Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿರಿಗೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಒಲಂಪಿಯಾಡ್ ಪರೀಕ್ಷೆಯ ಪ್ರಮಾಣಪತ್ರ ವಿತರಣೆ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಜು. 03 : ಸಿರಿಗೆರೆ ಯೋಜನಾ ಕಛೇರಿ, ಚಿತ್ರದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಸಿರಿಗೆರೆ ಯೋಜನಾ ಕಛೇರಿ ವತಿಯಿಂದ 2025-26 ನೇ ಸಾಲಿನ 6.0 ಓಲಂಪಿಯಾಡ್ ಪರೀಕ್ಷೆ 3 ರಿಂದ 12 ನೇ ತರಗತಿಯ ಮಕ್ಕಳಿಗೆ ಪರೀಕ್ಷೆ ಬರೆಸಿದ್ದು, ಶೇ.70% ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಸಿರಿಗೆರೆ ಯೋಜನಾ ಕಛೇರಿ ವತಿಯಿಂದ ವಿತರಿಸಲಾಯಿತು.

ಪ್ರಾದೇಶಿಕ ಕಛೇರಿಯ ಸಿ.ಎಸ್.ಸಿ. ಯೋಜನಾಧಿಕಾರಿಗಳಾದ ವಿಶ್ವೇಶ್‍ರವರು ಓಲಂಪಿಯಾಡ್ ಪರೀಕ್ಷೆ ನೊಂದಾವಣೆ ಮಾಡುವುದರ ಬಗ್ಗೆ ಮತ್ತು ಔಟಿಟiಟಿe exಚಿm ಬರೆಸುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಚಿತ್ರದುರ್ಗ ಜಿಲ್ಲಾ ನಿರ್ದೇಶಕರಾದ  ಕಮಲಾಕ್ಷ ರವರು ವಿದ್ಯಾರ್ಥಿಗಳಿಗೆ ಓಲಂಪಿಯಾಡ್ 6.0 ಪ್ರಮಾಣ ಪತ್ರ ವಿತರಣೆ ಮಾಡಿದರು.

ಈ ಸಂದರ್ಭ ಪ್ರಾದೇಶಿಕ ಕಛೇರಿಯ ಯೋಜನಾಧಿಕಾರಿ ಸುರೇಂದ್ರ, ಬಿ.ಸಿ.ಸಿರಿಗೆರೆ ಯೋಜನಾ ಕಛೇರಿಯ ಕ್ಷೇತ್ರ ಯೋಜನಾಧಿಕಾರಿ ರಘುಪತಿ ಜಿ, ಹಣಕಾಸು ಪ್ರಬಂಧಕ ರವಿ .ಟಿ, ತಾಲೂಕು ನೋಡೆಲ್ ಅಧಿಕಾರಿ, ಹಾಲೇಶ್ ಎಂ. ಆರ್. ಯೋಜನಾ ಕಚೇರಿ ಹಾಗೂ ಸಿ.ಎಸ್.ಸಿ. ಸೇವಾದಾರರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now