Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಯೋಗೀಶ್ ಸಹ್ಯಾದ್ರಿ ಪ್ರಮಾಣ ವಚನ ಸ್ವೀಕಾರ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 12 : ರೋಟರಿಕ್ಲಬ್ ಸೇವೆ-ಜಾಗತಿಕ ಶಾಂತಿ ರೋಟರಿ ಆಶಯವಾಗಿದೆ ಎಂದು ರೋಟರಿ ಡಿಸ್ಟ್ರಿಕ್ಟ್ ಗೌರ್ನರ್ ಎಲೆಕ್ಟ್ ರೊ. ಪಿ.ಹೆಚ್.ಎಫ್. ಡಾ. ತ್ರಿವಿಕ್ರಮ್ ಜೋಷಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ಭಾನುವಾರ ನಡೆದ 2026-27ನೇ ಸಾಲಿನ ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ನೂತನ ಅಧ್ಯಕ್ಷರಾಗಿ ರೊ. ಯೋಗೀಶ್ ಸಹ್ಯಾದ್ರಿ ಮತ್ತು ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಕಾರ್ಯದರ್ಶಿಯಾಗಿ ರೊ. ಮಂಜುನಾಥ್ ಕೆ ಜಿ ಇವರು ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು ಯುದ್ಧದ ವಾತಾವರಣ ಜಗತ್ತನ್ನು ತಲ್ಲಣಗೊಳಿಸಿದೆ. ಯುದ್ಧಗಳು ಹಿಂದಿನಿಂದಲೂ ನಡೆಯುತ್ತಲೇ ಬಂದಿರುವುದು ಇತಿಹಾಸ. ಹೊನ್ನು-ಹೆಣ್ಣು-ಮಣ್ಣಿಗಾಗಿ ಹಿಂದೆ ರಾಜರುಗಳು ಯುದ್ಧ ಮಾಡುತ್ತಿದ್ದರು.

 

ಸಾಮ್ರಾಜ್ಯವಿಸ್ತರಣೆಗೆ ಯುದ್ಧಗಳಾದವು. ಸ್ತುತ ಲಾಭಕ್ಕಾಗಿ ಪಡೆದುಕೊಳ್ಳಲು-ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಯುದ್ಧ ನಡೆಯುತ್ತಿರುವುದು ಕಾಣುತ್ತಿದ್ದೇವೆ. ಇದರ ಪರಿಣಾಮ ಎಲ್ಲೆಡೆ ವ್ಯಾಪಕವಾಗಿದೆ. ಶಾಂತಿಯುತವಾದ ವಾತಾವರಣ ಕದಡಿದೆ. ಇಂತಹ ಪರಿಸ್ಥಿತಿಯಲ್ಲಿ ಜಗತ್ತಿನ ಶಾಂತಿ ಮುಖ್ಯ ಅಂತರರಾಷ್ಟ್ರೀಯ ರೋಟರಿಸಂಸ್ಥೆ 5003 ಶತಮಾನಗಳಿಂದ ವಿಶ್ವದಲ್ಲಿ ಹಿನ್ನಲೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ಪರಿಸರ ಸಂರಕ್ಷಣೆಗೂ ರೋಟರಿ ಆದ್ಯತೆ ನೀಡಿದೆ. ಜೊತೆಗೆ ಜನಸಂಖ್ಯೆ ಸ್ಫೋಟ ಸ್ವಾರ್ಥಕ್ಕಾಗಿ ನಿರಂತರವಾಗಿ ನಿರಂತರವಾಗಿ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಅಭಿವೃದ್ಧಿಯೋಜನೆಗಳ ನೆಪದಲ್ಲಿ ಕಟ್ಟಡ, ರಸ್ತೆ, ಅಣೆಕಟ್ಟೆಗಾಗಿ ವಿಪರೀತ ಅರಣ್ಯನಾಶವಾಗಿದೆ. ಗಣಿಗಾರಿಕೆ ಬೆಟ್ಟ ಗುಡ್ಡಗಳನ್ನೂ ಉರುಳಿಸಿದೆ. ಹರಿಯುವ ನೀರನ್ನು ಇವೆಲ್ಲದರ ತಾಪಮಾನ ಕಲುಷಿತಗೊಳಿಸಿದ್ದೇವೆ. ಪರಿಣಾಮ ವಿಪರೀತವಾಗಿ ಜಾಗತಿಕ ಹೆಚ್ಚಿ ಆತಂಕದಾಯಕ 43 ನಿರ್ಮಾಣ ಮಾಡಿದೆ.

ಗಿಡಮರಗಳನ್ನು ಬೆಳೆಸುವುದರ ಜೊತೆಗೆ ಪರಿಸರದ ಸಂರಕ್ಷಣೆ, ನೀರಿನ ಹಿತಮಿತವಾದ ಬಳಕೆಯನ್ನು ರೋಟರಿ ಪ್ರೋತ್ಸಾಹಿಸುತ್ತಲೇ ಬಂದಿದೆ ಎಂದವರು ವಿವರಿಸಿ  ಹೊಸಚಿಗುರು ಹಳೆಬೇರು ಕೂಡಿರುವ ಮರ ಸೊಬಗು ಎಂಬಂತೆ ರೋಟರಿಯಲ್ಲಿ ಯುವಕರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಹಿರಿಯರು ಮಾರ್ಗದರ್ಶನ ನೀಡುತ್ತಿದ್ದು ಸಮಾಜಮುಖಿ ಸೇವೆ ಕಾವ್ಯಗಳಲ್ಲಿ ಮತ್ತು ಸಕ್ರಿಯವಾಗಿ ಗೊತ್ತಾಗುತ್ತದೆ. ನಿಸ್ವಾರ್ಥವಾದ ಸೇವೆಯಲ್ಲಿ ಸಂತೃಪ್ತಿ ಸಿಗುತ್ತದೆ. ಹೆಚ್ಚೆಚ್ಚು ವೃತ್ತಿಪರರು ರೋಟರಿ ಆಂದೋಲನವನ್ನು ಸೇರಿ ಮಾಡುವಂತಾಗಬೇಕೆಂದು ನೀಡಿದರು.

ಸಾಧನೆ ಮಾಡಲು ನಾಲ್ಕು ಮಂತ್ರಗಳಾದ ಪರಿಶ್ರಮ, ತಾಳ್ಮೆ, ನಿರಂತರ ಕಲಿಕೆ, ಒಳ್ಳೆಯ ಕನಸುಕಾಣುವುದು ಮುಖ್ಯವಾಗಿದೆ. ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ಜನತೆಗೆ ಅನುಕೂಲಕರವಾದ ಸೇವಾ ಕೇಂದ್ರವನ್ನು ನಿರ್ಮಾಣ ಮಾಡಿ ಜನತೆಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡುತ್ತಿದೆ, ಇದರೊಂದಿಗೆ ಅನೇಕ ಜನಪರ ಕಾರಯೋಜನೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.  ರೋಟರಿ ಫೌಂಡೇಶನ ಮೂಲಕ ಆರ್ಥಿಕ ನೆರವು ಸೇವಾಕಾರಗಳಿಗೆ ನೀಡಲಾಗುತ್ತಿದೆ. ಕ್ಲಬ್ ನೀಡಿದ ಕೊಡುಗೆಗೆ ದುಪ್ಪಟ್ಟು ಹಣ ಸೇವಾಯೋಜನೆಗಳಿಗೆ ವಾಪಾಸ್ಸು ಬರುತ್ತಿದೆ  ಇಲ್ಲಿಯ ಸದಸ್ಯರು ಅಂತರರಾಷ್ಟ್ರೀಯ ರೋಟರಿಗೆ ಕೊಡುಗೆ ನೀಡಿದ್ದಾರೆ.  ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾವ್ಯಗಳನ್ನು ನಿರೀಕ್ಷಿಸುವುದಾಗಿ ನುಡಿದರು.

ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ರೊ. ಯೋಗೀಶ್ ಸಹ್ಯಾದ್ರಿ ಇವರು, ಚಿತ್ರದುರ್ಗ ರೋಟರಿ ಕ್ಲಬ್ ನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಹೆಮ್ಮೆ ಇದೆ. ಕಿರಿಯವಯಸ್ಸಿನ ತಮಗೆ ಹಿರಿಯರೆಲ್ಲಾ ಸೇರಿ ದೊಡ್ಡ ಹೊಣೆಗಾರಿಕೆ ನೀಡಿರುವುದು ಸಂತೋಷದ ರೋಟರಿ ಅಪೇಕ್ಷೆಯಂತೆ ಪದಾಧಿಕಾರಿಗಳು ಮತ್ತು ಸದಸ್ಯರ ಸಲಹೆ-ಸಂಗತಿ, ಎಲ್ಲರ ಸಹಕಾರ ಪಡೆದು ಉತ್ತಮ ಕಾರ್ಯಚಟುವಟಿ ಹಮ್ಮಿಕೊಳ್ಳಲಾಗುವುದು. ಸಮಾಜ ಸೇವೆ ಮಾಡುವ ಅವಕಾಶ ಕೇವಲ ಕೆಲವು ವ್ಯಕ್ತಿಗಳಿಗೆ ದೊರೆಯುತ್ತದೆ. ಎಲ್ಲ ಕ್ಷೇತ್ರಗಳಲ್ಲಿಯೂ ಪ್ರತಿಯೊಬ್ಬರಿಗೂ ಸಾಧನೆ ಮಾಡುವ ಅವಕಾಶ ಇದೆ. ರೋಟರಿ ಅಧ್ಯಕ್ಷರಾಗಿ ನಾನು ಚಿತ್ರದುರ್ಗ ಜಿಲ್ಲೆಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವ ಹಂಬಲವಿದೆ. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ, ಮಹಿಳೆಯರ ಉನ್ನತಿಗಾಗಿ ಶ್ರಮಿಸುವ ಕಾರ್ಯಚಟುವಟಿಕೆಗಳನ್ನು ರೂಪಿಸುತ್ತೇನೆ.ಚಿತ್ರದುರ್ಗ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ರೋಟರಿ ಕ್ಲಬ್ ಮೂಲಕ ಸಹಕರಿಸುವುದಾಗಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರೋ.ಐಪಿಡಿಜಿ ಎಂ.ಕೆ.ರವೀಂದ್ರ, ರೋ. ಪಿಡಿಜಿ ಕೆ.ಮಧುಪ್ರಸಾದ್ ಹಾಲಿ ಅಧ್ಯಕ್ಷರಾದ ರೋ.ಎ.ಎಂ. ಭಾಗ್ಯಲಕ್ಷ್ಮೀ, ಕಾರ್ಯದರ್ಶಿ ರೋ. ಜಿ.ವಿ.ಅನುರಾಧ ಭಾಗವಹಿಸಿದ್ದರು, ಕ್ಲಬ್ ಬುಲೆಟಿನ್‍ನ್ನು ರೋ. ಪಿ.ಎಚ್.ಎಫ್. ಸವಿತಾ ಶಿವಕುಮಾರ್ ನಡೆಸಿಕೊಟ್ಟರು. ವಿಶ್ವನಾಥ್, ಮಾಧುರಿ ಮಧುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now