ಸುದ್ದಿಒನ್, ಚಿತ್ರದುರ್ಗ, ಜುಲೈ. 12 : ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ, ಚಿತ್ರದುರ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಡಿಸೆಬಿಲಿಟಿ NGO ಅಲೈಯನ್ಸ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನಿನ ಅರಿವು ಮತ್ತು ನೆರವು ಶಿಬಿರದ ಸಮಾರೋಪ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಈ ಮಹತ್ವದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಫೋರ್ಟ್ ವತಿಯಿಂದ ಕ್ಲಬ್ಬಿನ ಅಧ್ಯಕ್ಷರಾದ ರೊ. ಜಗನ್ನಾಥ ಶೆಟ್ಟಿ, ಕಾರ್ಯದರ್ಶಿ ರವಿ. ಎಂ.ವಿ, ಮಾಜಿ ಅಧ್ಯಕ್ಷರಾದ ರೊ. ಮಾರುತಿ ಮೋಹನ್, ರೊ. ಶ್ರೀಕಾಂತ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಶ್ರೀಗಳಾದ ಶ್ರೀ ಮಹಾಂತ ಲಿಂಗೇಶ್ವರ ಮಹಾಸ್ವಾಮೀಜಿಯವರು, ವಿಕಲಚೇತನರಿಗೆ ಬಸವಾದಿ ಶರಣರ ವಚನಾಧಾರಿತ ತತ್ವಗಳ ಆಧಾರದ ಮೇಲೆ ಆಶೀರ್ವಚನ ನೀಡಿದರು.
ಅಂಗವಿಕಲರ ನೆರವಿಗಾಗಿ ನಡೆದ ಈ ಸೇವಾ ಸಮಯದಲ್ಲಿ ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಫೋರ್ಟ್ ವತಿಯಿಂದ ವಿಕಲಚೇತನರಿಗಾಗಿ ವ್ಹೀಲ್ ಚೇರ್ ಅನ್ನು ಕೊಡುಗೆಯಾಗಿ ನೀಡುವ ಮೂಲಕ ಕ್ಲಬ್ಬಿನ ಸದಸ್ಯರೆಲ್ಲರೂ ಸಾರ್ಥಕ ಸಮಯವನ್ನು ಕಳೆದರು.




