Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ಸಾರಿಗೆ ಸಿಬ್ಬಂದಿಗೆ ಬಂಪರ್ ಗಿಫ್ಟ್; ನಾಲ್ಕೂ ನಿಗಮಗಳ ನೌಕರರ ಮೂಲ ವೇತನ ಶೇ. 12.5 ಹೆಚ್ಚಳ!

---Advertisement---

ಬೆಂಗಳೂರು.ಜುಲೈ.02: ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಸಿಹಿಸುದ್ದಿ ನೀಡಿದ್ದು. ಕೆಎಸ್‌ ಆರ್‌ ಟಿಸಿ, ಬಿಎಂಟಿಸಿ, ಎನ್‌ ಡಬ್ಲ್ಯುಕೆಆರ್‌ ಟಿಸಿ ಹಾಗೂ ಕೆಕೆಆರ್‌ ಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಸಿಬ್ಬಂದಿಯ ಮೂಲ ವೇತನವನ್ನು ಶೇ. 12.5 ರಷ್ಟು ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ವಿಶೇಷವೆಂದರೆ, ಈ ಪರಿಷ್ಕೃತ ವೇತನವು 2025ರ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗಲಿದ್ದು, ಈ ಜುಲೈ ತಿಂಗಳ ಸಂಬಳದಲ್ಲೇ ನೌಕರರ ಕೈಸೇರಲಿದೆ. ಇಷ್ಟು ದಿನ ಬಾಕಿ ಉಳಿದಿದ್ದ ವೇತನದ ಹಿಂಬಾಕಿಯ (Arrears) ಮೊದಲ ಕಂತಿನ ಹಣವನ್ನು ಸಹ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ.

ಮಾಜಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಅವಧಿಯಲ್ಲಿ ಈ ವೇತನ ಹೆಚ್ಚಳಕ್ಕೆ ಚಾಲನೆ ಸಿಕ್ಕಿತ್ತು, ಇದೀಗ ಅದು ಅಧಿಕೃತವಾಗಿ ಜಾರಿಗೆ ಬಂದಿದೆ. ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಸುಮಾರು 1.05 ಲಕ್ಷ ಸಾರಿಗೆ ನೌಕರರು ಆರ್ಥಿಕ ಲಾಭ ಪಡೆಯಲಿದ್ದಾರೆ. ನೌಕರರ ಹಿತದೃಷ್ಟಿಯಿಂದ ಕೈಗೊಂಡ ಈ ಕ್ರಮದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 72.80 ಕೋಟಿ ರೂ. ಹೊರೆ ಬೀಳಲಿದೆ. ಆದಾಗ್ಯೂ, ಸಾರಿಗೆ ನೌಕರರ ಹಿತರಕ್ಷಣೆಗಾಗಿ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಭಾರತದಲ್ಲಿ ಶೇ 72.8 ರಷ್ಟು ಪುರುಷರ ಆತ್ಮಹತ್ಯೆ: ಸದ್ದಿಲ್ಲದೆ ಆವರಿಸುತ್ತಿರುವ ಮಾನಸಿಕ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ತಜ್ಞರ ಆತಂಕ!

ಯುವ ಭಾರತೀಯರಲ್ಲಿ ಹೃದಯಾಘಾತಕ್ಕೆ ಲಸಿಕೆಯಲ್ಲ, ಧೂಮಪಾನ ಮತ್ತು ತೀವ್ರ ಕೋವಿಡ್‌ ಕಾರಣ: ICMR ಅಧ್ಯಯನ

ಬೆಂಗಳೂರು ಕಲ್ಲು ಕ್ವಾರಿ ದುರಂತದಲ್ಲಿ ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲಿ : ಕೇಂದ್ರ ಸಚಿವ ಹೆಚ್‌ ಡಿಕೆ ಒತ್ತಾಯ

ವಿಜ್ಞಾನ ಲೋಕದಲ್ಲಿ ಹೊಸ ಕ್ರಾಂತಿ; ಸ್ವತಃ ಆಹಾರ ಸೇವಿಸಿ, ಬೆಳೆದು, ಸಂತಾನೋತ್ಪತ್ತಿ ಮಾಡುವ ಕೃತಕ ಜೀವಕೋಶ ‘ಸ್ಪಡ್‌ಸೆಲ್’ ಸೃಷ್ಟಿ!

ಪೋಷಕರೇ ಗಮನಿಸಿ; ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್‌ ಡೇಟ್ ಕಡ್ಡಾಯ, ಸೆಪ್ಟೆಂಬರ್ 30ರವರೆಗೆ ಉಚಿತ ಅವಕಾಶ!

ರೇಣುಕಾಸ್ವಾಮಿ ಕೊಲೆ ಪ್ರಕರಣ :ನಟ ದರ್ಶನ್ ವಿರುದ್ಧ ಸಾಕ್ಷ್ಯ ಹೇಳದಂತೆ ಸಾಕ್ಷಿಗೆ ಬೆದರಿಕೆ ಹಾಕಿದ್ದ ಮೂವರ ಬಂಧನ!