರಿಕರ ಐಡಿ ಕಾರ್ಡ್/ ಚುನಾವಣೆ ಗುರುತಿನ ಚೀಟಿ/ ವಿದ್ಯುತ್ ಮೀಟರ್ ಆರ್‌ಆರ್‌ ಸಂಖ್ಯೆ/ ಜನನ ಪ್ರಮಾಣಪತ್ರ/ 10 ವರ್ಷಗಳ ಅಧ್ಯಯನ ಪ್ರಮಾಣಪತ್ರ/ ಕುಟುಂಬ ಐಡಿ). ​ಇದರೊಂದಿಗೆ, ಗ್ರಾಮ ಆಡಳಿತ ಅಧಿಕಾರಿಗಳು (VA) ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಹೇಳಿಕೆ ಪಡೆದು, ವೀಡಿಯೋ ಅಥವಾ ಬರವಣಿಗೆಯ ಮಹಜರ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.

​(ಪಾಸ್‌ಪೋರ್ಟ್/ ಚಾಲನಾ ಪರವಾನಗಿ/ ಪ್ಯಾನ್ ಕಾರ್ಡ್/ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳ ಐ-ಕಾರ್ಡ್/ ವಿದ್ಯಾರ್ಥಿ ಗುರುತಿನ ಚೀಟಿ/ ಅಂಕಪಟ್ಟಿ/ ಶಾಲಾ ವರ್ಗಾವಣೆ ಪತ್ರ (TC)/ ಪಡಿತರ ಚೀಟಿ/ ಸಾಮಾಜಿಕ ಭದ್ರತೆ ಅಥವಾ ಮಾಜಿ ಸೈನಿಕರ ಪಿಂಚಣಿ ಆದೇಶ ದಾಖಲೆಗಳು/ ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ/ ಅಂಗವಿಕಲ ಗುರುತಿನ ಚೀಟಿ/ ಮಾಜಿ ಸೈನಿಕರ ಸಿಎಸ್ ಡಿ ಕ್ಯಾಂಟೀನ್ ಕಾರ್ಡ್/ ಸಂಧ್ಯಾ ಸುರಕ್ಷಾ ಗುರುತಿನ ಚೀಟಿ/ ಎನ್‌ಆರ್‌ಇಜಿಎ ಉದ್ಯೋಗ ಕಾರ್ಡ್/ ಯಶಸ್ವಿನಿ ಕಾರ್ಡ್/ ಸ್ಥಳೀಯ ಸಂಸ್ಥೆಗಳ ಐ ಕಾರ್ಡ್/ ಆರೋಗ್ಯ ವಿಮಾ ಯೋಜನೆಗಳ ಸ್ಮಾರ್ಟ್ ಕಾರ್ಡ್/ ಹಿರಿಯ ನಾಗರಿಕರ ಐಡಿ ಕಾರ್ಡ್/ ಚುನಾವಣೆ ಗುರುತಿನ ಚೀಟಿ/ ವಿದ್ಯುತ್ ಮೀಟರ್ ಆರ್‌ಆರ್‌ ಸಂಖ್ಯೆ/ ಜನನ ಪ್ರಮಾಣಪತ್ರ/ 10 ವರ್ಷಗಳ ಅಧ್ಯಯನ ಪ್ರಮಾಣಪತ್ರ/ ಕುಟುಂಬ ಐಡಿ).

​ಇದರೊಂದಿಗೆ, ಗ್ರಾಮ ಆಡಳಿತ ಅಧಿಕಾರಿಗಳು (VA) ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಹೇಳಿಕೆ ಪಡೆದು, ವೀಡಿಯೋ ಅಥವಾ ಬರವಣಿಗೆಯ ಮಹಜರ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.

​3(ಡಿ): ಒಂದು ವೇಳೆ ಕಂಡಿಕೆ 3(ಸಿ) ರಲ್ಲಿ ಸೂಚಿಸಲಾದ ಯಾವುದೇ ಗುರುತಿನ ಚೀಟಿಗಳು ಲಭ್ಯವಿಲ್ಲದೇ ಹೋದ ಸಂದರ್ಭದಲ್ಲೂ ಸಹ, ಗ್ರಾಮ ಆಡಳಿತ ಅಧಿಕಾರಿಗಳು ಕ್ಷೇತ್ರ ಪರಿಶೀಲನೆ ನಡೆಸಿ, ಗ್ರಾಮಸ್ಥರ ಹೇಳಿಕೆಗಳ ಆಧಾರದ ಮೇಲೆ ವೀಡಿಯೋ ಅಥವಾ ಕೈಬರವಣಿಗೆಯ ಮಹಜರ್ ವರದಿಯನ್ನು ಕಡ್ಡಾಯವಾಗಿ ಸಿದ್ಧಪಡಿಸಿ ಸಲ್ಲಿಸಬೇಕಾಗುತ್ತದೆ.

​ಸಾರ್ವಜನಿಕರು ವಂಶವೃಕ್ಷ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಾಗ ಈ ಮೇಲಿನ ಎಲ್ಲಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆ ಕೋರಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now