ಬೆಂಗಳೂರು.ಜುಲೈ.18: ರಾಷ್ಟ್ರಕವಿ ಕುವೆಂಪು ಅವರ ವಿರಚಿತ ಕರ್ನಾಟಕದ ಹೆಮ್ಮೆಯ ನಾಡಗೀತೆ ʻಜಯ ಭಾರತ ಜನನಿಯ ತನುಜಾತೆʼಯಲ್ಲಿ ಈ ಹಿಂದೆ ಕೈಬಿಡಲಾಗಿದ್ದ ʻಬೌದ್ಧರುದ್ಯಾನʼ ಎಂಬ ಪದವನ್ನು ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಮಹತ್ವದ ಬದಲಾವಣೆಗೆ ಸಂಬಂಧಿಸಿದಂತೆ ಡಾ. ಪುರುಷೋತ್ತಮ ಬಿಳಿಮಲೆ ನೇತೃತ್ವದ ತಜ್ಞರ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ್ದ ಅಧಿಕೃತ ಶಿಫಾರಸನ್ನು ಅಂಗೀಕರಿಸಲಾಗಿದೆ.
ಕುವೆಂಪು ಅವರ ʻಜಯ ಭಾರತ ಜನನಿಯ ತನುಜಾತೆʼ ನಾಡಗೀತೆಯಲ್ಲಿ ʻಬೌದ್ಧರುದ್ಯಾನʼ ಪದವನ್ನು ಮರು ಸೇರ್ಪಡೆಗೊಳಿಸುವ ಕುರಿತು ಡಾ. ಪುರುಷೋತ್ತಮ ಬಿಳಿಮಲೆ ನೇತೃತ್ವದ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ಅಧಿಕೃತ ಶಿಫಾರಸು ಮಾಡಿದ್ದು, ಪರಿಷ್ಕೃತ ನಾಡಗೀತೆಯನ್ನು ಮೈಸೂರು ಅನಂತಸ್ವಾಮಿ ಅವರ ಮೂಲ ರಾಗದಲ್ಲೇ ಸಂಯೋಜಿಸಲು ಸರ್ಕಾರ ಆದೇಶಿಸಿದೆ. pic.twitter.com/6xrDNVa078
ಇದನ್ನು ಓದಿWATCH : ಸಾರ್ವಜನಿಕ ಸಭೆಯಲ್ಲೇ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆಗೆ ಮಸಿ ಬಳಿದ ಮಹಿಳೆ: ವಿಡಿಯೋ ಭಾರಿ ವೈರಲ್!— DIPR Karnataka (@KarnatakaVarthe) July 18, 2026
ಇದರೊಂದಿಗೆ, ಪರಿಷ್ಕೃತ ನಾಡಗೀತೆಯನ್ನು ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿರುವ ಮೂಲ ರಾಗ ಮತ್ತು ಧಾಟಿಯಲ್ಲೇ ಹಾಡಬೇಕು ಎಂದು ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಈ ನಿರ್ಧಾರವು ನಾಡಗೀತೆಯ ಮೂಲ ಸ್ವರೂಪ ಹಾಗೂ ಸಾಹಿತ್ಯಿಕ ಮೌಲ್ಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪರಿಗಣಿಸಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









