Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮನುಷ್ಯರಿಗಿಂತ ಬೊಂಬೆಗಳೇ ಹೆಚ್ಚು! 20 ಜನರಷ್ಟೇ ವಾಸಿಸುವ ಈ ಹಳ್ಳಿಯ ವಿಚಿತ್ರ ಕಥೆ ಕೇಳಿದರೆ ಬೆಚ್ಚಿಬೀಳುತ್ತೀರಿ

---Advertisement---

ಮನುಷ್ಯರಿಲ್ಲದ ಹಳ್ಳಿಯನ್ನು ಊಹಿಸಿಕೊಳ್ಳುವುದೇ ಕಷ್ಟ. ಆದರೆ ಜಪಾನ್‌ನಲ್ಲಿ ಒಂದು ಹಳ್ಳಿ ಇದೆ. ಅಲ್ಲಿ ಜನರಿಗಿಂತ ಬೊಂಬೆಗಳೇ ಹೆಚ್ಚು. ಬೀದಿಗಳಿಂದ ಹಿಡಿದು ಅಂಗಡಿಗಳು, ಶಾಲೆ, ಬಸ್ ನಿಲ್ದಾಣ, ಹೊಲಗಳವರೆಗೆ ಎಲ್ಲೆಡೆ ಮಾನವ ಗಾತ್ರದ ಬೊಂಬೆಗಳು ಕಾಣಿಸುತ್ತವೆ. ಮೊದಲ ನೋಟಕ್ಕೆ ಜನರು ನಿಂತಿರುವಂತೆ ಕಂಡರೂ, ಹತ್ತಿರ ಹೋದಾಗ ಅವೆಲ್ಲ ಗೊಂಬೆಗಳೆಂಬ ಸತ್ಯ ಅರಿವಾಗುತ್ತದೆ.

ಜಪಾನ್‌ನ ಶಿಕೋಕು ದ್ವೀಪದಲ್ಲಿರುವ ಈ ಹಳ್ಳಿಯ ಹೆಸರು ನಾಗೋರೊ. ಒಂದು ಕಾಲದಲ್ಲಿ ಜನಸಂದಣಿಯಿಂದ ಕಂಗೊಳಿಸುತ್ತಿದ್ದ ಈ ಗ್ರಾಮ, ಕಾಲಕ್ರಮೇಣ ಜನರ ವಲಸೆಯಿಂದ ಬಹುತೇಕ ಖಾಲಿಯಾಗಿದೆ. ಉದ್ಯೋಗ ಹಾಗೂ ಉತ್ತಮ ಜೀವನಕ್ಕಾಗಿ ಯುವಕರು ನಗರಗಳಿಗೆ ತೆರಳಿದರೆ, ಉಳಿದಿದ್ದ ವೃದ್ಧರಲ್ಲಿ ಹಲವರು ನಿಧನರಾಗಿದ್ದಾರೆ. ಪರಿಣಾಮವಾಗಿ ಇಂದು ಈ ಗ್ರಾಮದಲ್ಲಿ ಕೇವಲ 20ರಷ್ಟು ಮಂದಿ ಮಾತ್ರ ವಾಸಿಸುತ್ತಿದ್ದು, ಅವರಲ್ಲೂ ಹೆಚ್ಚಿನವರು ವಯೋವೃದ್ಧರು.

ಬೊಂಬೆಗಳ ಊರಾಗಿ ಮಾರ್ಪಟ್ಟದ್ದು ಹೇಗೆ?
ಈ ಹಳ್ಳಿಯನ್ನು ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದು ಅಯಾನೋ ತ್ಸುಕಿಮಿ ಎಂಬ ಮಹಿಳೆ. ಹಲವು ವರ್ಷಗಳ ಬಳಿಕ ತನ್ನ ತವರು ಗ್ರಾಮಕ್ಕೆ ಮರಳಿದಾಗ, ಪರಿಚಿತ ಮುಖಗಳೆಲ್ಲ ಕಣ್ಮರೆಯಾಗಿರುವುದನ್ನು ಕಂಡು ಅವರು ಭಾವುಕರಾದರು. ತಮ್ಮ ತಂದೆಯ ನೆನಪಿಗಾಗಿ ಮೊದಲ ಮಾನವ ಗಾತ್ರದ ಬೊಂಬೆಯನ್ನು ತಯಾರಿಸಿ ಹೊಲದಲ್ಲಿ ಇರಿಸಿದರು.
ಆ ಬಳಿಕ ನಿಧನರಾದ ಅಥವಾ ಗ್ರಾಮ ತೊರೆದ ಜನರನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಒಂದೊಂದೇ ಬೊಂಬೆಗಳನ್ನು ತಯಾರಿಸಿ ಅವರಿದ್ದ ಸ್ಥಳಗಳಲ್ಲೇ ಇರಿಸಲು ಆರಂಭಿಸಿದರು. ಹೀಗೆ ನಿಧಾನವಾಗಿ ಇಡೀ ಗ್ರಾಮವೇ ಬೊಂಬೆಗಳ ಲೋಕವಾಗಿ ರೂಪಾಂತರಗೊಂಡಿತು.

ಅಯಾನೋ ತ್ಸುಕಿಮಿ ಇದುವರೆಗೆ 400ಕ್ಕೂ ಹೆಚ್ಚು ಮಾನವ ಗಾತ್ರದ ಬೊಂಬೆಗಳನ್ನು ತಯಾರಿಸಿದ್ದಾರೆ. ವಿಶೇಷವೆಂದರೆ, ಪ್ರತಿಯೊಂದು ಬೊಂಬೆಗೂ ಹೆಸರು ಇಟ್ಟು ಸ್ಥಳೀಯ ದಾಖಲೆಗಳಲ್ಲಿ ನೋಂದಾಯಿಸಲಾಗಿದೆ. ಇಂದು ನಾಗೋರೊ ಗ್ರಾಮದಲ್ಲಿ ಜೀವಂತ ಜನರಿಗಿಂತ ಬೊಂಬೆಗಳ ಸಂಖ್ಯೆಯೇ ಹೆಚ್ಚಾಗಿದೆ.
ಒಮ್ಮೆ ಜನರಿಲ್ಲದೆ ಮೌನವಾಗಿದ್ದ ಈ ಗ್ರಾಮ, ಇದೀಗ ತನ್ನ ವಿಶಿಷ್ಟತೆಯಿಂದ ವಿಶ್ವದ ಪ್ರವಾಸಿಗರನ್ನು ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳು ಹಾಗೂ ಗೂಗಲ್‌ನಲ್ಲೂ ಈ “ಬೊಂಬೆಗಳ ಹಳ್ಳಿ” ವಿಶೇಷ ಆಕರ್ಷಣೆಯ ತಾಣವಾಗಿ ಗುರುತಿಸಿಕೊಂಡಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now