Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರಿನ ಬಿದರಿಕೆರೆ ಗ್ರಾಮದಲ್ಲಿ ಅಪರೂಪದ ಘಟನೆ : ಒಟ್ಟಿಗೆ 4 ಮರಿಗಳಿಗೆ ಜನ್ಮ ನೀಡಿದ ಮೇಕೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಿತ್ರದುರ್ಗ, ಜುಲೈ. 05 : ಮೇಕೆಯೊಂದು ನಾಲ್ಕು ಮರಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಿದರಿಕೆರೆ ಗ್ರಾಮದಲ್ಲಿ ನಡೆದಿದೆ.

ಬಿದರಿಕೆರೆ ಗ್ರಾಮದ ರೈತರಾದ ಆದರ್ಶ ಎಂಬುವವರು ಮೇಕೆ ಸಾಕಾಣಿಕೆಯನ್ನು ಕಸುಬನ್ನಾಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂದು ಅವರು ಸಾಕಿದ್ದ ಮೇಕೆಯು ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ಪ್ರಸ್ತುತ ನಾಲ್ಕೂ ಮರಿಗಳು ಹಾಗೂ ತಾಯಿ ಮೇಕೆ ಸಂಪೂರ್ಣ ಆರೋಗ್ಯವಾಗಿವೆ. ಸಾಮಾನ್ಯವಾಗಿ ಮೇಕೆಗಳು ಒಂದೋ ಎರಡೋ ಮರಿಗಳಿಗೆ ಜನ್ಮ ನೀಡುವುದು ವಾಡಿಕೆ. ಆದರೆ, ಇಲ್ಲಿ ಒಮ್ಮೆಗೆ ನಾಲ್ಕು ಮರಿಗಳು ಹುಟ್ಟಿರುವುದು ಆಶ್ಚರ್ಯ ಮೂಡಿಸಿದೆ.

ನಮ್ಮ ಮೇಕೆ ಒಟ್ಟಿಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿರುವುದು ತುಂಬಾ ಸಂತೋಷ ಮತ್ತು ಅಚ್ಚರಿ ಮೂಡಿಸಿದೆ. ಆದರೆ, ನಾಲ್ಕು ಮರಿಗಳು ಒಟ್ಟಿಗೆ ಇರುವುದರಿಂದ ತಾಯಿ ಮೇಕೆಗೆ ಎಲ್ಲದಕ್ಕೂ ಸಮನಾಗಿ ಹಾಲು ಉಣಿಸುವುದು ಕೊಂಚ ಕಷ್ಟವಾಗುತ್ತಿದೆ. ಹೀಗಾಗಿ ಸದ್ಯಕ್ಕೆ ಬೇರೆ ಮೇಕೆಗಳಿಂದ ಈ ಮರಿಗಳಿಗೆ ಹಾಲು ಕುಡಿಸಿ ಆರೈಕೆ ಮಾಡುತ್ತಿದ್ದೇವೆ ಎಂದು ರೈತ ಆದರ್ಶ ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now