ಮೈಸೂರು, ದಾವಣಗೆರೆ, ಜುಲೈ. 04 : ಪಿಎಂಎಜೆಎವೈ ಯೋಜನೆಯಡಿ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ, ಪರಿಶಿಷ್ಠ ಜಾತಿಯ ಅಭ್ಯರ್ಥಿಗಳಿಗೆ ಸಿಪೆಟ್ ಮೈಸೂರು ಸಂಸ್ಥೆಯಲ್ಲಿ ಸಹಾಯಕ ಮೆಷಿನ್ ಆಪರೇಟರ್ ಪ್ಲಾಸ್ಟಿಕ್ಸ್ ಪ್ರೊಸೆಸಿಂಗ್ ಮತ್ತು ಸಹಾಯಕ ಮೆಷಿನ್ ಆಪರೇಟರ್ – ಇಂಜೆಕ್ಷನ್ ಮೌಲ್ದಿಂಗ್ ವಿಷಯಗಳಲ್ಲಿ 3 ತಿಂಗಳ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಉಚಿತ ಆಹಾರ ಹಾಗೂ ವಸತಿ ಸೌಲಭ್ಯ ನೀಡಲಾಗುವುದು. ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇಪದವಿಯನ್ನು ಹೊಂದಿರಬೇಕು. ತರಬೇತಿಯಿ ಜುಲೈ 6 ರಿಂದ ಪ್ರಾರಂಭವಾಗಲಿದೆ. ಈ ತರಬೇತಿಗೆ ದಾಖಲಾದ ಪ್ರತಿಯೊಬ್ಬ ವಿದ್ಯಾರ್ಥಿಗೂ ಕ್ಯಾಂಪಸ್ ನೇಮಕಾತಿಯ ಮೂಲಕ ಉದ್ಯೋಗಾವಕಾಶದ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಿಪಿಟ್, ಸಿಎಸ್‌ಟಿಎಸ್, ಮೈಸೂರು 437/0, ಹೆಬ್ಬಾಳ ಕೈಗಾರಿಕಾ ಪ್ರದೇಶ, ಮೈಸೂರು-570016 ದೂರವಾಣಿ: 9483431968, 9739196375 ವೆಬ್‌ಸೈಟ್: www.cipet.gov.in.ನ್ನು ಸಂಪರ್ಕಿಸಬಹುದೆಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.


















