Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿಂಬೆ ಸಿಪ್ಪೆಯಿಂದ ಹೀಗೆ ಮಾಡಿದರೆ ಮೊಣಕೈ, ಮೊಣಕಾಲುಗಳ ಕಪ್ಪು ಕಲೆ ಚಿಟಿಕೆಯಲ್ಲಿ ಮಾಯ!

---Advertisement---

ಅದೆಷ್ಟೋ ಜನರ ಮನೆಯಲ್ಲಿ ನಿಂಬೆರಸ ಹಿಂಡಿದ ನಂತರ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಆದರೆ ಆ ನಿಂಬೆ ಸಿಪ್ಪೆಯಲ್ಲಿ ಅದ್ಭುತವಾದ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಅಡಗಿದೆ ಎಂಬ ವಿಷಯ ನಿಮಗೆ ಗೊತ್ತೇ? ಮುಖ್ಯವಾಗಿ ಮಹಿಳೆಯರನ್ನು ಕಾಡುವ ಮೊಣಕೈ, ಮೊಣಕಾಲು ಮತ್ತು ಪಾದಗಳ ಭಾಗದಲ್ಲಿರುವ ಕಪ್ಪು ಕಲೆಗಳನ್ನು ನೈಸರ್ಗಿಕವಾಗಿ ಹೋಗಲಾಡಿಸಲು ಈ ನಿಂಬೆ ಸಿಪ್ಪೆಗಳು ರಾಮಬಾಣವಾಗಿ ಕೆಲಸ ಮಾಡುತ್ತವೆ.

ಈ ಕಪ್ಪು ಕಲೆಯನ್ನು ಹೋಗಲಾಡಿಸಲು ಮನೆಯಲ್ಲೇ ಒಂದು ರೂಪಾಯಿ ಕೂಡ ಖರ್ಚಿಲ್ಲದೆ ಈ ಸುಲಭವಾದ ಹೋಮ್ ರೆಮಿಡಿಯನ್ನು ಹೇಗೆ ಮಾಡಬಹುದು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಮೊಣಕೈ ಮತ್ತು ಮೊಣಕಾಲುಗಳ ಮೇಲಿರುವ ಹಠಾತ್ ಕಪ್ಪು ಕಲೆ ಹಾಗೂ ಸಂಗ್ರಹವಾಗಿರುವ ಕೊಳೆಯನ್ನು ಹೋಗಲಾಡಿಸಲು ನಿಂಬೆ ಸಿಪ್ಪೆಯಿಂದ ಒಂದು ಪವರ್‌ ಫುಲ್ ಸ್ಕ್ರಬ್ ತಯಾರಿಸಬಹುದು. ಇದಕ್ಕೆ ಬೇಕಾಗಿರುವುದು ಕೇವಲ ಮೂರೇ ವಸ್ತುಗಳು.
ಬಳಸಿದ ನಿಂಬೆಹಣ್ಣಿನ ಸಿಪ್ಪೆ

ಸ್ವಲ್ಪ ಸಕ್ಕರೆ

ಒಂದು ಚಿಟಿಕೆ ಅಡಿಗೆ ಸೋಡಾ (ಬೇಕಿಂಗ್ ಸೋಡಾ)

ಬಳಸುವುದು ಹೇಗೆ?

ಹಂತ 1: ರಸ ಹಿಂಡಿದ ನಿಂಬೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಳ್ಳಿ. ಅದರ ಒಳಗಿನ ಭಾಗಕ್ಕೆ ಸ್ವಲ್ಪ ಸಕ್ಕರೆ ಕಾಳುಗಳು ಮತ್ತು ಒಂದು ಚಿಟಿಕೆ ಅಡಿಗೆ ಸೋಡಾವನ್ನು ಹಾಕಿ.

ಹಂತ 2: ಈಗ ಆ ಸಿಪ್ಪೆಯನ್ನು ನಿಮ್ಮ ಮೊಣಕೈ, ಮೊಣಕಾಲು ಅಥವಾ ಕಪ್ಪಾಗಿರುವ ಚರ್ಮದ ಭಾಗಗಳ ಮೇಲೆ ಇಟ್ಟು ಚೆನ್ನಾಗಿ ಉಜ್ಜಿ.

ಹಂತ 3: ಹೀಗೆ ಸತತವಾಗಿ 1 ರಿಂದ 2 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡುತ್ತಾ ಉಜ್ಜಬೇಕು.

ಹಂತ 4: ಉಜ್ಜಿದ ನಂತರ ಆ ಮಿಶ್ರಣವನ್ನು ಚರ್ಮದ ಮೇಲೆ ಕನಿಷ್ಠ ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ ಹಾಗೆಯೇ ಬಿಡಿ. ಅದು ಒಣಗಿದ ನಂತರ ಸಾಮಾನ್ಯ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ.

ಇದು ಹೇಗೆ ಕೆಲಸ ಮಾಡುತ್ತದೆ?

ಬ್ಯೂಟಿ ಎಕ್ಸ್‌ ಪರ್ಟ್ ತಿಳಿಸಿರುವ ಪ್ರಕಾರ, ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್‌ ಗಳ ಜೊತೆಗೆ ಫೋಲಿಕ್ ಆಸಿಡ್ ಹೇರಳವಾಗಿದೆ. ಇವು ಚರ್ಮದ ಮೇಲಿರುವ ಸತ್ತ ಜೀವಕೋಶಗಳನ್ನು (Dead Cells) ಬಹಳ ಸುಲಭವಾಗಿ ನಿವಾರಿಸುತ್ತವೆ. ಮತ್ತೊಂದೆಡೆ, ಅಡಿಗೆ ಸೋಡಾ ಚರ್ಮದ ಆಳದಲ್ಲಿ ಅಡಗಿರುವ ಕೊಳೆಯನ್ನು ಹೊರತೆಗೆಯಲು ಸಹಾಯ ಮಾಡಿದರೆ, ಸಕ್ಕರೆ ಕಾಳುಗಳು ಉತ್ತಮ ನೈಸರ್ಗಿಕ ಸ್ಕ್ರಬರ್ ಆಗಿ ಕೆಲಸ ಮಾಡುತ್ತವೆ. ಈ ಮೂರು ಸೇರಿದಾಗ ಎಂತಹ ಹಠಾತ್ ಕಪ್ಪು ಕಲೆಯೂ ಮಾಯವಾಗುತ್ತದೆ.

ಈ ಮನೆಮದ್ದನ್ನು ದಿನಕ್ಕೆ ಎರಡು ಬಾರಿ ನಿಯಮಿತವಾಗಿ ಪಾಲಿಸಿದರೆ, ಕೇವಲ ಒಂದು ವಾರದಲ್ಲೇ ನೀವು ಬದಲಾವಣೆಯನ್ನು ಗಮನಿಸಬಹುದು. ಕೇವಲ ಒಂದು ತಿಂಗಳಲ್ಲಿ ಚರ್ಮವು ಸಂಪೂರ್ಣವಾಗಿ ಕ್ಲಿಯರ್ ಆಗಿ, ಕಾಂತಿಯುತವಾಗಿ ಬದಲಾಗುತ್ತದೆ. ಸಾವಿರಾರು ರೂಪಾಯಿಗಳ ಕೆಮಿಕಲ್ ಕ್ರೀಮ್‌ಗಳು ನೀಡದ ರಿಸಲ್ಟ್ ಅನ್ನು ಈ ಪುಟ್ಟ ಅಡುಗೆಮನೆಯ ಟಿಪ್ಸ್ ನೀಡುತ್ತದೆ.

ಸೂಕ್ಷ್ಮ ಚರ್ಮ ಹೊಂದಿರುವವರು ಅಡಿಗೆ ಸೋಡಾವನ್ನು ಮುಖದ ಮೇಲೆ ನೇರವಾಗಿ ಬಳಸಬಾರದು. ಆದರೆ ಮೊಣಕೈ ಮತ್ತು ಮೊಣಕಾಲುಗಳ ಚರ್ಮವು ಕೊಂಚ ದಪ್ಪ ಇರುವುದರಿಂದ, ಅಲ್ಲಿ ಈ ವಿಧಾನವು ಅದ್ಭುತವಾಗಿ ಕೆಲಸ ಮಾಡುತ್ತದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now