ಅಜವಾನ (ಓಮದ ಕಾಳು) ಎಲೆಗಳನ್ನು ಹೆಚ್ಚಿನವರು ಕೇವಲ ಮನೆಯ ಗಿಡವಾಗಿ ಅಥವಾ ಸಂಜೆ ವೇಳೆ ಬಜ್ಜಿ, ಪಕೋಡಾ ಮಾಡಲು ಮಾತ್ರ ಬಳಸುತ್ತಾರೆ. ಆದರೆ, ಈ ಎಲೆಗಳಲ್ಲಿ ಅಡಗಿರುವ ಅದ್ಭುತ ಆರೋಗ್ಯ ಗುಣಗಳ ಬಗ್ಗೆ ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ಕೇವಲ ಮಳೆಗಾಲದ ಸ್ನ್ಯಾಕ್ಸ್ ಆಗಿ ಮಾತ್ರವಲ್ಲದೆ, ದೇಹದ ಹಲವು ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ.
ಜೀರ್ಣಕ್ರಿಯೆಗೆ ಉತ್ತಮ:
ಅಜವಾನ ಎಲೆಗಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರಣದಿಂದಲೇ ಅನೇಕರು ಊಟವಾದ ನಂತರ ಇದರ ಎಲೆಗಳನ್ನು ಅಗಿದು ತಿನ್ನುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇದು ಗ್ಯಾಸ್ ಹಾಗೂ ಹೊಟ್ಟೆಯ ಉಬ್ಬರವನ್ನು ಕಡಿಮೆ ಮಾಡುತ್ತದೆ.
ಮಲಬದ್ಧತೆ ನಿವಾರಣೆ:
ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುವ ಮಲಬದ್ಧತೆ (Constipation) ಸಮಸ್ಯೆಗೆ ಅಜವಾನ ಎಲೆಗಳು ಉತ್ತಮ ಪರಿಹಾರ ನೀಡುತ್ತವೆ. ಮಲಬದ್ಧತೆಯಿಂದ ಬಳಲುತ್ತಿರುವವರು ಈ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆದರೆ, ಇದನ್ನು ಮಿತವಾಗಿ ಸೇವಿಸುವುದು ಮುಖ್ಯ.
ಕೆಮ್ಮು ಮತ್ತು ಶೀತಕ್ಕೆ ಕಷಾಯ:
ಹಿಂದಿನ ಕಾಲದಿಂದಲೂ ಅಜವಾನ ಎಲೆಗಳನ್ನು ಕಷಾಯ ರೂಪದಲ್ಲಿ ಬಳಸುವ ಸಂಪ್ರದಾಯವಿದೆ. ಇದರ ಎಲೆಗಳಿಂದ ಮಾಡಿದ ಬಿಸಿ ಕಷಾಯ ಅಥವಾ ಟೀ ಕುಡಿಯುವುದರಿಂದ ಗಂಟಲು ನೋವು, ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಶೀಘ್ರವಾಗಿ ನಿವಾರಣೆಯಾಗುತ್ತವೆ.


















