Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕರಾಮುವಿ ಪ್ರವೇಶಾತಿ ಆರಂಭ: ವಿವಿಧ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

---Advertisement---

ಸುದ್ದಿಒನ್, ಚಿತ್ರದುರ್ಗ, ಜು.02: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆ.ಎಸ್.ಒ.ಯು.) 2026-27ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.

 

ಪ್ರಥಮ ವರ್ಷದ ಕಲಾ ಪದವಿ (ಬಿ.ಎ), ವಾಣಿಜ್ಯಶಾಸ್ತ್ರ ಪದವಿ (ಬಿ.ಕಾಂ), ವಿಜ್ಞಾನ ಪದವಿ (ಬಿ.ಎಸ್ಸಿ), ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವಿ (ಬಿ.ಲಿಬ್.ಐ.ಎಸ್ಸಿ), ಗಣಕ ಅನ್ವಯಿಕ ಪದವಿ (ಬಿಸಿಎ), ವ್ಯವಹಾರ ಆಡಳಿತ ಪದವಿ (ಬಿಬಿಎ), ಸಮಾಜ ಕಾರ್ಯ ಪದವಿ (ಬಿ.ಎಸ್.ಡಬ್ಲ್ಯೂ) ಹಾಗೂ ಸ್ನಾತಕೋತ್ತರ ಪದವಿಗಳಾದ ಕಲಾ ಸ್ನಾತಕೋತ್ತರ (ಎಂ.ಎ), ವಾಣಿಜ್ಯಶಾಸ್ತ್ರ ಸ್ನಾತಕೋತ್ತರ (ಎಂ.ಕಾಂ), ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ (ಎಂ.ಎ-ಎಂ.ಸಿ.ಜೆ), ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸ್ನಾತಕೋತ್ತರ (ಎಂ.ಲಿಬ್.ಐ.ಎಸ್ಸಿ), ವ್ಯವಹಾರ ಆಡಳಿತ ಸ್ನಾತಕೋತ್ತರ (ಎಂಬಿಎ), ವಿಜ್ಞಾನ ಸ್ನಾತಕೋತ್ತರ (ಎಂ.ಎಸ್ಸಿ), ಗಣಕ ಅನ್ವಯಿಕ ಸ್ನಾತಕೋತ್ತರ (ಎಂಸಿಎ), ಸಮಾಜ ಕಾರ್ಯ ಸ್ನಾತಕೋತ್ತರ (ಎಂ.ಎಸ್.ಡಬ್ಲ್ಯೂ) ಕೋರ್ಸ್‌ಗಳು ಸೇರಿದಂತೆ ವಿವಿಧ ಪಿಜಿ ಡಿಪ್ಲೋಮಾ, ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ಆನ್‌ಲೈನ್ ಅಡ್ಮಿಷನ್ ಪೋರ್ಟಲ್ https://ksouportal.com/views/StudentHome.aspx ನಲ್ಲಿ ಆನ್‌ಲೈನ್ ಮೂಲಕ ಪ್ರವೇಶಾತಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.

ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ, ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ, ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ, ಕೆ.ಎಸ್.ಆರ್.ಟಿ.ಸಿ. ನೌಕರರುಗಳಿಗೆ ನಿಯಮಾನುಸಾರ ಬೋಧನಾ ಶುಲ್ಕದಲ್ಲಿ ರಿಯಾಯಿತಿ ಇರುತ್ತದೆ.ಕೋವಿಡ್-19 ರಿಂದ ಮೃತಪಟ್ಟವರ ಮಕ್ಕಳಿಗೆ, ತೃತೀಯ ಲಿಂಗಿಗಳಿಗೆ ಹಾಗೂ ಶೇಕಡ 50ಕ್ಕೂ ಹೆಚ್ಚಿನ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ (ಬಿ.ಇಡಿ ಮತ್ತು ಎಂಬಿಎ ಕೋರ್ಸ್‌ಗಳನ್ನು ಹೊರತುಪಡಿಸಿ) ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ವಿದ್ಯಾರ್ಥಿಗಳು ಏಕಕಾಲದಲ್ಲಿ  ರೆಗ್ಯುಲರ್ ಹಾಗೂ ದೂರಶಿಕ್ಷಣ ಕ್ರಮದಲ್ಲಿ ಕೋರ್ಸ್ ಕಲಿಯಲು ಅವಕಾಶವಿದೆ.

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಧಿಕೃತ ವೆಬ್‌ಸೈಟ್: www.ksoumysuru.ac.in ಮೊಬೈಲ್ ಸಂಖ್ಯೆಗಳಾದ 9738014893, 7204352581, 9008905457, 8310111244, 9972499704, 7090762378 ಕರೆ ಮಾಡಬಹದು. ಪ್ರಾದೇಶಿಕ  ಕಚೇರಿಯನ್ನು ಸಂಪರ್ಕಿಸುವುದು ಎಂದು ಚಿತ್ರದುರ್ಗ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಕೆ.ಪಿ. ಮಹಾಲಿಂಗಯ್ಯ ಅವರು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now