Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ಮನೆ-ಮನೆ ಭೇಟಿ ಕಾರ್ಯ ಚುರುಕು

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 01: ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಬೊಮ್ಮಲಿಂಗನಹಳ್ಳಿ, ತಾಲ್ಲೂಕು ಕಚೇರಿ ಹಾಗೂ ಚಳ್ಳಕೆರೆ ತಾಲ್ಲೂಕು ಕಚೇರಿಗಳಿಗೆ ಬುಧವಾರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭೇಟಿ ನೀಡಿ, ಮತದಾರರ ಗಣತಿ ನಮೂನೆಗಳನ್ನು ವಿತರಿಸುತ್ತಿರುವ ಪ್ರಕ್ರಿಯೆ ಪರಿಶೀಲಿಸಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ( ಎಸ್ ಐ ಆರ್) -2026ರ ಅಂಗವಾಗಿ ಮನೆ-ಮನೆ ಭೇಟಿ ಕಾರ್ಯಕ್ರಮವು ಜೂನ್ 30ರಿಂದ ಆರಂಭಗೊಂಡಿದ್ದು, ಈ ಅಭಿಯಾನವು ಜುಲೈ 29ರವರೆಗೆ ನಡೆಯಲಿದೆ. ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಮನೆ-ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಜಿಲ್ಲೆಯ ಒಟ್ಟು 1,661 ಮತಗಟ್ಟೆ ಭಾಗಗಳಲ್ಲಿ 14,40,534 ಮತದಾರರಿದ್ದು, ಈ ಪೈಕಿ ಜುಲೈ 1ರಂದು ಒಟ್ಟು 1,64,428 ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಹಾಗೂ 14,809 ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ.

ವಿಧಾನಸಭಾ ಕ್ಷೇತ್ರವಾರು ಪ್ರಗತಿ ವಿವರ ಇಂತಿದೆ. ಮೊಳಕಾಲ್ಮುರು ಕ್ಷೇತ್ರದಲ್ಲಿ 30,413 ನಮೂನೆಗಳನ್ನು ವಿತರಿಸಿ 4,039 ಗಣಕೀಕರಣಗೊಳಿಸಲಾಗಿದ್ದು, 6 ಮರಣ, 3 ವಲಸೆ ಹಾಗೂ 1 ಡಬಲ್ ಎಂಟ್ರಿ ಪ್ರಕರಣಗಳು ದಾಖಲಾಗಿವೆ. ಚಳ್ಳಕೆರೆ ಕ್ಷೇತ್ರದಲ್ಲಿ 20,374 ನಮೂನೆಗಳನ್ನು ವಿತರಿಸಿ 1,459 ಗಣಕೀಕರಣಗೊಳಿಸಲಾಗಿದ್ದು, 4 ಮರಣ, 7 ವಲಸೆ ಹಾಗೂ 5 ಡಬಲ್ ಎಂಟ್ರಿ ಪತ್ತೆಯಾಗಿವೆ. ಚಿತ್ರದುರ್ಗ ಕ್ಷೇತ್ರದಲ್ಲಿ 50,947 ನಮೂನೆಗಳನ್ನು ವಿತರಿಸಿ 1,994 ಗಣಕೀಕರಣಗೊಳಿಸಲಾಗಿದ್ದು, 12 ಮರಣ ಹಾಗೂ 4 ವಲಸೆ ಪ್ರಕರಣಗಳು ಕಂಡುಬಂದಿವೆ. ಹಿರಿಯೂರು ಕ್ಷೇತ್ರದಲ್ಲಿ 22,793 ನಮೂನೆಗಳನ್ನು ವಿತರಿಸಿ 3,193 ಗಣಕೀಕರಣಗೊಳಿಸಲಾಗಿದ್ದು, 10 ಮರಣ, 3 ವಲಸೆ ಹಾಗೂ 3 ಡಬಲ್ ಎಂಟ್ರಿ ದಾಖಲಾಗಿವೆ. ಹೊಸದುರ್ಗ ಕ್ಷೇತ್ರದಲ್ಲಿ 15,875 ನಮೂನೆಗಳನ್ನು ವಿತರಿಸಿ 2,457 ಗಣಕೀಕರಣಗೊಳಿಸಲಾಗಿದ್ದು, 12 ಮರಣ, 18 ವಲಸೆ, 1 ಡಬಲ್ ಎಂಟ್ರಿ ಹಾಗೂ 2 ಗೈರುಹಾಜರಿ ಪ್ರಕರಣಗಳು ಕಂಡುಬಂದಿವೆ. ಹೊಳಲ್ಕೆರೆ ಕ್ಷೇತ್ರದಲ್ಲಿ 24,026 ನಮೂನೆಗಳನ್ನು ವಿತರಿಸಿ 1,667 ಗಣಕೀಕರಣಗೊಳಿಸಲಾಗಿದ್ದು, 14 ಮರಣ ಹಾಗೂ 4 ವಲಸೆ ಪ್ರಕರಣಗಳು ವರದಿಯಾಗಿವೆ.

ಜಿಲ್ಲೆಯಾದ್ಯಂತ ಈವರೆಗೆ ಒಟ್ಟು 58 ಮರಣ, 39 ಶಾಶ್ವತ ವಲಸೆ, 10 ಡಬಲ್ ಎಂಟ್ರಿ ಹಾಗೂ 2 ಗೈರುಹಾಜರಿ ಪ್ರಕರಣಗಳನ್ನು ಗುರುತಿಸಲಾಗಿದ್ದು, ಸಾರ್ವಜನಿಕರು ತಮ್ಮ ಮನೆಗೆ ಬರುವ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ನಿಖರ ಮಾಹಿತಿ ನೀಡಿ ಅರ್ಹ ಮತದಾರರ ಪಟ್ಟಿ ಸಿದ್ಧಪಡಿಸಲು ಸಹಕರಿಸಬೇಕು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಕೋರಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now