Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯ ಸರ್ಕಾರದಿಂದ 21 ಮಂದಿ ತಹಶೀಲ್ದಾರ್ ಗಳ ವರ್ಗಾವಣೆಗೊಳಿಸಿ ಆದೇಶ

---Advertisement---

 

ಬೆಂಗಳೂರು: ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್-1 ಮತ್ತು ಗ್ರೇಡ್-2 ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ.
​ಕರ್ನಾಟಕ ಸರ್ಕಾರದ ಸಚಿವಾಲಯದ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಜುಲೈ 14, 2026 ರಂದು ಈ ಅಧಿಕೃತ ಅಧಿಸೂಚನೆಯನ್ನು (ಸಂಖ್ಯೆ: ಇ-ಆರ್‌ಡಿ 42 ಎಟಿಎಸ್ 2026) ಹೊರಡಿಸಿದ್ದಾರೆ. ಈ ಆದೇಶದಲ್ಲಿ ಒಟ್ಟು ಮೂರು ಭಾಗಗಳಲ್ಲಿ ತಹಶೀಲ್ದಾರ್‌ಗಳ ವರ್ಗಾವಣೆ, ಸ್ಥಳನಿಯುಕ್ತಿ ಹಾಗೂ ಕೆಲವು ಹಿಂದಿನ ವರ್ಗಾವಣೆ ಆದೇಶಗಳ ಮಾರ್ಪಾಡು/ರದ್ದತಿಯನ್ನು ಮಾಡಲಾಗಿದೆ.

ವರ್ಗಾವಣೆಗೊಂಡ ತಹಶೀಲ್ದಾರ್ ಗಳು

​ಕೀರ್ತನ ಕೆ.ಆರ್: ವಿಶೇಷ ತಹಶೀಲ್ದಾರ್ (ವಸೂಲಾತಿ) ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಮೈಸೂರು ಇಲ್ಲಿಂದ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

​ಮೊಹಮದ್ ಮೋಹಸೀನ್: ಕಮಲಾಪುರ ತಾಲೂಕಿನ (ಕಲಬುರಗಿ ಜಿಲ್ಲೆ) ತಹಶೀಲ್ದಾರ್ ಗ್ರೇಡ್-1 ಹುದ್ದೆಯಲ್ಲೇ ಮುಂದುವರೆಸಿ ಆದೇಶಿಸಲಾಗಿದೆ.

​ಜಿ. ಗಣೇಶ್ ಸವಣೂರ: ಸವಣೂರು ತಾಲೂಕಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ತಹಶೀಲ್ದಾರ್ ಗ್ರೇಡ್-1 ರ ಖಾಲಿ ಹುದ್ದೆಗೆ ಸ್ಥಳನಿಯುಕ್ತಿ ಮಾಡಲಾಗಿದೆ.

​ಜೆ. ರವೀಂದ್ರ ರೆಡ್ಡಿ ಮತ್ತು ವೆಂಕನಗೌಡ: ಇವರಿಬ್ಬರ ನಡುವೆ ಪರಸ್ಪರ ಹುದ್ದೆಗಳ ಅದಲು-ಬದಲು ಮಾಡಲಾಗಿದ್ದು, ರವೀಂದ್ರ ರೆಡ್ಡಿ ಅವರನ್ನು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಗೂ ಹಾಗೂ ವೆಂಕನಗೌಡ ಅವರನ್ನು ಕಲಬುರಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವಿಶೇಷ ತಹಶೀಲ್ದಾರ್ ಹುದ್ದೆಗೂ ವರ್ಗಾಯಿಸಲಾಗಿದೆ.

​ಬಿ.ಆರ್. ಮುನಿವೆಂಕಟಪ್ಪ: ಚಳ್ಳಕೆರೆ ತಾಲೂಕಿನಿಂದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ವಿಶೇಷ ತಹಶೀಲ್ದಾರ್ ಖಾಲಿ ಹುದ್ದೆಗೆ ನೇಮಿಸಲಾಗಿದೆ.

​ರಾಕೇಶ್ ಫ್ರಾನಿಸಿಸ್: ಹೊಸನಗರ ತಾಲೂಕಿನಿಂದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ತಹಶೀಲ್ದಾರ್ ಗ್ರೇಡ್-1 ಖಾಲಿ ಹುದ್ದೆಗೆ ನಿಯೋಜಿಸಲಾಗಿದೆ.

​ಹೆಚ್.ಬಿ. ಹಾಲೇಶ್: ದಾವಣಗೆರೆ ತಾಲೂಕಿನಿಂದ ದಾವಣಗೆರೆ ಉಪವಿಭಾಗಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಗ್ರೇಡ್-2 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

​ಎಂ.ಎ. ನಾಗರಾಜ್: ಹಾಸನ ತಾಲೂಕು ಕಚೇರಿಯಿಂದ ಆಲೂರು ತಾಲೂಕಿಗೆ ಮಾಡಲಾಗಿದ್ದ ಇವರ ಹಿಂದಿನ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ, ಹಾಸನದಲ್ಲೇ ಮುಂದುವರಿಸಲಾಗಿದೆ.

​ಇವರೊಂದಿಗೆ ಪಿ.ಎಂ. ದೊಡ್ಡಮನಿ (ಹಾನಗಲ್), ಜಿ.ಎಸ್. ನಾಯಕ (ಇಂಡಿ), ವೆಂಕಟೇಶ ಶರಣಪ್ಪ (ಕಮಲಾಪುರ), ಭೀಮಣ್ಣ ಗುಂಡಪ್ಪ ಕುದ್ರಿ (ಕಲಬುರಗಿ), ಮುರಳಿಧರ್ (ಕೊಪ್ಪಳ), ಗಂಗಾಧರ ಪಾಟೀಲ್ (ಕಲಬುರಗಿ), ಕೆ. ಸುರೇಶ್ (ಭದ್ರಾವತಿ), ಪರಶುರಾಮಪ್ಪ ಬಿ. (ದಾವಣಗೆರೆ) ಸೇರಿದಂತೆ ಹಲವು ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.

​ ಸ್ಥಳ ನಿರೀಕ್ಷೆಯಲ್ಲಿದ್ದವರಿಗೆ ಪೋಸ್ಟಿಂಗ್

ಸ್ಥಳ ನಿರೀಕ್ಷೆಯಲ್ಲಿದ್ದ ಪ್ರಮುಖ ಅಧಿಕಾರಿಗಳಾದ ಡಾ: ದೊಡ್ಡಪ್ಪ ಹೂಗಾರ (ಅಳ್ನಾವರ ತಾಲೂಕು), ಡಾ: ಅಶ್ವಥ್ ಎಂ.ಬಿ. (ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ, ಬೆಂಗಳೂರು), ಹೆಚ್.ಎನ್. ರಾಮಚಂದ್ರ (ಬಿ.ಎಂ.ಆರ್.ಸಿ.ಎಲ್. ಬೆಂಗಳೂರು), ಬಿ.ಎಸ್. ಕಡಕಭಾವಿ (ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ), ಪ್ರಕಾಶ್ ಹೊಳಪ್ಪಗೋಳ (ಧಾರವಾಡ ಜಿಲ್ಲಾಧಿಕಾರಿ ಕಚೇರಿ), ಸುರೇಶ್ ಜಿ. ಬಾಲೇಹೊಸೂರು (ಗದಗ ಉಪವಿಭಾಗ) ಮತ್ತು ಹೆಚ್. ಹೊನ್ನಮ್ಮ (ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ) ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳನಿಯುಕ್ತಿ ಆದೇಶ ನೀಡಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now